Advertisement

Fake doctors ಹಾವಳಿಗೆ ಕಡಿವಾಣ ಅಗತ್ಯ: ಡಾ| ಯೋಗಾನಂದ ರೆಡ್ಡಿ

12:07 AM Oct 21, 2024 | Team Udayavani |

ಮಂಗಳೂರು: ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧ 70 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೂ ನಕಲಿ ವೈದ್ಯರ ಹಾವಳಿ ಕಡಿಮೆಯಾಗಿಲ್ಲ. ಇದನ್ನು ತಡೆಯುವ ಅಗತ್ಯ ಇದೆ ಎಂದು ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಬೆಂಗಳೂರು ಇದರ ಅಧ್ಯಕ್ಷ ಡಾ| ಯೋಗಾನಂದ ರೆಡ್ಡಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆ ಹಾಗೂ ಮಂಗಳೂರು ಶಾಖೆ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕುಟುಂಬ ವೈದ್ಯರ ವಿಭಾಗದ ಮಾರ್ಗದರ್ಶನದಲ್ಲಿ ಕುಟುಂಬ ವೈದ್ಯರ ಸಂಘ ಮಂಗಳೂರು ಇದರ ವಿಂಶತಿ ವರ್ಷದ ಆಚರಣೆ ಅಂಗವಾಗಿ ಡಾ| ಎ.ವಿ. ರಾವ್‌ ಕಾನ್ಫರೆನ್ಸ್‌ ಹಾಲ್‌ ಐಎಂಎ ಹೌಸ್‌ನಲ್ಲಿ ರವಿವಾರ ಜರಗಿದ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ-2024 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀತಿ ರೂಪಿಸುವಾಗ ವೈದ್ಯರ ಸಂಘಟನೆಯನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಇಂಥ ಪರಿಸ್ಥಿತಿ ಬಂದಿದೆ ಎಂದರು.

Advertisement

ಎಲ್ಲ ವೈದ್ಯರಲ್ಲೂ ಒಬ್ಬ ಕುಟುಂಬ ವೈದ್ಯ ಉಳಿಯಬೇಕು. ಆಗ ಸಮಗ್ರ ವೈದ್ಯಕೀಯ ಸೇವೆ ಸಾಧ್ಯ. ಕುಟುಂಬ ವೈದ್ಯನನ್ನು ಎಚ್ಚರಿಸಲು ನಾವೆಲ್ಲರೂ ಹಂತ ಹಂತವಾಗಿ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಪದ್ಧತಿಯನ್ನು ಸರಕಾರ ಸರಿಯಾಗಿ ಉಪಯೋಗಿಸದ ಕಾರಣ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗುವಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.

ನಿಟ್ಟೆ ವಿವಿ ಪ್ರೊ ಚಾನ್ಸಲರ್‌ ಡಾ| ಶಾಂತಾರಾಮ ಶೆಟ್ಟಿ ಮಾತನಾಡಿ, ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸು ವುದ ರಿಂದ ಕೆಲವರು ದೂರ ಸರಿಯು ತ್ತಿದ್ದಾರೆ. ಕುಟುಂಬ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಸಮ್ಮಾನ
ಡಾ| ಶಾಂತಾರಾಮ ಶೆಟ್ಟಿ, ಡಾ| ಯೋಗಾನಂದ ರೆಡ್ಡಿ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಡಾ| ಶ್ರೀನಿವಾಸ ಎಸ್‌., ಕುಟುಂಬ ವೈದ್ಯರ ಸಂಘ ಮಂಗಳೂರು ಅಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್‌ ಉಳೂ¤ರು ಅವರನ್ನು ಸಮ್ಮಾನಿಸಲಾಯಿತು.

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌, ದ.ಕ. ಜಿ.ಪಂ. ಸಿಇಒ ಡಾ| ಆನಂದ್‌, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಕಾರ್ಯದರ್ಶಿ ಡಾ| ಕರುಣಾಕರ ಬಿ.ಪಿ., ಡಾ| ಶ್ರೀನಿವಾಸ್‌, ಐಎಂಎ ಮಂಗಳೂರಿನ ಅಧ್ಯಕ್ಷ ರಂಜನ್‌ ಬಿ.ಕೆ., ಕಾರ್ಯದರ್ಶಿ ಡಾ| ಅವಿನ್‌ ಆಳ್ವ, ಡಾ| ಸದಾಶಿವ, ಡಾ| ಮನೀಶ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ 200ಕ್ಕೂ ಅಧಿಕ ವೈದ್ಯರು ಭಾಗವಹಿಸಿದ್ದರು.
ಕುಟುಂಬ ವೈದ್ಯರ ಸಂಘ ಮಂಗಳೂರಿನ ಅಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next