Advertisement

ಮಾರಾಟಗಾರನೇ ಪಿಗ್ಗಿ ಬಿದ್ದದ್ದು ಹೇಗೆಂದರೆ…

01:11 PM Nov 27, 2017 | |

ಈ ಡೀಲರ್‌ ಆ ಮಿಕ್ಸಿಯ ಲೋಪಗಳನ್ನು ಹೇಳುವುದು, ಆ ಮಿಕ್ಸಿಯ ಡೀಲರ್‌ ಇದರಲ್ಲಿ ಇಲ್ಲದ ನೈಪುಣ್ಯವನ್ನು ಅದರಲ್ಲಿ ತೋರಿಸಿ ಅದನ್ನು ಹೀಗಳೆದು ಮಾರಾಟ  ಮಾಡುತ್ತಿದ್ದರು. ಇದೊಂಥರಾ ಜಟಾಪಟಿ ಜಗಳವೇ ಅಂತ ಹೇಳಬೇಕು. ಇಂಥ ಜಗಳಗಳ ಕಾಲಮಾನದಲ್ಲಿ ನಾನೊಂದು ಇಂಥದ್ದೇ ಡೀಲರ್‌ ಬಳಿ ಕೆಲಸ ಮಾಡುತ್ತಿದ್ದೆ. 

Advertisement

ದಶಕಗಳ ಹಿಂದಿನ ಮಾತು. ಆಗೆಲ್ಲಾ ಸುಮೀತ್‌ ಮಹಾರಾಜ ಅನ್ನೋ ಎರಡೇ ಮಿಕ್ಸಿಗಳು ಇದ್ದದ್ದು. ಈ ಎರಡರ ನಡುವೆ ಮಾರಾಟದಲ್ಲಿ ಸ್ಪರ್ಧೆಯೋ ಸ್ಪರ್ಧೆ. ಈ ಎರಡೂ ಮಿಕ್ಸಿಗಳ ಡೀಲರ್‌ಗಳು ತಮ್ಮ ವ್ಯಾಪಾರಾಭಿವೃದ್ಧಿಗಾಗಿ ಎರಡೂ ಮಿಕ್ಸಿಗಳ ಗುಣಾವಗುಣಗಳನ್ನು ಹೊಗಳುವುದು, ತೆಗಳುವುದು ನಡೆದೇ ಇತ್ತು. 

ಈ ಡೀಲರ್‌ ಆ ಮಿಕ್ಸಿಯ ಲೋಪಗಳನ್ನು ಹೇಳುವುದು, ಆ ಮಿಕ್ಸಿಯ ಡೀಲರ್‌ ಇದರಲ್ಲಿ ಇಲ್ಲದ ನೈಪುಣ್ಯವನ್ನು ಅದರಲ್ಲಿ ತೋರಿಸಿ ಅದನ್ನು ಹೀಗಳೆದು ಮಾರಾಟ ಮಾಡುತ್ತಿದ್ದರು. ಇದೊಂಥರಾ ಜಟಾಪಟಿ ಜಗಳವೇ ಅಂತ ಹೇಳಬೇಕು. ಇಂಥ ಜಗಳಗಳ ಕಾಲಮಾನದಲ್ಲಿ ನಾನೊಂದು ಇಂಥದ್ದೇ ಡೀಲರ್‌ ಬಳಿ ಕೆಲಸ ಮಾಡುತ್ತಿದ್ದೆ. ಅಲ್ಲಿರುವ ಮಿಕ್ಸಿಯನ್ನು ಪ್ರಮೋಟ್‌ ಮಾಡುವುದು ನನಗೆ ಸೇರಿದ್ದ ಕೆಲಸವಾಗಿತ್ತು. ಒಮ್ಮೆ ಅಂಗಡಿಗೆ ಗ್ರಾಹಕರು ಮಿಕ್ಸಿ ಕೊಳ್ಳಲು ಬಂದರು. ಆ ದಿನ ಡೀಲರ್‌ ಅಂಗಡಿಯಲ್ಲೇ ಇದ್ದ ಕಾರಣ ಅವರೇ ಗ್ರಾಹಕರ ಮನವೊಲಿಸಲು ನಿಂತರು.

ಸರಿ ಮಿಕ್ಸಿಯ ವರ್ಣನೆ ಶುರುವಾಯ್ತು. “ನೋಡಿ ಸಾರ್‌ ಈ ಜಾರ್‌ ಕೆಳಗೆ ಬುಶ್‌ ಇದೆಯಲ್ಲ, ಇದು ಎಷ್ಟು ಗಟ್ಟಿ ಅಂದ್ರೆ ಮಿಕ್ಸಿ ಆನ್‌ ಮಾಡಿ ನಂತರ ಜಾರ್‌ ಕೂಡಿಸಿದರೂ ಆ ಬುಶ್‌ಗೆ ಏನೂ ಆಗಲ್ಲ. ಅಷ್ಟು ಗಟ್ಟಿಯಾದ ಫೈಬರ್‌ ಇದಕ್ಕೆ ಅಳವಡಿಸಿರುವುದು. ಅದೇ ಆ ಮಿಕ್ಸಿಯಲ್ಲಾದರೆ ಬುಶ್‌ ಪದೇ ಪದೇ ಒಡೆದುಹೋಗುತ್ತಾ ಇರುತ್ತೆ ಎಂದು ವಿವರಿಸುತ್ತಿದ್ದರು. ಹೀಗೆ ಹೇಳುತ್ತಲೇ ಮಿಕ್ಸಿ ಆನ್‌ ಮಾಡಿ, ಜಾರ್‌ ಅನ್ನು ಮಿಕ್ಸಿಯಲ್ಲಿ ಕೂಡಿಸಿದರು. ಡೀಲರ್‌ ಮಾತಿನ ಮೋಡಿಗೆ ಒಳಗಾಗಿದ್ದ ಗ್ರಾಹಕ ಮಹಾಶಯ ಕಣ್ಣುಬಾಯಿ ಬಿಟ್ಟು ಕೊಂಡು
ನೋಡುತ್ತಿದ್ದವರಿಗೆ, ಒಮ್ಮೆಲೆ ಫ‌ಟ್‌ ಎಂಬ ಸದ್ದು ಬಂತು. ಬೆಚ್ಚಿ ಬಿದ್ದರು. ಆ ದಿನ ಏನಾಗಿತ್ತೋ ಏನೋ, ಜಾರ್‌ ಅನ್ನು ರನ್ನಿಂಗ್‌ ಮಿಕ್ಸಿಯಲ್ಲಿಟ್ಟ ಮರುಕ್ಷಣವೇ ಆ ಬುಶ್‌ ಫ‌ಟ್‌ ಎಂದು ಒಡೆದುಹೋಯಿತು. 

ಗ್ರಾಹಕರು ಅವಕ್ಕಾಗಿ ಡೀಲರ್‌ ಮುಖವನ್ನು ನೋಡಿದರೆ ಡೀಲರ್‌ ಮುಖ ಇಂಗು ತಿಂದ ಮಂಗನಂತಾಗಿತ್ತು. ಇದನ್ನು ನೋಡುತ್ತಲೇ ಇದ್ದ ನಾನು ನಗಬೇಕೋ ಅಳಬೇಕೋ ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದೆ. ಎಲ್ಲೆಡೆ ಗ್ರಾಹಕ ಪಿಗ್ಗಿ ಬೀಳುವುದು ಸಾಮಾನ್ಯ. ಆದರೆ ಇಲ್ಲಿ ಮಾರಾಟಗಾರನೇ ಪಿಗ್ಗಿ ಬಿದ್ದಿದ್ದ. ಅದು ಗೊತ್ತಾಗಿದ್ದು ಗ್ರಾಹಕನ ಮುಂದೆ.

Advertisement

ಚಿಂತಾಮಣಿ

Advertisement

Udayavani is now on Telegram. Click here to join our channel and stay updated with the latest news.

Next