Advertisement

ಎರಡನೇ ಹಂತದಲ್ಲಿ “ನ್ಯೂರಾನ್‌’

11:43 AM Dec 19, 2018 | |

ಇತ್ತೀಚೆಗಷ್ಟೆ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದ “ನ್ಯೂರಾನ್‌” ಚಿತ್ರ ಇದೀಗ ಎರಡನೇ ಹಂತದ ಚಿತ್ರೀಕರಣ ಆರಂಭಿಸಿದೆ. ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ ಹಾಗೂ ಮೈಸೂರು ರಸ್ತೆಯ ಟಿಂಬರ್‌ ಫ್ಯಾಕ್ಟರಿ ಸುತ್ತಮುತ್ತ ನಾಯಕ ಹಾಗೂ ಖಳನಟನ ನಡುವೆ ನಡೆಯುವ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ.  

Advertisement

ಫ್ರೆಂಡ್ಸ್‌ ಪ್ರೊಡಕ್ಷನ್‌ ಲಾಂಛನದಲ್ಲಿ ತಯಾರಾಗುತ್ತಿರುವ “ನ್ಯೂರಾನ್‌” ಚಿತ್ರಕ್ಕೆ ಈ ಹಿಂದೆ  ಡೇಂಜರ್‌ ಜೋನ್‌ ಮತ್ತು ನಿಶ್ಯಬ್ದ-2 ಚಿತ್ರಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕಾಸ್‌ ಪುಷ್ಪಗಿರಿ ಚೊಚ್ಚಲ ಬಾರಿಗೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಯುವ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾಗುತ್ತಿದ್ದಾರೆ.

ಇನ್ನುಳಿದಂತೆ ನೇಹಾ ಪಾಟೀಲ್‌ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್‌ ಪ್ರಮುಖ ಪಾತ್ರದಲ್ಲಿದ್ದಾರೆ. ರಾಮಕೃಷ್ಣ, ಜೈಜಗದೀಶ್‌, ಕಬೀರ್‌, ಅರಂದರಾಜ್‌, ವರ್ಷ, ರಾಕ್‌ಲೈನ್‌ ಸುಧಾಕರ್‌, ಕಾರ್ತಿಕ್‌ ಮಂಗಳೂರು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next