ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಬಿ.ಟಿ. ಲೇಔಟ್ ನಿವಾಸಿ ಕುಂದನ್‌ಮಲ್ ದಂಪತಿ ಪುತ್ರಿ, 19 ವರ್ಷದ ಕಾಲೇಜು ವಿದ್ಯಾರ್ಥಿನಿ ರಕ್ಷಾಕುಮಾರಿ ಜೂ. 1 ರಂದು ಜೈನ ಸನ್ಯಾಸ್ಯತ್ವ ದೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಜೈನ ಸಮಾಜದ ಮುಖಂಡ ಜಯಚಂದ್ರ ಪಿ. ಜೈನ್ ತಿಳಿಸಿದ್ದಾರೆ.
ರಕ್ಷಾ ಅವರ ದೀಕ್ಷಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9ಕ್ಕೆ ಚೌಕಿಪೇಟೆಯ ಶ್ರೀ ಪಾರ್ಶ್ವನಾಥ ಜೈನ ಮಂದಿದರದಿಂದ ಪ್ರಾರಂಭವಾಗುವ ಬೈಕ್ ರ್ಯಾಲಿ ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆಯ ಮೂಲಕ ಶ್ರೀ ಪಾರ್ಶ್ವನಾಥ ಜೈನ ಮಂದಿರ ತಲುಪಲಿದೆ.
ಸಂಜೆ 6.30ಕ್ಕೆ ಮತ್ತೂಮ್ಮೆ ಬೈಕ್ ರ್ಯಾಲಿ ನಡೆಯಲಿದ್ದು, ದೀಕ್ಷಾ ಕಾರ್ಯಕ್ರಮ ನಡೆಯುವ ಆವರಗೆರೆಯ ನಾಗೇಶ್ವರ ಪಾರ್ಶ್ವನಾಥ ಜೈನ ಮಂದಿರದವರೆಗೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುವಾರ ಬೆಳಗ್ಗೆ 4ಕ್ಕೆ ಗಂಟೆಗೆ ನಡೆಯುವ ದೀಕ್ಷಾ ಕಾರ್ಯಕ್ರಮದಲ್ಲಿ ದೀಕ್ಷಾ ಪ್ರಧಾನರಾದ ಶ್ರೀ ಅಜಿತಶೇಖರ ಸುಹೀಶ್ವರ ಜೀ, ಶ್ರೀ ಜಿನಸುಂದರ ಸುಹೀಶ್ವರಜೀ, ಸಾಧ್ವಿಗಳಾದ ದರ್ಶನ ಪ್ರಭಾಜಿ, ಮುಕ್ತಿ ಪ್ರಭಾಜೀ ಸಾನ್ನಿಧ್ಯ ವಹಿಸುವರು.
ದೀಕ್ಷಾ ನಂತರ ರಕ್ಷಾಕುಮಾರಿ ಮುಮುಕ್ಷು ರಕ್ಷಾಕುಮಾರಿ ಅಂದರೆ ಸಾಧ್ವಿ ದೀಕ್ಷಾ ಆಗಲಿದ್ದಾರೆ. ದಾವಣಗೆರೆಯಲ್ಲಿ ಕಳೆದ ಒಂದು ತಿಂಗಳನಿಂದ ಮೂವರು ಯುವತಿಯರು, ಓರ್ವ ಯುವಕ ಸನ್ಯಾಸ್ಯತ್ವದ ದೀಕ್ಷೆ ಪಡೆದುಕೊಂಡಿದ್ದರು ಎಂದರು. ರಕ್ಷಾಕುಮಾರಿಗೆ ಸದಾ ಆಧ್ಯಾತ್ಮಿಕತೆಯ ಬಗ್ಗೆ ಒಲವು ಇತ್ತು.
ಕಳೆದ 5 ವರ್ಷದಿಂದಲೂ ದೀಕ್ಷೆ ತೆಗೆದುಕೊಳ್ಳುವ ಇಚ್ಚೆ ಇತ್ತಾದರೂ ತಂದೆ-ತಾಯಿ ಒಪ್ಪಿಗೆ ನೀಡರಲಿಲ್ಲ. ಈಗ ಅಂತಿಮವಾಗಿ ಒಪ್ಪಿಗೆ ನೀಡಿದ ನಂತರ ದೀಕ್ಷೆ ಪಡೆಯಲಿದ್ದಾರೆ ಎಂದು ತಿಳಿಸಿದರು. ಸಮಾಜದ ಮುಖಂಡರಾದ ಗೌತಮ್ ಜೈನ್, ಚೈನ್‌ರಾಜ್ ಜೈನ್, ಮೋಹನ್‌ಲಾಲ್ ಜೈನ್, ರಾಜೇಂದ್ರ ಜೈನ್, ವಿಶಾಲ್ ಜೈನ್, ಪ್ರದೀಪ್ ಜೈನ್ ಇತರರಿದ್ದರು.