Advertisement

ಕಾಟುಕುಕ್ಕೆ ಶಾಲಾ ಪ್ರಧಾನ ರಸ್ತೆ, ಕೆಸರು ನೀರಿನ ಗದ್ದೆ

11:18 PM Jun 22, 2019 | Sriram |

ಪೆರ್ಲ:ಕಾಟುಕುಕ್ಕೆಯ ಪ್ರಧಾನ ಕೇಂದ್ರ ಭಾಗವಾದ ಶ್ರೀ ಸುಬ್ರಹ್ಮಣ್ಯೇಶ್ವರ ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿ ಹಾದು ಹೋಗುವ ಮುಖ್ಯ ರಸ್ತೆಯು ಕೆಸರು ನೀರು ತುಂಬಿ ನಡೆಯುವುದೇ ಕಷ್ಟಕರವಾಗಿದೆ. ಕಾಟುಕುಕ್ಕೆ ಶಾಲೆಗೆ ಬರುವ ಮಕ್ಕಳು ರಸ್ತೆದಾಟಿ ಹೋಗಿ ಬರಲು ತುಂಬ ಕಷ್ಟಪಡುತ್ತಾರೆ.

Advertisement

ಕೆಸರು,ನೀರು ತುಂಬಿ ಜಾರಿ ಬೀಳುವ ಪರಿಸ್ಥಿತಿ.ಜೋರು ಮಳೆ ಬಂದರಂತೂ ರಸ್ತೆ ಪೂರ್ತಿ ನೀರು.ಹಾದು ಹೋಗುವ ವಾಹನಗಳಿಂದಲೂ ಕೆಸರು ನೀರು ಎರಚುತ್ತದೆ.

ಅಡ್ಕಸ್ಥಳದಿಂದ ಆರಂಭವಾಗಿ ಖಂಡೇರಿ ಮೂಲಕ ಕರ್ನಾಟಕಕ್ಕೆ ಈ ರಸ್ತೆ ಸಂಪರ್ಕಿಸುತ್ತದೆ.ಪ್ರಸಿದ್ಧ ಪುಣ್ಯ ಕ್ಷೇತ್ರ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲಕ್ಕೆ ಹೋಗಲು ಹಾಗೂ ಪೆರ್ಲ ಕಡೆಗೆ ತೆರಳಲು ಈ ರಸ್ತೆಯೇ ಆಗಬೇಕು.

ಇಲ್ಲಿ ಪ್ರಾಥಮಿಕ ಶಾಲೆಯಿಂದ ತೊಡಗಿ ಪ್ಲಸ್‌ಟು ವರೆಗೆ ಸುಮಾರು ಏಳುನೂರರಷ್ಟು ಮಕ್ಕಳು ವಿದ್ಯಾರ್ಜನೆಗೈಯುತ್ತಾರೆ.ಸಮೀಪದಲ್ಲಿ ಒಂದು ಅಂಗನವಾಡಿಯು ಇದೆ.ಹಲವಾರು ವ್ಯಾಪಾರ ಸಂಸ್ಥೆಗಳು,ಬ್ಯಾಂಕ್‌ಗಳು ಕಾರ್ಯಾಚರಿಸುತ್ತಿರುವ ಇಲ್ಲಿ ನೂರಾರು ಜನ ತಮ್ಮ ಅಗತ್ಯ ಕಾರ್ಯಗಳಿಗೆ ಆಗಮಿಸುತ್ತಾರೆ.

ರಸ್ತೆಯ ಒಂದು ಪಾರ್ಶ್ವ ಎತ್ತರದ ಪ್ರದೇಶವಾಗಿದ್ದು ಮೇಲಿನ ನೀರು ಹರಿದು ಬಂದು ಇಲ್ಲಿ ಕಟ್ಟಿ ನಿಲ್ಲುತ್ತದೆ.ಗ್ರಾಮೀಣ ಪ್ರದೇಶವಾದ ಇಲ್ಲಿ ಬಸ್ಸು ವ್ಯವಸ್ಥೆಯು ಇಲ್ಲ .ಮಾರ್ಗದ ಬದಿಯಲ್ಲಿ ನೀರು ಹರಿದು ಹೋಗಲು ಚರಂಡಿ ಇದ್ದರೂ ಅಲ್ಲಿ ಮಣ್ಣು ತುಂಬಿ ನೀರು ಹರಿದು ಹೋಗುವುದಿಲ್ಲ.

Advertisement

ಮಣ್ಣು ಸರಿಸಿ ದುರಸ್ತಿಗೊಳಿಸಿದರೆ ನೀರು ಹರಿದು ಹೋಗಬಹುದು ಕಾಟುಕುಕ್ಕೆ ದೇವಸ್ಥಾನ ರಸ್ತೆಯಂತೂ ತುಂಬಾ ಅಗಲ ಕಿರಿದಾಗಿ ಘನ ವಾಹಗಳ ಚಾಲಕರು ತುಂಬ ಕಷ್ಟಪಡುವ ಸ್ಥಿತಿ.ಉ,ಟಾಗುತ್ತಿದೆ.ಮುಂದಿನಿಂದ ವಾಹನ ಬರುತ್ತಿದ್ದರೆ ಬದಿಗೆ ಸರಿಯಲು ಸಾಧ್ಯವಾಗದಷ್ಟು ರಸ್ತೆಯು ಕಿರಿದಾಗಿದೆ ಎಂದು ಚಾಲಕರಾದ ವಸಂತ ಕುಮಾರ್‌ ಹೇಳುತ್ತಾರೆ.ಈ ರಸ್ತೆಯನ್ನು ಅಗಲಗೊಳಿಸಿ ಸಂಚಾರಯೋಗ್ಯ ಗೊಳಿಸುವುದು ಅತೀ ಆಗತ್ಯವಾಗಿದೆ.

ಬಸ್‌ವ್ಯವಸ್ಥೆಯೂ ಇಲ್ಲ
ಮೊದಲು ಒಡ್ಯ ಕಡೆಗೆ ಹೋಗುವ ಬಸ್ಸು ಇಲ್ಲಿಯವರೆಗೆ ಬಂದು ಹೋಗುತಿತ್ತು.ಆದರೆ ಇದೀಗ ಕೆಲ ತಿಂಗಳುಗಳಿಂದ ಆ ಬಸ್ಸು ರಸ್ತೆ ಹದಗೆಟ್ಟ ಕಾರಣ ತನ್ನ ಯಾನವನ್ನು ಮೊಟಕುಗೊಳಿಸಿದೆ.

ಹೊಂಡಗಳಿಂದ ಕೂಡಿದ ಅಗಲಕಿರಿದಾದ ರಸ್ತೆಗಳಿಂದಾಗಿ ಶಾಲಾ ವಹನಗಳಿಗೂ ಸಂಚರಿಸಲು ಕಷ್ಟವಾಗುತ್ತದೆ.ವಾಹನಗಳು ಆಗಾಗ ಕೆಟ್ಟು ನಿಲ್ಲುವ ಪರಿಸ್ಥಿತಿ.ಸುಮಾರು ಐದು ಬಸ್ಸು ಗಳಿಗೆ ಪರ್ಮಿಟ್‌ ಇದ್ದರೂ ಇಲ್ಲಿ ಒಂದು ಸಾರಿಗೆ ಬಸ್ಸಿನ ವ್ಯವಸ್ಥೆಯು ಇಲ್ಲ
-ಸುಧೀರ್‌ ಕುಮಾರ್‌
ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ಪ್ರಧಾನ ಶಿಕ್ಷಕ

ಪಂಚಾಯತ್‌ ಅನುದಾನ ಇಲ್ಲ
ಚರಂಡಿ ದುರಸ್ತಿಗೆ ಪಂಚಾಯತಿನ ಅನುದಾನ ಇಲ್ಲ .ಸ್ಥಳೀಯರನ್ನು ಸೇರಿದುರಸ್ತಿಗೊಳಿಸಲಾಗುವುದು
-ಮಲ್ಲಿಕಾ ರೈ
ವಾರ್ಡ್‌ ಸದಸ್ಯೆ

- ಬಾಲಕೃಷ್ಣ ಅಚ್ಚಾಯಿ

Advertisement

Udayavani is now on Telegram. Click here to join our channel and stay updated with the latest news.

Next