Advertisement
ಅಸ್ಸಾಂ ಮೂಲದ ಸುನೈ ಗ್ರಾಮದ ನಿವಾಸಿ ನೂರ್ ಇಸ್ಲಾಂ ಚೌದ್ರಿ(37) ಬಂಧಿತ.
Related Articles
Advertisement
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು. ಪೂರ್ವ ವಿಭಾಗದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಇಂತಹ ಕೃತ್ಯಗಳ ಪತ್ತ ಹೇಗೆ?
ಇಂತಹ ಕೃತ್ಯಗಳ ಪತ್ತೆಗಾಗಿ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿರುವ ಸೈಬರ್ ಕ್ರೈಂ ಪ್ರಿವೇಷನ್ ಎಗೆನೆಷ್ಟ್ ವುಮೆನ್ ಆ್ಯಂಡ್ ಚಿಲ್ಡ್ರನ್, ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟ್ ಪೋರ್ಟಲ್, ನ್ಯಾಷನಲ್ ಸೆಂಟರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್‌ಪ್ಲೆ„ಟೆಡ್ ಚಿಲ್ಡರ್ನ್(ಎನ್ ಸಿಎಂಇಸಿ) ಎಂಬ ಪೋರ್ಟಲ್ ತೆರೆಯಲಾಗಿದೆ.
ಈ ಸಾಫ್ಟ್ವೇರ್‌ಗಳ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಫೋಟೋವನ್ನು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು, ವರ್ಗಾಯಿ ಸುವ ವ್ಯಕ್ತಿಗಳ ಚಲನವಲನಗಳನ್ನು ಎಲೆಕ್ಟ್ರಾನಿಕ್ಸ್ ಸರ್ವಿಸ್ ಪ್ರೋವೈಡರ್‌ಗಳ ಮೂಲಕ ಮಾಹಿತಿ ಪಡೆದುಕೊಂಡು, ಸೈಬರ್ ಟಿಪ್ ಲೈನ್ ವರದಿ ನಂಬರ್ ಸಮೇತ ರಾಜ್ಯದ ಸಿಐಡಿಗೆ ಮಾಹಿತಿ ನೀಡಲಾಗುತ್ತದೆ. ಸಿಐಡಿ ಅಧಿಕಾರಿಗಳು ಆರೋಪಿಯ ಐಪಿ ವಿಳಾಸ ಹಾಗೂ ಇತರೆ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಪೊಲೀಸ್ ಠಾಣೆ ಮಾಹಿತಿ ನೀಡುತ್ತಾರೆ.