Advertisement

ಒಂದೇ ಕಾಮಗಾರಿ..ಎರಡು ಬಾರಿ ಭೂಮಿಪೂಜೆ

03:12 PM Jun 19, 2017 | |

ಹುಬ್ಬಳ್ಳಿ: ನಗರದ ಬಂಕಾಪುರ ಚೌಕ್‌ನಿಂದ ಕಿತ್ತೂರ ಚನ್ನಮ್ಮ ವೃತ್ತ ವರೆಗಿನ ರಸ್ತೆ ಅಗಲೀಕರಣದ ಒಂದೇ ಕಾಮಗಾರಿಗೆ ಕೇಂದ್ರ ಸಚಿವ ಹಾಗೂ ಸ್ಥಳೀಯ ಶಾಸಕರಿಂದ ಪ್ರತ್ಯೇಕವಾಗಿ ಎರಡೆರಡು ಬಾರಿ ಭೂಮಿಪೂಜೆಯ ಭಾಗ್ಯ ದೊರೆಯುವಂತಾಯಿತು.

Advertisement

ಅಂದಾಜು 39.09 ಕೋಟಿ ರೂ. ವೆಚ್ಚದಲ್ಲಿ ಬಂಕಾಪುರ ಚೌಕ್‌ನಿಂದ ಕೆಸಿ ವೃತ್ತದವರೆಗಿನ ರಸ್ತೆಯನ್ನು ಚತುಷ್ಪಥವನ್ನಾಗಿ ಅಗಲೀಕರಣ ಮಾಡುವ ಕಾಮಗಾರಿಯನ್ನು ಕೇಂದ್ರ ಸರಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಹಾಯಕ ಸಚಿವ ಧರ್ಮೇಂದ್ರ ಪ್ರಧಾನ್‌ ಶನಿವಾರ ಚಾಲನೆ ನೀಡಿದ್ದರು.

ಆದರೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ  ಹಾಗೂ ಸ್ಥಳೀಯ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಕಾರ್ಯಕ್ರಮ ನಿಗದಿಪಡಿಸಿದ ಸಮಯಕ್ಕಿಂತ ಸ್ವಲ್ಪ ತಡವಾಗಿ ಆಗಮಿಸಿದ್ದರು. ಆದರೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ಇನ್ನೊಂದು ಕಾರ್ಯಕ್ರಮ ಇದ್ದುದರಿಂದ ಅವರು ಬರುವುದರೊಳಗೆ ಭೂಮಿಪೂಜೆ ಮುಗಿಸಿಕೊಂಡು ಹೋಗಿದ್ದರು.

ಇದರಿಂದ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಅಸಮಾಧಾನಗೊಂಡರಲ್ಲದೆ, ತಾವು ಸಹ ಭೂಮಿಪೂಜೆ ಮಾಡುತ್ತೇವೆಂದು ಘೋಷಣೆ ಮಾಡಿದ್ದರು. ಅದರಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರು ರವಿವಾರ ಮಧ್ಯಾಹ್ನ ಒಂದೇ ಕಾಮಗಾರಿಗೆ ಎರಡನೇ ಬಾರಿಗೆ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next