Advertisement
ಕೇವಲ 15 ನಿಮಿಷ ಸುರಿದ ಮಳೆಯಿಂದ ಇಲ್ಲಿನ ಚರಂಡಿ ನೀರು ಮನೆಯೊಳಗೆ ಹಾಗೂ ಮನೆ ಮುಂಭಾಗದಲ್ಲಿ ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿತ್ತು. ನಗರಸಭೆ ಅಧಿಕಾರಿಗಳು ಟೆಂಡರ್ ಕರೆಯಲಾಗಿದೆ. ಕೆಲಸ ಪ್ರಾರಂಭವಾಗುತ್ತದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಮಾತ್ರ ಹಾಗೆ ಇದೆ.
ಸಾರ್ವಜನಿಕರು ಆರೋಪಿಸಿದ್ದಾರೆ. 15 ದಿನಗಳ ಹಿಂದೆ ಶಾಸಕ ಬಸವರಾಜ ಮತ್ತಿಮೂಡ ಸ್ಥಳಕ್ಕೆ ಬೇಟಿ ನೀಡಿದಾಗ, ಸ್ಥಳೀಯ ನಿವಾಸಿಗಳು ಅವರೆದು ಮಳೆ ಬಂದಾಗೊಮ್ಮೆ ಚರಂಡಿ ನೀರು ಮನೆಯೊಳಗೆ ನುಗ್ಗುತ್ತಿದೆ ಎಂದು ತೊಂದರೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದರು. ಆಗ ಸ್ಥಳದಲ್ಲಿಯೇ ಇದ್ದ ಪೌರಾಯುಕ್ತ ಬಿ.ಬಸಪ್ಪ ಹಾಗೂ ಎಇಇ ರಿಯಾಜ್ ಮಹ್ಮದ್ ಅವರಿಗೆ ಮೂರು ದಿನಗೊಳಗಾಗಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಇಲ್ಲಿನ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದ್ದರು. ಆದರೆ ಒಂದು ಕಡೆ ತೆಗ್ಗು ಹೊಡೆದಿದ್ದು ಬಿಟ್ಟರೆ, 15 ದಿನಗಳಾದರೂ ಚರಂಡಿ ಕಾಮಗಾರಿ ಕೈಗೊಂಡಿಲ್ಲ.