Advertisement
ವೀರಶೈವ ಸಮಾಜದಲ್ಲಿನ ಎಲ್ಲಾ ಒಳಪಂಡಗಳು ಒಂದಾದರೆ ನಮ್ಮದೇ ಸರ್ಕಾರವನ್ನು ರಚಿಸಬಹುದಾಗಿದೆ. ಆದರೆ, ಇಡೀ ಸಮಾಜ ಒಳಪಂಗಡಗಳಲ್ಲಿ ಹರಿದುಹೋಗಿವೆ ಎಂದರು. ನಮ್ಮ ಸಮಾಜ ರಾಜ್ಯದಲ್ಲಿಯೇ ಅತಿದೊಡ್ಡ ಸಮಾಜವಾಗಿದೆ. ನಮ್ಮಲ್ಲಿನ ಒಳಪಂಗಡಗಳ ಕಲಹ, ವೈಯಕ್ತಿಕ ಆಸಕ್ತಿಗಳಿಂದ ಇಂದಿಗೂ ನಮಗೆ ಸಿಗಬೇಕಾದ ಹಕ್ಕು, ಸವಲತ್ತು ಸಿಗುತ್ತಿಲ್ಲ. ಹಕ್ಕಿಗಾಗಿ ಹೋರಾಟ ಮಾಡುವ ಸ್ಥಿತಿ ಇದೆ.
Related Articles
Advertisement
ಇದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ನಮ್ಮ ಯುವ ಸಮೂಹದಿಂದ ನಮ್ಮಲ್ಲಿರುವ ಒಳಪಂಡಗಳು ದೂರ ಆಗುವಂತೆ ನಾವು ಮಾಡಬೇಕಿದೆ ಎಂದರು. ಇಂದಿನ ಕಾರ್ಯಕ್ರಮಕ್ಕೆ ಅನೇಕ ಮುಖಂಡರು ಗೈರಾಗಿದ್ದಾರೆ. ಇದಕ್ಕೆ ಕಾರಣ ಅನೇಕ ಇವೆ. ಆದರೆ, ಅವರೆಲ್ಲರ ಬೆಂಬಲ ನಿಮಗೆ ಮುಂದೆ ಸಿಕ್ಕೇ ಸಿಗಲಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಹೊಂದಿದವರ ಬೆಂಬಲಕ್ಕೆ ಸಮಾಜ ಸದಾ ನಿಲ್ಲುತ್ತದೆ.
ಇದನ್ನು ಯುವ ಸಮೂಹ ಮನಗಾಣಬೇಕು. ಮುಂದಿನ ವರ್ಷದ ವೇಳೆಗೆ ಸಮಿತಿಯ ಧ್ಯೇಯೋದ್ದೇಶಗಳ ಪೈಕಿ ಕೆಲವನ್ನಾದರೂ ಈಡೇರಿಸಿಕೊಂಡು ಸಮಾವೇಶ ಮಾಡುವಂತೆ ಆಗಬೇಕು ಎಂದು ತಿಳಿಸಿದರು. ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಸಂಘರ್ಷ ಸಮಿತಿ ಕಟ್ಟಿಕೊಂಡಿರುವುದು ಇತರೆ ಯಾವುದೋ ಸಮಾಜದ ಜೊತೆ ಸಂಘರ್ಷ ಕಟ್ಟಿಕೊಳ್ಳಲಲ್ಲ.
ಆದರೆ, ನಮ್ಮ ಸಮಾಜಕ್ಕೆಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು. ಮುಂದೆ ನಮ್ಮ ಸಮಿತಿ ಸಮಾಜದ ಯಾವುದೇ ವ್ಯಕ್ತಿ, ಸಮುದಾಯಕ್ಕೆ ಅನ್ಯಾಯವಾದರೂ ಅವರ ಪರ ನಿಲ್ಲಲಿದೆ ಎಂದರು. ಬಾಗಲಕೋಟೆ ಜಿಲ್ಲಾ ಪಂಚಾಯತ್ ಧ್ಯಕ್ಷೆ ವೀಣಾ ಕಾಶಪ್ಪನವರ್, ದಾವಣಗೆರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ರಮೇಶ್, ಹೈಕೋಟ್ ವಕೀಲ ಅಮೃತೇಶ್, ಸಹಕಾರಿ ಧುರೀಣ ಎನ್.ಎಂ.ಜೆ.ಬಿ. ಆರಾಧ್ಯ,
ಕೈಗಾರಿಕೋದ್ಯಮಿ ಡಿ.ವಿ. ಪ್ರಶಾಂತ್,ನಗರಪಾಲಿಕೆ ಸದಸ್ಯ ಡಿ.ಕೆ. ಕುಮಾರ್, ಸಮಿತಿಯ ದೇವರಮನಿ ಶಿವಕುಮಾರ್, ಒಣರೊಟ್ಟಿ ಮಹಾಂತೇಶ್, ಬೂಸನೂರು ವಿಶ್ವನಾಥ್, ಉಮೇಶ್ ಕತ್ತಿ, ಜಿ. ಶಿವಯೋಗಪ್ಪ, ಕಿರುವಾಡಿ ಸೋಮಶೇಖರ್, ದೇವರಮನಿ ಶಿವಕುಮಾರ್, ಗಣೇಶ ಹಾದಿಮನಿ, ಅಜಯ್, ಸಿದ್ದೇಶಪ್ಪ ಇತರರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮದ ಮುನ್ನ ಜಯದೇವ ವೃತ್ತದಿಂದ ಮೆರವಣಿಗೆ ನಡೆಯಿತು.