Advertisement

ಜುಲೈಯಲ್ಲೂ ಶಾಲೆ ಕಾಲೇಜು ತೆರೆಯವು; ಅನ್‌ಲಾಕ್‌ 2.0: ಕೇಂದ್ರ ಮಾರ್ಗಸೂಚಿ ಪ್ರಕಟ

12:42 AM Jun 30, 2020 | Sriram |

ಹೊಸದಿಲ್ಲಿ: ಬುಧವಾರದಿಂದ ಅನ್‌ಲಾಕ್‌ 2.0 ಜಾರಿಯಾಗಲಿದೆ. ದೇಶಾದ್ಯಂತ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ 2ನೇ ಹಂತದ ನಿರ್ಬಂಧ ತೆರವು ಮೊದಲ ಹಂತದ ಮಾದರಿಯಲ್ಲೇ ಮುಂದುವರಿಯಲಿದೆ.

Advertisement

ಕಂಟೈನ್ಮೆಂಟ್‌ ವಲಯಗಳಲ್ಲಿ ಜು.31ರ ವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಇತರ ಪ್ರದೇಶಗಳಲ್ಲಿ ಜು.31ರ ವರೆಗೂ ಶಾಲೆ- ಕಾಲೇಜುಗಳು ಮುಚ್ಚಿರಲಿದ್ದು, ಮೆಟ್ರೋ ರೈಲು, ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸಿನೆಮಾ ಥಿಯೇಟರ್‌, ಜಿಮ್‌, ಈಜುಕೊಳ, ಬಾರ್‌, ಮನೋರಂಜನ ಪಾರ್ಕ್‌, ಸಭಾಂಗಣ ಕೂಡ 31ರ ವರೆಗೆ ಮುಚ್ಚಿರಲಿವೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದು ವರಿಯಲಿದೆ.

ರಾತ್ರಿ ಕರ್ಫ್ಯೂ
ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಸಂಚರಿಸಲು ಅವಕಾಶ ಇಲ್ಲ.

ಇಂದು ಸಂಜೆ 4ಕ್ಕೆ ಮೋದಿ ಭಾಷಣ
ಪ್ರಧಾನಿ ಮೋದಿ ಮಂಗಳವಾರ ಸಂಜೆ 4 ಗಂಟೆಗೆ ದೇಶ  ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಚೀನ ಜತೆಗಿನ ಘರ್ಷಣೆ ಮತ್ತು ಮಂಗಳವಾರಕ್ಕೆ ಅನ್ಲಾಕ್‌ 1 ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಷಣ ಮಹತ್ವ ಪಡೆದು ಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next