Advertisement

ಮೂರ್ಖರು ಕೊಟ್ಟ ತೀರ್ಪುಗಳಿಂದ ಕೆಟ್ಟವರ ಆಳ್ವಿಕೆ

07:45 AM Oct 02, 2017 | Team Udayavani |

ಬೆಂಗಳೂರು: “ನಮ್ಮ ಸುತ್ತಲಿನ ಇಂದಿನ ಎಲ್ಲ ಸಮಸ್ಯೆಗಳಿಗೂ ದೇಶದ ಪ್ರತಿಯೊಬ್ಬ ಪ್ರಜೆಯ ಮೂರ್ಖತನವೇ ಕಾರಣ. ಚುನಾವಣಾ ಪರೀಕ್ಷೆ ಯಲ್ಲಿ ಈ ಮೂರ್ಖರು ಕೊಟ್ಟ ತೀರ್ಪುಗಳಿಂದ ಕೆಟ್ಟವರೇ ನಮ್ಮನ್ನು ಆಳುವಂತಾಗಿದೆ’ ಎಂದು ನಟ ಪ್ರಕಾಶ್‌ ರೈ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ಭಾನುವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ಹಮ್ಮಿಕೊಂಡಿದ್ದ 11ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

“ಮುಗಟಛಿತೆ ಹುಟ್ಟಿನಿಂದ ಬರುವಂತಹದ್ದು. ಹಾಗಾಗಿ, ತಮಗೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕು. ಆದರೆ, ಜೀವಪಣಕ್ಕಿಟ್ಟು ಪ್ರಗತಿಪರರು ಹೇಳುತ್ತಿದ್ದರೂ ಕೇಳಿಸಿಕೊಳ್ಳುವ ವ್ಯವಧಾನ ಜನರಲ್ಲಿ ಇಲ್ಲವಾಗಿದೆ. ಹಾಗಾಗಿ ಇದು ಮೂರ್ಖತನವಲ್ಲದೆ ಮತ್ತೇನು ಎಂದು ಕೇಳಿದ ಅವರು, ಈ ನಿಟ್ಟಿನಲ್ಲಿ ನಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲ ರಾದಾಟಛಿಂತಗಳಿಗೂ ನಾವೇ ಜವಾಬ್ದಾರರು ಎನ್ನುವುದು ತಿಳಿಯಬೇಕು. ಅಲ್ಲಿಯವರೆಗೂ ಯಾವುದೇ ಪ್ರಗತಿಪರ ಚಿಂತನೆಗಳು ನಮ್ಮಿಂದ ಹೊರಹೊಮ್ಮಲು ಸಾಧ್ಯವಿಲ್ಲ ‘ ಎಂದು ಹೇಳಿದರು.

ಅಸಹಿಷ್ಣು ರಾಷ್ಟ್ರ ನಿರ್ಮಾಣ: ಡಿವೈಎಫ್ಐ ಅಖೀಲ ಭಾರತ ಅಧ್ಯಕ್ಷ ಮಹಮದ್‌ ರಿಯಾಸ್‌ ಮಾತನಾಡಿ, “ಕೋಮುವಾದಿ ಶಕ್ತಿಗಳಿಗೆ ಕೇಂದ್ರ ಸರ್ಕಾರವೇ ಬೆಂಬಲವಾಗಿ ನಿಂತಿರುವುದರಿಂದ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವ, ಜಾತ್ಯತೀತತೆ ಅವನತಿಯತ್ತ ಸಾಗುತ್ತಿದೆ. ಅಸಹಿಷ್ಣು ರಾಷ್ಟ್ರ ನಿರ್ಮಾಣ ಇದರ ಅಂತಿಮ ಗುರಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಪ್ರಯೋಗ ಶಾಲೆ: ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, “ಮತೀಯಶಕ್ತಿಗಳು ಗಡಿಯಲ್ಲಿ ಯುದಟಛಿದ ಉನ್ಮಾದ ಬಿತ್ತಿದರೆ, ದೇಶದ ಒಳಗೆ ಆಂತರಿಕ ನಾಗರಿಕ ಯುದಟಛಿ ಹುಟ್ಟುಹಾಕುತ್ತಿವೆ. ಈ ಮತೀಯ ಅಜೆಂಡಾದ ಪ್ರಯೋಗ ಶಾಲೆಯಾಗಿ ಕರಾವಳಿ ಮಾರ್ಪಡುತ್ತಿದೆ. ಇವೆಲ್ಲವುಗಳ ಭರಾಟೆಯಲ್ಲಿ ನಿಜವಾದ ಸಮಸ್ಯೆಗಳು ಕಳೆದುಹೋಗುತ್ತಿವೆ’ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, “ನಮ್ಮ ಬಲಹೀನತೆಯೇ ಎದುರಾಳಿಗಳ ಬಲವಾಗಿದೆ. ಆ ಎದುರಾಳಿಗಳಿಗೆ ಮಾಧ್ಯಮಗಳೂ ಬೆಂಬಲವಾಗಿ ನಿಂತಿವೆ. ಕೇವಲ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲ; ದೇವಸ್ಥಾನಗಳೂ ಮಾಧ್ಯಮಗಳಾಗಿವೆ. ಇಲ್ಲಿ ನಿತ್ಯ ಪ್ರಸಾದದ ರೂಪದಲ್ಲಿ ಮನಸ್ಸು
ಕಲುಷಿತಗೊಳಿಸುವ ವಿಷವನ್ನು ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
ಹಿರಿಯ ಕಾರ್ಮಿಕ ಮುಖಂಡ ಆರ್‌. ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

ಉತ್ತರ ಕೊಡುವ ಸಮಯ ಬಂದಿದೆ
“ಗೌರಿ ಲಂಕೇಶ್‌ ಅವರನ್ನು ಕೊಂದವರಾರು ಎನ್ನುವುದು ಗೊತ್ತಾಗದಿರಬಹುದು. ಆದರೆ, ಹತ್ಯೆಯಿಂದ ಸಂಭ್ರಮಿಸುತ್ತಿರುವವರಾರು ಎನ್ನುವುದು ನಮ್ಮ ಕಣ್ಮುಂದೆಯೇ ಇದೆ. ಸಾಮಾಜಿಕ ಜಾಲತಾಣಗಳ ಮೂಲಕ
ವ್ಯಕ್ತಿಯೊಳಗಿನ ಕ್ರೌರ್ಯ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ನಟ ಪ್ರಕಾಶ್‌ ರೈ ಸೂಚ್ಯವಾಗಿ ಹೇಳಿದರು. “ಆ ದಾರುಣ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯನ್ನೂ ಫಾಲೋ ಮಾಡುತ್ತಿದ್ದಾರೆ. ಆದರೆ, ಇದನ್ನೆಲ್ಲಾ ನೋಡಿಯೂ ಕಣ್ಮುಚ್ಚಿ ಕುಳಿತುಕೊಳ್ಳುವ ಪ್ರಧಾನಿ ನಮ್ಮ ಮುಂದಿದ್ದಾರೆ. ಅದೇನೇ ಇರಲಿ, ಆದದ್ದೆಲ್ಲಾ ಒಳ್ಳೆಯದಕ್ಕೇ. ಹೀಗೆ ನಾವು ಉಂಡ ನೋವುಗಳೆಲ್ಲಾ ಒಳ್ಳೆಯದಕ್ಕೆ ಎಂದು ತಿಳಿಯಬೇಕು. ಅಂತಹವರಿಗೆ ಉತ್ತರ ಕೊಡುವ ಸಮಯ ಹತ್ತಿರ ಬಂದಿದೆ’ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next