Advertisement

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ

09:30 AM Aug 10, 2020 | Suhan S |

ಯಳಂದೂರು: ಕೋವಿಡ್‌ ಸಂಕಷ್ಟದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಪರಿಹಾರದ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಕನಿಷ್ಠ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಿಮ್ಮ ಸೇವೆ ರಾಜ್ಯಕ್ಕೆ ಅವಶ್ಯವಿದೆ. ಹೀಗಾಗಿ ಸೇವೆಯಲ್ಲಿದ್ದುಕೊಂಡೇ ಕಪ್ಪು ಮಾಸ್ಕ್ ಧರಿಸಿ ಅಥವಾ ಬೇರೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

Advertisement

ಸರ್ಕಾರ ಬೊಕ್ಕಸದಲ್ಲಿ ಹಣದ ಕೊರತೆ ಇದ್ದು, ಶಾಸಕರಿಗೆ ನೀಡಿದ್ದ 2 ಕೊಟಿ ಅನುದಾನವನ್ನೂ ವಾಪಸ್‌ ಪಡೆಯಲಾಗಿದೆ. ಲಾಕ್‌ಡೌನ್‌ನಿಂದ ರಾಜ್ಯಕ್ಕೆ ಶೇ.5ರಷ್ಟು ಮಾತ್ರ ಆದಾಯ ಬಂದಿದ್ದು, ಆರ್ಥಿಕ ಸಂಕಷ್ಟವಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದ್ದು. ಆಶಾ ಕಾರ್ಯಕರ್ತರ ಬೇಡಿಕೆಗಳೂ ಈಡೇರಲಿವೆ ಎಂದು ಭರವಸೆ ವ್ಯಕ್ತಪಡಿಸಿದರು. ಸಹಕಾರ ಬ್ಯಾಂಕ್‌, ಎಂಡಿಸಿಸಿ ಬ್ಯಾಂಕ್‌, ಚಾಮುಲ್‌ ಸೇರಿದಂತೆ ವಿವಿಧ ಸಹಕಾರ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಚೆಕ್‌ ವಿತರಿಸಲಾಯಿತು. ಚಾಮುಲ್‌ ಅಧ್ಯಕ್ಷ ನಾಗೇಂದ್ರ ಪ್ರಸಾದ್‌, ನಿರ್ದೇಶಕರಾದ ಕಿನಕಹಳ್ಳಿ ಮಾದಪ್ಪ, ವಿಕ್ರಂರಾಜೇ ಅರಸ್‌, ನಾಮನಿರ್ದೇಶಿತ ಸದಸ್ಯ ಶಶಿಕುಮಾರ್‌, ಡಿಸಿಸಿ ನಿರ್ದೇಶಕ ಜಯರಾಂ, ಸಹಕಾರ ಬ್ಯಾಂಕ್‌ನ ಎಂಡಿ ರಾಜಶೇಖರಮೂರ್ತಿ, ವ್ಯವಸ್ಥಾಪಕ ಸೋಮಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next