Advertisement

ಮಾಧ್ಯಮಕ್ಕೆ ವೈಜ್ಞಾನಿಕ ದೃಷ್ಟಿಕೋನ ಅನಿವಾರ್ಯ

12:30 AM Feb 08, 2019 | Team Udayavani |

ಉಡುಪಿ: ಮಾಧ್ಯಮಗಳು ವಿಜ್ಞಾನದ ಬೆಳವಣಿಗೆಗಳತ್ತಲೂ ಗಮನ ಹರಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮಾಧ್ಯಮಗಳು ಸಾರ್ವಜನಿಕರಿಂದ ದೂರವಾಗಬಹುದು ಎಂದು ಸ್ವರಾಜ್ಯ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಅಂಕಣಕಾರ ಆನಂದ್‌ ರಂಗನಾಥನ್‌ ಹೇಳಿದರು.

Advertisement

ಗುರುವಾರ ಮಣಿಪಾಲ ಸ್ಕೂಲ್‌ ಆಫ್ ಕಮ್ಯುನಿಕೇಷನ್‌ (ಎಸ್‌ಒಸಿ)ನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ “ಆರ್ಟಿಕಲ್‌ 19′ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಉದ್ದೇಶ ಮತ್ತು ವಿಷಯಗಳ ಆಯ್ಕೆ ಸ್ಪಷ್ಟವಾಗಿರಬೇಕು. ಕ್ಷೇತ್ರ ಅಧ್ಯಯನ, ಅಂಕಿ ಅಂಶ, ವೈಜ್ಞಾನಿಕ ದೃಷ್ಟಿಕೋನ, ವಿಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಆಧರಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ರಂಗನಾಥನ್‌ ಅವರು ತಿಳಿಸಿದರು.

ಮಾಧ್ಯಮ ಸ್ವತಂತ್ರವಲ್ಲ
ಇದೇ ವೇಳೆ ವಿದ್ಯಾರ್ಥಿಗ ಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಂಗನಾಥ್‌ ಅವರು, ಭಾರತ ದೇಶದಲ್ಲಿ ಯಾವುದೇ ಮಾಧ್ಯಮ ಕೂಡ ಸ್ವತಂತ್ರವಾಗಿದೆ ಎಂದು ಹೇಳುವುದು ಅಸಾಧ್ಯ. ಸ್ವಾತಂತ್ರ್ಯ ಎಂದರೆ ಕೇವಲ ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ನಿಯಂತ್ರಣದಿಂದ ಹೊರ ತಾಗಿರುವುದು ಮಾತ್ರವಲ್ಲ, ಯಾವುದೇ ಒಂದು ಸಿದ್ಧಾಂತಕ್ಕೆ ಕೂಡ ಒಳಗಾಗಿರಬಾರದು. 

ವೀಕ್ಷಕರು, ಓದುಗರು ಬಯಸು
ವುದನ್ನು ನೀಡುತ್ತೇವೆ ಎಂದು ಮಾಧ್ಯಮಗಳು ವಾದ ಮಾಡುತ್ತವೆ. ಆದರೆ ಇದು ತಪ್ಪು. ಮಾಧ್ಯಮ ಒಂದು ವ್ಯವಹಾರ ಮಾತ್ರವಾಗಬಾರದು. ಸಮಾಜಕ್ಕೆ ಉತ್ತಮವಾದುದನ್ನು ನೀಡಬೇಕು. ಸಂವಿಧಾನದ ಕಲಂ 19 ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆಯಾದರೂ ಅದರಲ್ಲಿರುವ ಉಪವಿಧಿಗಳು ತಡೆಯೊಡ್ಡುತ್ತವೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಕಾಯಿದೆ ತಿದ್ದುಪಡಿ ಮಾಡಲು ಸಾಧ್ಯವಿದೆ ಎಂದರು.

Advertisement

ಸತ್ಯ, ಸ್ಪಷ್ಟತೆ ಇರಲಿ
ಅಧ್ಯಕ್ಷತೆ ವಹಿಸಿದ್ದ ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಮಾತನಾಡಿ, ಮಾಧ್ಯಮಗಳು ಸತ್ಯವನ್ನು ಹುಡುಕುವ ಪ್ರಯತ್ನ ಮಾಡಬೇಕು. ಸುದ್ದಿಗಳಲ್ಲಿ ಸ್ಪಷ್ಟತೆ ಇರಬೇಕೆಂದು ಜನ ಬಯಸುತ್ತಾರೆ. ತಪ್ಪುಗಳು ಪುನರಾವರ್ತನೆಯಾದರೆ ಮಾಧ್ಯಮಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತವೆ ಎಂದರು.

ಕಾರ್ಯಕ್ರಮವನ್ನು ಮಣಿಪುರದ ಲೇಖಕ, ಸಿನೆಮಾ ನಿರ್ದೇಶಕ ಬಾಬಿ ವಾಹೆಂಗ್ಬಾಮ್‌ ಉದ್ಘಾಟಿಸಿದರು. ಎಸ್‌ಒಸಿ ನಿರ್ದೇಶಕಿ ಡಾ| ಪದ್ಮಾರಾಣಿ ಸ್ವಾಗತಿಸಿದರು. ಹಿರಾಂಕ್ಷಿ ಕಾರ್ಯಕ್ರಮ ನಿರ್ವಹಿಸಿ, ತಕ್ಷತ್‌ ಪೈ ವಂದಿಸಿದರು. ಮೂರು ದಿನಗಳ ಕಾಲ ನಡೆಯಲಿರುವ “ಆರ್ಟಿಕಲ್‌-19′ ಪ್ರಬಂಧ ಮಂಡನೆ, ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

ಕ್ಯಾಂಪಸ್‌ನಲ್ಲಿ ರಾಜಕೀಯ ಸಲ್ಲದು
ವಿ.ವಿ.ಗಳ ಕ್ಯಾಂಪಸ್‌ಗಳಲ್ಲಿ ರಾಜಕೀಯ ಪಕ್ಷಗಳ ಯೂತ್‌ ವಿಂಗ್‌ನ್ನು ಶೇ. 83ರಷ್ಟು ಮಂದಿ ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಹಾಗಾಗಿ ಕ್ಯಾಂಪಸ್‌ಗಳಲ್ಲಿ ಇಂತಹ ಸಂಘಟನೆಗಳಿಗೆ ಅವಕಾಶ ನೀಡಬಾರದು. ದೇಶದಲ್ಲಿ ಶೇ. 35ರಷ್ಟು ಮಂದಿ ರಾಜಕಾರಣಿಗಳು ಅಪರಾಧ ಹಿನ್ನೆಲೆಯವರು ಎಂದು ರಂಗನಾಥನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next