Advertisement

ನಾಗನ ಮಹಿಮೆ ಸಾರುವ ಸರ್ಪ ಸಂಸ್ಕಾರ 

06:00 AM Aug 17, 2018 | |

ಕರಾವಳಿ ಹಾಗೂ ಮಲೆನಾಡಿಗರ ಮನೆ ಮನದ ದೇವರು. ಪ್ರತೀ ಮನೆಯಲ್ಲಿಯೂ ನಾಗನ ಹುತ್ತ, ಆ ಹುತ್ತವಿರುವ ಜಾಗದಲ್ಲೊಂದು ಚಿಕ್ಕ ಗುಡಿ, ಪ್ರತಿ ವರ್ಷ ನಾಗರ ಪಂಚಮಿಯ ಆಚರಣೆ, ನಾಗದರ್ಶನ, ಸರ್ಪ ದೋಷಕ್ಕಾಗಿ ಸರ್ಪ ಸಂಸ್ಕಾರ… ಹೀಗೇ ನಾಗನಿಗೆ ಸಂಬಂಧಿಸಿದಂತೆ ನಮ್ಮ ನಂಬಿಕೆಗಳಿಗೆ ಕೊನೆಯಿಲ್ಲ. ಇಂತಹ ನಾಗನ ಸುತ್ತ ನಿರ್ಮಿತವಾದ  ಕಥಾ ಹಂದರವೇ “ಸರ್ಪ ಸಂಸ್ಕಾರ’. 

Advertisement

 ಮೂರು ಜನ ಗೆಳೆಯರಿಂದ ಪ್ರಾರಂಭವಾಗುವ ಕಥೆ ಮಧ್ಯೆ ಅನೇಕ ಪಾತ್ರಗಳು ಬಂದು ಹೋದರೂ ಕೊನೆಗೊಳ್ಳುವುದು ಆ ಮೂರು ಜನ ಗೆಳೆಯರಿಂದಲೇ. ನಾಗ – ನಾಗಿಣಿಯರು ಸರಸವಾಡುವ ಸಮಯದಲ್ಲಿ ಈ ಗೆಳೆಯರು ನಾಗನನ್ನು ಸಾಯಿಸಿ ನಿಧಿ ಕದಿಯುವಲ್ಲಿ ಯಶಸ್ವಿಯಾಗುತ್ತಾರೆ. ಮುಂದೆ ಅದರಿಂದ ಅನುಭವಿಸುವ ನೋವು, ಸಂಕಟವನ್ನು ಇಲ್ಲಿ ತೋರಿಸಲಾಗಿದೆ. ದ್ವೇಷದ ಬೆನ್ನತ್ತಿದ ನಾಗಿಣಿಯ ಬೇರೆ ಬೇರೆ ರೂಪಗಳನ್ನು ನಾವಿಲ್ಲಿ ನೋಡಬಹುದು. “ನಾಗನ ನಿಧಿ ದೋಚಿದರೆ ಆಪತ್ತು’ ಎನ್ನುವ ಉಪ ಶೀರ್ಷಿಕೆಯಡಿ ನಾಗನಿಧಿಯ ಬಗ್ಗೆ, ಅದನ್ನು ಕದಿಯ ಹೊರಟ ಪರಿಣಾಮಗಳ ಬಗ್ಗೆ ಸರ್ಪ ಸಂಸ್ಕಾರದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಇಲ್ಲಿ ಗೆಳೆಯರ ಸಮ್ಮಿಲನದ ಖುಷಿಯಿದೆ. ಸಾವಿನ ಮನೆಯ ಸೂತಕದ ಛಾಯೆಯಿದೆ. ಹಾಸ್ಯದ ರಸದೌತಣವಿದೆ. ಪ್ರತೀ ಸನ್ನಿವೇಶದಲ್ಲಿಯೂ ಹೊಸತನವಿದೆ. ಅನಿರೀಕ್ಷಿತ ತಿರುವುಗಳಿದೆ. 

ಪ್ರಸಂಗದ ಕತೃì ಮಂಜುನಾಥ್‌ ಬಳೆಗಾರ. ತೀರ್ಥಹಳ್ಳಿಯ ಮೆಗರವಳ್ಳಿಯರವರಾದರೂ ಉಡುಪಿ ಜಿÇÉೆಯ ಸಿ¨ªಾಪುರದಲ್ಲಿ ಓದನ್ನು ಮುಂದುವರೆಸಿದರು. ಮಲೆನಾಡ ಮಡಿಲಲ್ಲಿ ಹುಟ್ಟಿ, ಕರಾವಳಿಯಲ್ಲಿ ಬೆಳೆದ ಅವರಿಗೆ ಯಕ್ಷಗಾನ ದ ಬಗೆಗೆ ಅಪಾರವಾದ ಆಸಕ್ತಿ. ಹಾಗೆಯೇ ನಾಗನ ಬಗ್ಗೆ ಇರುವ ವಿಶೇಷ ನಂಬಿಕೆಯೊಂದಿಗೆ ಯಕ್ಷಗಾನದ ಆಸಕ್ತಿಯ ಸಮ್ಮಿಲನದ ಸಂಕೇತವೇ ಈ “ಸರ್ಪ ಸಂಸ್ಕಾರ’. 6 ವರ್ಷಗಳ ಹಿಂದೆ ಪ್ರಥಮ ಪ್ರದರ್ಶನದÇÉೇ ಜಯಭೇರಿ ಬಾರಿಸಿದ ಪ್ರಸಂಗವನ್ನು ಮತ್ತೂಮ್ಮೆ ರಂಗದ ಮೇಲೆ ತರುತ್ತಿದ್ದಾರೆ. ಯಕ್ಷರಂಗದ ಖಳ ನಾಯಕರೆಂದೇ ಪ್ರಸಿದ್ಧಿಯಾಗಿರುವ ವಿದ್ಯಾಧರ ಜಲವಳ್ಳಿಯವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಪ್ರಸಂಗವಿದು. ಮತ್ತೆ ಪ್ರದರ್ಶನ ಮಾಡುವ ಕನಸನ್ನು ಅವರ ಮುಂದಿಟ್ಟಾಗ ಅವರದೇ ಮೇಳದಲ್ಲಿ ಪ್ರದರ್ಶನ ನೀಡಲು ಒಪ್ಪಿದ್ದಾರೆ. ಆಗಸ್ಟ್ 18ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ನಡೆಯಲಿದೆ. 

ದಿವ್ಯಾ ಶ್ರೀಧರ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next