Advertisement

ಸಂಘ-ಸಂಸ್ಥೆಗಳ ಸೇವಾ ಮನೋಭಾವ ಶ್ಲಾಘನೀಯ: ಶಾಸಕ ಹರೀಶ್‌ ಪೂಂಜ

02:16 AM Jun 10, 2019 | sudhir |

ಪುಂಜಾಲಕಟ್ಟೆ: ಕುಡಾಲ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಬೆಳ್ತಂಗಡಿ, ಮಂಗಳೂರು ಸ್ಫೂರ್ತಿ ಜೇಸಿಐ, ಜೇಸಿಐ ಮಡಂತ್ಯಾರು, ರೋಟರಿ ಕ್ಲಬ್‌ ಬೆಳ್ತಂಗಡಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು, ಸಮುದಾಯ ದಂತ ಚಿಕಿತ್ಸಾ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವುಗಳ ಸಹಯೋಗದೊಂದಿಗೆ ಬೃಹತ್‌ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜರಗಿತು.

Advertisement

ಕುಡಾಲ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಪ್ರಭಾಕರ ಭಟ್ ಇಡ್ಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಬೆೆಳ್ತಂಗಡಿ ತಾಲೂಕಿನಲ್ಲಿ ಸತತ 8ನೇ ಬಾರಿ ಶೇ. 100 ಫಲಿತಾಂಶ ದಾಖಲಿಸಿದ ಗುರುವಾಯನಕೆರೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸಮ್ಮಾನಿಸಿದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಡಾ| ಪ್ರವೀಣ್‌ ಚಂದ್ರ ನಾಯಕ್‌, ಸೇವಾ ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷ ರಮೇಶ್‌ ನಾಯಕ್‌ ಮೈರ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ, ಕರ್ನಾಟಕ ಪಬ್ಲಿಕ್‌ ಸ್ಕೂಲ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮೋನಪ್ಪ ಕೆ., ಸಿ.ಆರ್‌ಪಿ. ರಘುರಾಮ ಭಟ್, ಪ್ರಮುಖರಾದ ಡೆಚ್ಚಾರು ಗಣಪತಿ ಶೆಣೈ, ವಿವಾಹ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಶೆಣೈ, ಮಡಂತ್ಯಾರು ಜೇಸೀಸ್‌ ಅಧ್ಯಕ್ಷ ಅರುಣ್‌ ಮೋರಾಸ್‌, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಮಂಗಳೂರು ಸ್ಫೂರ್ತಿ ಜೇಸಿಐ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ನಾಯಕ್‌, ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ, ಕೆ.ಎಂ.ಸಿ. ಆಸ್ಪತ್ರೆಯ ವ್ಯೆದ್ಯ ಡಾ| ಮಹೇಶ್‌ರೆಡ್ಡಿ, ಸಮುದಾಯ ದಂತ ಚಿಕಿತ್ಸಾ ವಿಭಾಗ ಯೇನಪೊಯ ದಂತ ಕಾಲೇಜು ಮತ್ತು ಆಸ್ಪತ್ರೆಯ ವ್ಯೆದ್ಯ ಡಾ| ಭರತ್‌ ಉಪಸ್ಥಿತರಿದ್ದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ದಯಾನಂದ ನಾಯಕ್‌ ಬೆಳ್ತಂಗಡಿ ಸ್ವಾಗತಿಸಿ, ಅಭಿನಂದನ ಪತ್ರವನ್ನು ವಾಚಿಸಿದರು. ಕು. ದೇ. ಆದ್ಯ ಗೌಡ್‌ ಬ್ರಾಹ್ಮಣ ಸಂಘ ಬೆಳ್ತಂಗಡಿ ಇದರ ಕಾರ್ಯದರ್ಶಿ ಸುಧಾಕರ ಪ್ರಭು ಪೆರ್ಮರೋಡಿ ವಂದಿಸಿದರು. ಯೋಗೀಶ್‌ ನಾಯಕ್‌ ಬಲ್ಕತ್ಯಾರ್‌ ನಿರೂಪಿಸಿದರು.

Advertisement

ಸುಮಾರು 500 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು.

ಶಾಸಕ ಹರೀಶ್‌ ಪೂಂಜ ಅವರು ಶಿಬಿರ ಉದ್ಘಾಟಿಸಿ, ಬೆಳ್ತಂಗಡಿ ಕುಡಾಲ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ಸಂಘ ಹಾಗೂ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಅವರ ಜನೋಪಯೋಗಿ ಕಾರ್ಯ ಕ್ರಮಗಳು ಮಾದರಿಯಾಗಿವೆ. ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸತತ 8ನೇ ಬಾರಿ ಶೇ. 100 ಫಲಿತಾಂಶ ದಾಖಲಿಸಿದ ತಾಲೂಕಿನ ಹೆಮ್ಮೆಯ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯನ್ನು ಗುರುತಿಸಿ ಗೌರವಿಸಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಹಾಗೂ ಅಭಿನಂದನೀಯ. ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರ ಹಮ್ಮಿಕೊಂಡ ಆಯೋಜಕರ ಸೇವಾಮನೋಭಾವನೆ ಶ್ಲಾಘನೀಯ ಎಂದರು.

‘ಮಾದರಿ ಕಾರ್ಯಕ್ರಮ’

Udayavani is now on Telegram. Click here to join our channel and stay updated with the latest news.

Next