Advertisement

ಹುಟ್ಟಿದ ದಿನವೇ ಸಾಯುವ ದೃಶ್ಯದ ಚಿತ್ರೀಕರಣ!

10:45 AM Jan 17, 2018 | Team Udayavani |

ಕೆಲ ಚಿತ್ರಗಳಲ್ಲಿ ಆಗಾಗ ಒಂದೊಂದು ವಿಶೇಷತೆಗಳು ನಡೆಯುತ್ತಿರುತ್ತವೆ. ಅವುಗಳು ಕಾಕತಾಳೀಯ ಎಂಬಂತೆಯೇ ನಡೆದು ಸುದ್ದಿಯಾಗಿರುತ್ತವೆ. ಅಂಥದ್ದೇ ಮರೆಯಲಾರದ ಘಟನೆಯೊಂದು ಮಧುಸೂದನ್‌ ನಿರ್ದೇಶನದ “30 ದಿನ 3 ಗಂಟೆ 30 ಸೆಕೆಂಡ್‌’ ಚಿತ್ರದಲ್ಲಿ ನಡೆದಿದೆ ಅಂದರೆ, ನಂಬಲೇಬೇಕು. ಅಂಥದ್ದೊಂದು ಘಟನೆ ನೆನಪಿಸಿಕೊಂಡು ಹೇಳಿದ್ದು ನಾಯಕ ಅರುಗೌಡ. 

Advertisement

ಹೌದು, ಚಿತ್ರದಲ್ಲಿ ಅವರ ಗೆಳೆಯನ ಪಾತ್ರ ಮಾಡಿರುವ ಶಶಿ ಎಂಬ ನಟ, ಸಾಯುವ ದೃಶ್ಯದಲ್ಲಿ ನಟಿಸಬೇಕಿತ್ತಂತೆ. ಆದರೆ, ಆ ದೃಶ್ಯವನ್ನು ಚಿತ್ರೀಕರಿಸಲು ನಿರ್ದೇಶಕರು ಹಲವು ಬಾರಿ ರೆಡಿಯಾಗಿ ಸೆಟ್‌ಗೆ ಬಂದರೂ, ಅದೇಕೋ ಏನೋ, ಆ ದೃಶ್ಯದ ಚಿತ್ರೀಕರಣ ಮಾತ್ರ ಮುಂದಕ್ಕೆ ಹೋಗುತ್ತಲೇ ಇತ್ತಂತೆ. ಒಂದು ದಿನ ನಿಗದಿಪಡಿಸಿ, ಅದೇ ದಿನ ಸಾಯುವ ದೃಶ್ಯವನ್ನು ಚಿತ್ರೀಕರಿಸೋಕೆ ಅಣಿಯಾದರೂ, ಸಾಧ್ಯವಾಗದೆ ದಿನಗಳನ್ನು ಮುಂದಕ್ಕೆ ಹಾಕುತ್ತಲೇ ಇದ್ದರಂತೆ ನಿರ್ದೇಶಕರು.

ಕೊನೆಗೆ ಏನಾದರೂ ಸರಿ, ಆ ಸಾಯುವ ಎಪಿಸೋಡ್‌ ಅನ್ನು ಮುಗಿಸಿಬಿಡಬೇಕು ಅಂತ ಒಂದು ದಿನ ಚಿತ್ರೀಕರಣ ನಡೆಸಲು ಫಿಕ್ಸ್‌ ಆದರಂತೆ ನಿರ್ದೇಶಕರು. ಶಶಿ ಅವರು ಅಂದು ಸಾಯುವ ಹಾಗೆ ನಟಿಸಬೇಕಿತ್ತು. ಹಾಗೆಯೇ ನಟಿಸಿದರೂ ಕೂಡ. ಅದು ಯಶಸ್ವಿಯಾಗಿಯೂ ಮೂಡಿಬಂದಿದೆ. ಕಾಕತಾಳೀಯ ಎಂಬಂತೆ ಅವರು ಸಾಯುವ ದೃಶ್ಯ ಮಾಡಿದ ದಿನವೇ ಅವರ ಹುಟ್ಟುಹಬ್ಬವೂ ಇತ್ತಂತೆ! ಆ ಸೀನ್‌ ಮುಗಿದ ಮೇಲಷ್ಟೇ ಎಲ್ಲರಿಗೂ ಶಶಿ ಅವರ ಹುಟ್ಟುಹಬ್ಬ ಅಂತ ಗೊತ್ತಾಗಿದೆ.

ಸರಿ, ಆ ದೃಶ್ಯದಲ್ಲಿ ಸತ್ತವರಂತೆಯೇ ಅವರನ್ನು ಬಟ್ಟೆಯಲ್ಲಿ ಸುತ್ತಿ ಸುಮಾರು 4 ತಾಸಿನವರೆಗೆ ಪ್ಯಾಕ್‌ ಮಾಡಿ ಬಿಡಲಾಗಿತ್ತಂತೆ. ಬಿಸಿಲಿದ್ದರೂ, ಅವರು ಆ ಸೆಕೆಯನ್ನು ತಡೆದು, ತುಂಬ ಡೆಡಿಕೇಟ್‌ ಆಗಿ ಆ ಪಾತ್ರ ನಿರ್ವಹಿಸಿದ್ದಾರೆ. ಆ ಸೀನ್‌ ಮುಗಿದ ಮೇಲೆ ಬಟ್ಟೆ ಮತ್ತು ಕವರ್‌ ಬಿಚ್ಚಿದಾಗ, ಮೈಯಲ್ಲೆಲ್ಲಾ ನೀರು ಹರಿಯುತ್ತಿತ್ತಂತೆ. ಅಷ್ಟೊಂದು ನೀರು ಹರಿದರೂ, ದೇಹವೆಲ್ಲ ತಣ್ಣಗಾಗಿದ್ದರೂ, ಶಶಿ ಮಾತ್ರ ಕೊಟ್ಟ ಪಾತ್ರಕ್ಕೆ ಜೀವ ತುಂಬಿದ ಬಗೆಯನ್ನು ಅರುಗೌಡ ಗುಣಗಾನ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next