Advertisement

ಮೋದಿ ಹಿಂದಿ ಬಿಯರ್ ಗ್ರಿಲ್ಸ್ ‌ಗೆ ಅರ್ಥ ಆಗಿದ್ದು ಹೇಗೆ?

11:07 AM Aug 26, 2019 | Hari Prasad |

ಹೊಸದಿಲ್ಲಿ: ಡಿಸ್ಕವರಿ ಚಾನೆಲ್‌ ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ನಿರೂಪಕ ಬಿಯರ್ ಗ್ರಿಲ್ಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವ ಎಪಿಸೋಡ್‌ನ ಪ್ರಸಾರ ಇತ್ತೀಚೆಗೆ ಆಗಿದ್ದು ಗೊತ್ತೇ ಇದೆ.

Advertisement

ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಈ ಕಾರ್ಯಕ್ರಮವನ್ನು ನೋಡಿದ್ದರು. ಅದರ ಬೆನ್ನಲ್ಲೇ ಪ್ರಶ್ನೆಯೊಂದು ಎಲ್ಲರನ್ನೂ ಕಾಡಿತ್ತು. ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಬಿಯರ್ ಅವರು ಇಂಗ್ಲಿಷ್‌ ನಲ್ಲಿ ಮಾತನಾಡುತ್ತಿದ್ದರು. ಮೋದಿ ಅವರ ಹಿಂದಿ ಅವರಿಗೆ ಅರ್ಥವಾಗುತ್ತಿದ್ದುದು ಹೇಗೆ ಎಂಬುದು ಎಲ್ಲರ ತಲೆಕೊರೆದಿತ್ತು.

ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಖುದ್ದು ಪ್ರಧಾನಿ ಅವರೇ ಸಂಶಯ ಪರಿಹಾರ ಮಾಡಿದ್ದಾರೆ. ಮನ್‌ ಕೀ ಬಾತ್‌ ನಲ್ಲಿ ಈ ಬಗ್ಗೆ ಮೋದಿ ಅವರು ಉತ್ತರ ನೀಡಿದ್ದು, ಬಿಯರ್ ಅವರ ಬಳಿ ಒಂದು ಪುಟ್ಟ ಸಲಕರಣೆ ಇದ್ದು ಅದನ್ನು ಕಿವಿ ಹತ್ತಿರ ಇಟ್ಟುಕೊಂಡಿದ್ದರು. ಅದು ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದಂತೆ ತನ್ನಿಂದ ತಾನಾಗಿಯೇ ಭಾಷಾಂತರಿಸಿ ಇಂಗ್ಲಿಷ್‌ ನಲ್ಲಿ ಹೇಳುತ್ತಿತ್ತು. ತಂತ್ರಜ್ಞಾನದ ಈ ಸಾಧ್ಯತೆಯಿಂದಾಗಿ ಸಂವಹನ ಸುಲಭವಾಗಿ ನಡೆಯಿತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next