Advertisement

ಹಾಡಹಗಲೇ ಭೀತಿ ಹುಟ್ಟಿಸಿದ ಕಾಡಾನೆ

12:05 PM Dec 28, 2017 | |

ಸುಬ್ರಹ್ಮಣ್ಯ: ದೇವಚಳ್ಳ ಸಮೀಪದ ಕರಂಗಲ್ಲಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಕಾಡಾನೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕರಂಗಲ್ಲು ನಿವಾಸಿ ಜಯಪ್ರಕಾಶ ಅವರ ಪತ್ನಿ ದಿವ್ಯಾ ಅವರು ತೋಟದ ದಾರಿಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಬೃಹತ್‌ ಗಾತ್ರದ ದಂತ ಹೊಂದಿರುವ ಆನೆ ಕಾಣಿಸಿಕೊಂಡಿತು. ಬೆದರಿದ ಅವರು ಗಾಬರಿಯಿಂದ ಮನೆಯತ್ತ ಓಡಿ ಹೋದರು. ಇದೇ ವೇಳೆ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಪ್ರೇಮಾ ಮಾಣಿಬೆಟ್ಟು ಅವರಿಗೂ ಕಾಡಾನೆ ಕಾಣಿಸಿಕೊಂಡಿದೆ. ಇಬ್ಬರೂ ಕೂದಲೆಳೆಯ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.

Advertisement

ಮನೆಯಂಗಳಕ್ಕೂ ಬಂತು !
ಆನೆಯು ಕರಂಗಲ್ಲು ಪ್ರಕಾಶ, ನರಸಿಂಹ ಮಾಣಿಬೆಟ್ಟು, ಸುಂದರ ಮಾಣಿ ಬೆಟ್ಟು ಮೊದಲಾದವರ ತೋಟಗಳಲ್ಲಿ ಅಡ್ಡಾಡಿ ಹಾನಿ ಮಾಡಿದೆ. ಪುಂಡರೀಕ ಅವರ ಮನೆ ಅಂಗಳದಲ್ಲಿ 10 ನಿಮಿಷ ಕಳೆ ದಿದೆ. ಅಲ್ಲಿಂದ ನೆಡಿcಲ್‌ ಚೆನ್ನಪ್ಪ ಹಾಗೂ ಬೊಳಿಯಪ್ಪ ಮಾವಜಿ ಅವರಿಬ್ಬರ ತೋಟ ಹಾಗೂ ಮನೆಪಕ್ಕದಲ್ಲಿ ಸಂಚರಿಸಿದೆ. ಇತರ ಹಲವು ಮಂದಿ ತೋಟಗಳಿಗ ದಾಳಿ ನಡೆಸಿದೆ.  ಶಾಲೆ ಬಳಿಗೆ ಬಂದ ಕಾಡಾನೆ ಬೈಲಿನ ತೋಟದ ಉದ್ದಕ್ಕೂ ಸಂಚಾರ ಬೆಳೆಸಿದ ಕಾಡಾನೆ ಬಳಿಕ ಕರಂಗಲ್ಲು ಶಾಲೆ ಬಳಿ ಬಂದು ನಿಂತಿತು. ಮಧ್ಯಾಹ್ನ ಊಟ ಮಾಡಿ ಕೈತೊಳೆಯು ತ್ತಿದ್ದ ಮಕ್ಕಳ ಸನಿಹಕ್ಕೇ ಆನೆ ಬಂದು ಭಯದ ವಾತಾವರಣ ಸೃಷ್ಟಿಸಿತು. ಸ್ಥಳೀಯರು ಶಂಖ ಊದಿ, ಸಿಡಿಮದ್ದು ಸಿಡಿಸಿ ಓಡಿಸುವ ಪ್ರಯತ್ನ ನಡೆಸಿದರು. ಬಹು ಹೊತ್ತಿನ ಬಳಿಕ ಕಾಡಾನೆ ಕಾಡಿನತ್ತ ಮರಳಿದೆ. ದಾಳಿ ವೇಳೆ ಹಲವು ಕೃಷಿಕರ ಫ‌ಸಲು, ಕೃಷಿ ಸಲಕರಣೆಗಳಿಗೆ ನಾಶ ಮಾಡಿದೆ. ಹಟ್ಟಿ, ಪಂಪ್‌ ಶೆಡ್‌ಗಳಿಗೂ ಹಾನಿಯಾಗಿದೆ ಎಂದು ಕೃಷಿಕರು ತಿಳಿಸಿದ್ದಾರೆ.

ಗಜ ಯಾತ್ರೆ ವೇಳೆ ಅಲ್ಪಸ್ವಲ್ಪ ಹಾನಿ ಯಾಗಿದ್ದು ಬಿಟ್ಟರೆ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರತ್ಯಕ್ಷ ದರ್ಶಿ ಪದ್ಮನಾಭ ಕರಂಗಲ್ಲು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next