Advertisement

ಆರಂಭಕ್ಕೂ ಮುನ್ನ ಪಾಳುಬಿದ್ದ ಎಸ್‌ಟಿಪಿ ಘಟಕ

05:49 PM Feb 15, 2021 | Team Udayavani |

ಹುಮನಾಬಾದ: ಬಹು ಕೋಟಿ ವೆಚ್ಚದಲ್ಲಿ ತಾಲೂಕಿನ ಧುಮ್ಮನಸೂರ್‌ ವಲಯದಲ್ಲಿ ನಿರ್ಮಾಣಗೊಂಡ ಯುಜಿಡಿ ಕಾಮಗಾರಿಯ ಎಸ್‌ಟಿಪಿ ಪ್ರಾರಂಭಕ್ಕೂ
ಮುನ್ನವೇ ಪಾಳು ಬಿದ್ದಿದೆ. ಪಟ್ಟಣದ 27 ವಾರ್ಡ್‌ಗಳ ತ್ಯಾಜ್ಯ ನೀರು ಸಂಸ್ಕರಿಸಿ ಪುನರ್‌ ಬಳಕೆಗೆ ಅನುವಾಗುವಂತೆ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ವು ನಿರ್ವಹಣೆ ಕೊರತೆ ಹಾಗೂ ತ್ಯಾಜ್ಯ ನೀರಿನ ಕೊರತೆಯಿಂದ
ನಲಗುವಂತಾಗಿದೆ.

Advertisement

ಈ ಘಟಕ ಪ್ರತಿ ದಿನ 6 ಎಂಎಲ್‌ಡಿ ನೀರಿನ ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಈ ವರೆಗೆ ಪಟ್ಟಣದ ಯಾವ ಬಡಾವಣೆಯಿಂದ ಹನಿ ಕೊಳಚೆ ನೀರು ಈ ಘಟಕಕ್ಕೆ ಬಿದ್ದಿಲ್ಲ. ಕಾರಣ ಇಂದಿಗೂ ವಾಡ್‌ವಾರು ಪ್ರಾಯೋಗಿಕ ಪರೀಕ್ಷೆಯೇ ನಡೆದಿಲ್ಲ. ಪಟ್ಟಣದ ಎಲ್ಲ ಕಡೆಗಳಲ್ಲಿ ರಸ್ತೆ ಅಗೆದು ಒಳಚರಂಡಿಗಾಗಿ ಪೈಪ್‌ಲೈನ್‌ ಮಾಡಲಾಗಿದೆ. ಆ ಪೈಪ್‌ ಲೈನ್‌ಗೆ ಪುರಸಭೆ ವತಿಯಿಂದ ಸಂಪರ್ಕ ಕಲ್ಪಿಸುವ ಕೆಲಸ ಇಂದಿಗೂ ಬಾಕಿ ಇದೆ. ಎಲ್ಲ ಕಡೆಗಳಿಂದ ಬರುವ ಕೊಳಚೆ ನೀರು ಜೇರಪೇಟ್‌ ಹೊರ ಪ್ರದೇಶದಲ್ಲಿ ಹಾಗೂ ಎಂಪಿ ಬಡಾವಣೆ ಹೊರ ಪ್ರದೇಶದಲ್ಲಿಸೇರುವಂತೆ ಮಾಡಿದ್ದು, ಅಲ್ಲಿಂದ ಪಂಪಿಂಗ್‌ ಮಾಡಿ ಎಸ್‌ಟಿಪಿಗೆ ಸೇರಬೇಕು. ಗುತ್ತಿಗೆದಾರ ಮೋಹನ ಅವರ ಪ್ರಕಾರ ಈಗಾಗಲೇ ಅಧಿಕಾರಿಗಳ ಎದುರಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ತೋರಿಸಲಾಗಿದೆ, ಸಂಬಂ  ಧಿಸಿದ ಎಲ್ಲ ದಾಖಲೆಗಳು ಇವೆ ಎಂದು ಹೇಳುತ್ತಿದ್ದಾರೆ. ಆದರೆ ಪ್ರಾಯೋಗಿಕ ಪರೀಕ್ಷೆ ನಡೆಸಿದರೆ ಎಸ್‌ಟಿಪಿ ಘಟಕದಲ್ಲಿ ಗಿಡ-ಮರಗಳು ಏಕೆ ಬೆಳೆದು ನಿಂತಿವೆ?
ಎಂದು ಪುರಸಭೆ ಸದಸ್ಯರು ಪ್ರಶ್ನಿಸುತ್ತಿದ್ದಾರೆ.

7 ವರ್ಷಗಳ ಕಾಲ ನಡೆದ ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ. ವಿವಿಧೆಡೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳುತ್ತಿರುವ ಗುತ್ತಿಗೆದಾರರು ಪುರಸಭೆಗೆ ಏಕೆ ದಾಖಲೆ ಸಲ್ಲಿಸಿ ಹಸ್ತಾಂತರಿಸಿಲ್ಲ. ಯಾವ ಕಾರಣಕ್ಕೆ ಬೆಂಗಳೂರಿನ ಕೆಯುಐಡಿಎಫ್‌ಸಿ ಅ ಧಿಕಾರಿಗಳಿಗೆ
ಸಂಪರ್ಕ ಮಾಡಿ ವರದಿಗಳು, ಸಂಬಂಧಿ ಸಿದ ದಾಖಲೆಗಳು ಸಲ್ಲಿಸಿ ಕಾಮಗಾರಿ ಪೂರ್ಣಗೊಂಡಿದೆ ಎಂದು ವರದಿ ಪಡೆದಿದ್ದಾರೆ. ಮೊದಲು ಎಲ್ಲ ವಾರ್ಡ್‌ಗಳಿಂದ ಪ್ರಾಯೋಗಿಕ ಪರೀಕ್ಷೆ ನಡೆಸಿ ಪರೀಕ್ಷೆ ವಿಫಲಗೊಂಡರೆ 2013ರಿಂದ ಈವರೆಗೆ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮವಹಿಸಬೇಕು.
ಎಸ್‌.ಎ. ಬಾಸಿದ್‌, ಪುರಸಭೆ ಸದಸ್ಯ

ಒಳಚರಂಡಿ ಕಾಮಗಾರಿ ಪಟ್ಟಣದ ಜನರಿಗೆ ಅನುಕೂಲ ಆಗಬೇಕಿತ್ತು. ಆದರೆ ವಿವಿಧೆಡೆ ನಡೆದಿರುವ ಕಾಮಗಾರಿ ನೋಡಿದರೆ ಪೂರ್ಣ ಪ್ರಮಾಣದಲ್ಲಿ ಯೋಜನೆ ಯಶಸ್ವಿಯಾಗುವುದು ಬಹುತೇಕ ಅನುಮಾನ. ಕಾಮಗಾರಿ ಸಂದರ್ಭದಲ್ಲಿ ಸಂಬಂಧಪಟ್ಟವರು ನಿಗಾ ವಹಿಸಿದರೆ ಇಂದು ಯೋಜನೆ ಆರಂಭಗೊಂಡು ಜನರಿಗೆ
ಲಾಭವಾಗುತ್ತಿತ್ತು. ಇದೀಗ ಯುಜಿಡಿ ಎಸ್‌ಟಿಪಿ   ಘಟಕ ಸಂಪೂರ್ಣ ಹಾಳಾದಂತೆ ಕಂಡು ಬರುತ್ತಿದೆ. ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಹಿರಿಯ ಅಧಿ ಕಾರಿಗಳು
ಮುಂದಾಗಬೇಕು.

ಗಿರೀಶ ಮಾಲಿಪಾಟೀಲ, ಪುರಸಭೆ ಮಾಜಿ ಸದಸ್ಯರು ಹಾಗೂ ಬಿಜೆಪಿ ನಗರ ಅಧ್ಯಕ್ಷರು

Advertisement

ಪಟ್ಟಣದಲ್ಲಿ ನಡೆದ 28 ಕೋಟಿಗೂ ಅಧಿಕ ಮೊತ್ತದ ಯುಜಿಡಿ ಕಾಮಗಾರಿ 2019ರಲ್ಲಿ ಪೂರ್ಣಗೊಂಡಿದ್ದು, ಒಂದು ವರ್ಷದ ನಿರ್ವಹಣೆ ಅಧಿವ  ಕೂಡಮುಗಿದಿದೆ ಎಂದು ಗುತ್ತಿದಾರರು ಹೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡಿರುವ ಕುರಿತು ಪುರಸಭೆ ಅಧಿಕಾರಿ ದಾಖಲೆಗಳಿಗೆ ಸಹಿ ಹಾಗೂ ಚಿತ್ರಗಳು ಇರುವ ಬಗ್ಗೆ ಕೆಯುಐಡಿಎಫ್‌ಸಿ ಇಲಾಖೆ ದಾಖಲೆಗಳು ಹೇಳುತ್ತಿವೆ. ಜಿಲ್ಲಾಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ನಡೆಸಬೇಕು.
ಮಹೇಶ ಅಗಡಿ, ಪುರಸಭೆ ಮಾಜಿ
ಸದಸ್ಯರು ಹಾಗೂ ಜೆಡಿಎಸ್‌ ತಾಲೂಕು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next