Advertisement

ಕೇಂದ್ರ ಸರಕಾರದ್ದು ಜನವಿರೋಧಿ ನೀತಿ: ಎಂ.ಎಸ್‌. ಮಹಮ್ಮದ್‌ ಟೀಕೆ

11:27 AM Mar 28, 2017 | |

ಪುತ್ತೂರು: ಗ್ಯಾಸ್‌, ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿಸಿದ್ದೇ ಮೋದಿ ಸರಕಾರದ ಸಾಧನೆ. ಬಡವರು, ಜನ ಸಾಮಾನ್ಯರು ದಿನಬಳಕೆ ವಸ್ತು ಗಳನ್ನು ಕೊಂಡುಕೊಳ್ಳಲಾಗದೇ ಪರದಾಡುತ್ತಿದ್ದರೂ ಕೇಂದ್ರದ ಬಿಜೆಪಿ ಸರಕಾರ ತನ್ನದು ಶ್ರೇಷ್ಠ ಆಡಳಿತ ವೆಂದು ಬೆನ್ನು ತಟ್ಟಿಕೊಳ್ಳುತ್ತಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಎಂದು ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌ ಟೀಕಿಸಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಗ್ಯಾಸ್‌ ಬೆಲೆ ಏರಿಕೆ ಹಾಗೂ ಇತರ ಜನ ವಿರೋಧಿ ನೀತಿ ವಿರುದ್ಧ ಸೋಮವಾರ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದರು.
ಪಾಕಿಸ್ತಾನದ ವಿರುದ್ಧ ಹರಿಹಾಯುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ನವಾಜ್‌ ಶರೀಫ್‌ ಮನೆಗೆ ಭೇಟಿ ನೀಡಿ ಕುಶಲೋಪರಿ ನಡೆಸುತ್ತಾರೆ. ಆದರೆ ಕೇರಳ ಮುಖ್ಯಮಂತ್ರಿ ಕರ್ನಾಟಕಕ್ಕೆ ಬರುವಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಾರೆ. ಬಿಜೆಪಿಯ ಈ ನಿಲುವು ಆ ಪಕ್ಷದ ನಿಜವಾದ ರಾಷ್ಟ್ರಪ್ರೇಮವನ್ನು ತೋರಿಸುತ್ತಿದೆ ಎಂದು ಟೀಕಿಸಿದರು.

ಸಂಕುಚಿತ ಮನೋಭಾವನೆ ಹೊಂದಿರುವ ಬಿಜೆಪಿ ಜನರ ಮನಸ್ಸನ್ನು ಭಾವನಾತ್ಮಕವಾಗಿ ಸೆಳೆದು ರಾಜಕೀಯ ಲಾಭಕ್ಕೆ ಹವಣಿಸುತ್ತಿದೆ. ಮಹಿಳೆಯ ಬಗ್ಗೆ ಅಪಾರ ಗೌರವವಿದೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಾರೆ. ಆದರೆ ಅದೇ ಪಕ್ಷದ ಸಂಸದ ಪ್ರತಾಪ್‌ಸಿಂಹ ಗುಂಡ್ಲುಪೇಟೆಯ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್‌ ವಿರುದ್ಧ ನೀಡಿರುವ ಕೀಳು ಮಟ್ಟದ ಹೇಳಿಕೆ ಆ ಪಕ್ಷದ ಮಹಿಳಾ ಗೌರವದ ಸಂಕೇತವೇ ಎಂದು ಪ್ರಶ್ನಿಸಿದರು.ಜೈಲಿಗೆ ಹೋದವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಬಿಟ್ಟೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸು ತ್ತೇನೆ ಎನ್ನುವ ಅವರು ಜೈಲಿನಲ್ಲಿ ಕಾಲ ಕಳೆದು
ದನ್ನು ಮರೆಯಬಾರದು. ಈ ಹಿಂದಿನ ಬಿಜೆಪಿ ಸರಕಾರದ ಸಾಲು-ಸಾಲು ಮಂತ್ರಿ ಗಳು ಭ್ರಷ್ಟಾಚಾರ, ಅನಾಚಾರಗಳಿಂದ ಜೈಲು ಸೇರಿದ್ದನ್ನು ಜನರು ಮರೆತಿಲ್ಲ ಎಂದರು.

ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ
ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲುವ ಭ್ರಮೆಯಲ್ಲಿದೆ. ಈ ಹಿಂದೆ ಐದು ವರ್ಷ ಬಿಜೆಪಿ ಆಡಳಿತವನ್ನು ಕಂಡಿರುವ ಮತದಾರರು, ಇನ್ನು ಆ ತಪ್ಪು ಮಾಡಲಾರರು. ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸುವುದು ನಿಶ್ಚಿತ ಎಂದರು.

ವಿನೂತನ ಪ್ರತಿಭಟನೆ
ಗ್ಯಾಸ್‌ ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್‌ ವಿನೂತನ ಪ್ರತಿಭಟನೆ ನಡೆಸಿತ್ತು. ಗ್ಯಾಸ್‌ ಸಿಲಿಂಡರ್‌ ಬಳಸಿ ಸ್ಥಳದಲ್ಲಿಯೇ ಚಹಾ ತಯಾರಿಸಿ ಪ್ರತಿಭಟನ ಸ್ಥಳದಲ್ಲಿದ್ದವರಿಗೆ ನೀಡಲಾಯಿತು. ಮಹಿಳಾ ಕಾಂಗ್ರೆಸ್‌ ಪ್ರತಿನಿಧಿಗಳು ಚಹಾ ತಯಾರಿಯಲ್ಲಿ ಮುಂಚೂಣಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next