Advertisement
ನಗರದ ಬಿವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ರವಿವಾರ ವಿಕಾಸ ಅಕಾಡೆಮಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಸಂಗಮ ಕಾರ್ಯಕ್ರಮ ಉದ್ಘಾಟಿಸಿ “ವಾತ್ಸಲ್ಯ ಜಗದ ಬೆಳಕು ಮಾತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಹೆಣ್ಣಿಲ್ಲದೆ ವಿಶ್ವ ನಿರ್ಮಾಣವೇ ಅಸಾಧ್ಯ. ಇಂದು ಭ್ರೂಣ ಹತ್ಯೆಯಿಂದ 10 ವರ್ಷದಲ್ಲಿ 10 ಕೋಟಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ. ಈ ಕೃತ್ಯದಲ್ಲಿ ವೈದ್ಯರ ಪಾಲು ಸಹ ಇದೆ ಎಂದರು.
Related Articles
Advertisement
ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವೈದ್ಯ ಮತ್ತು ಇಂಜಿನಿಯರೇ ಆಗು ಎಂದು ಹೇಳುವ ಮೂಲಕ ಅವರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾರೆ. ಇಂದು ದೇಶದಲ್ಲಿ 58 ಲಕ್ಷ ಯುವಕರು ಇಂಜಿನಿಯಗಳಿದ್ದು, ಕೇವಲ 5 ಸಾವಿರ ರೂ. ವೇತನದಲ್ಲಿ ದುಡಿಯಲು ಸಿದ್ಧರಿದ್ದಾರೆ. ಶಿಕ್ಷಣ ಜ್ಞಾನಕ್ಕಾಗಿ ಇರಬೇಕೆ ವಿನಹ ನೌಕರರಿಗಾಗಿ ಅಲ್ಲ. ಹಾಗಾಗಿ ನನ್ನ ಮಗ ಕೊಡುವವನಾಗಬೇಕೆ, ಹೊರತು ಬೇಡುವವನಾಗಬಾರದು ಎಂದು ಅತ್ಮಸ್ಥೈರ್ಯ ತಾಯಂದಿರಲ್ಲಿ ಇರಬೇಕು. ಆಗ ಮಾತ್ರ ಭಾರತ ಮಾತೆ ಜಗನ್ಮಾತೆ ಆಗಲು ಸಾಧ್ಯ ಎಂದು ಕರೆ ನೀಡಿದರು.
ಐಎಎಸ್ ಪಾಸ್ ಆದವರು ಪಂಜರದ ಹಕ್ಕಿಗಳಿದ್ದಂತೆ. ಪ್ರತಿ ಬಾರಿ 12 ಲಕ್ಷ ಯುವಕರು ಐಎಎಸ್‌ಗಾಗಿ ಪ್ರವೇಶ ಪಡೆದರೆ ಈ ಪೈಕಿ ಪಾಸ್ ಆಗುವರು 200 ಜನ ಮಾತ್ರ. ಅದರಲ್ಲಿ ಖುಷಿ ಅನುಭವಿಸುವರು 50 ಜನ ಮಾತ್ರ. ತನ್ನಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹಾರುವ ಹಕ್ಕಿಗಳಾಗಿ ಬದುಕಬೇಕು ಎಂದು ಕಿವಿ ಮಾತು ಹೇಳಿದರು.
ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕಾಡೆಮಿ ಜಿಲ್ಲಾ ಸಂಚಾಲಕ ಕರ್ನಲ್ ಶರಣಪ್ಪ ಸಿಕೆನಪುರೆ, ಗುತ್ತಿಗೆದಾರ ಗುರುನಾಥ ಕೊಳ್ಳುರ್, ಗುರುದ್ವಾರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ ವೇದಿಕೆಯಲ್ಲಿದ್ದರು. ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶಾಂತಕುಮಾರ ಬಿರಾದಾರ ನಿರೂಪಿಸಿದರು. ಕಾಮಶಟ್ಟಿ ಚಿಕಬಸೆ ವಂದಿಸಿದರು. ನಾಟ್ಯಶ್ರೀ ನೃತ್ಯಾಲಯ ಸೇರಿದಂತೆ ಜಿಲ್ಲೆಯ ಇತರೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ದೇಶದಲ್ಲಿರುವ 18 ಕೋಟಿ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ವಿಷಯ ಕುರಿತು ಸಂಸತ್‌ನಲ್ಲಿ ಚರ್ಚೆಯ ವೇಳೆ ಎಲ್ಲ ಸಂಸದರು ಸಹಮತ ವ್ಯಕ್ತಪಡಿಸಿರುವುದು ಬೇಸರದ ಸಂಗತಿ. ನಿರುದ್ಯೋಗಿಗಳಿಗೆ ಭತ್ಯೆ ನೀಡಿದರೆ ಯುವಕರಲ್ಲಿನ ಜ್ಞಾನ, ಬುದ್ದಿ ದುಡಿಮೆ ಸತ್ತು ಹೋಗುತ್ತದೆ. ದುಡಿಯುವ ಜನರು ಮನೆಯಲ್ಲಿ ಕುಳಿತರೆ ದೇಶ ಪ್ರಗತಿ ಸಾಧಿಸದು. ಜಗತ್ತಿನ ನಕಲು ಮಾಡಿದರೆ ಭಾರತ ಮುಂದೆ ಬರುವುದಿಲ್ಲ.ಬಸವರಾಜ ಪಾಟೀಲ ಸೇಂಡ, ರಾಜ್ಯಸಭಾ ಸದಸ್ಯ