Advertisement

ಪೋಲಿಯೋ ಮುಕ್ತ ವಿಶ್ವಕ್ಕೆ ರೋಟರಿ ಕ್ಲಬ್‌ ಕಂಕಣ ಬದ್ಧ

12:17 PM Jul 10, 2017 | |

ಹುಬ್ಬಳ್ಳಿ: ವಿಶ್ವವೇ ಪೋಲಿಯೋ ಮುಕ್ತವನ್ನಾಗಿಸಲು ರೋಟರಿ ಕ್ಲಬ್‌ ಕಂಕಣಬದ್ಧವಾಗಿದೆ. ಈಗಾಗಲೇ ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು, ಅದರ ಶ್ರೇಯಸ್ಸೆಲ್ಲ ರೋಟರಿ ಸಂಸ್ಥೆಗೆ ಸಲ್ಲುತ್ತದೆ ಎಂದು ರೋಟರಿ ಸಂಸ್ಥೆಯ ವಲಯ-5ರ ಎಆರ್‌ಪಿಐಸಿ ಗಣೇಶ ಭಟ್‌ ಹೇಳಿದರು. 

Advertisement

ಇಲ್ಲಿನ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಫೌಂಡೇಶನ್‌ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ರೋಟರಿ ಕ್ಲಬ್‌ ಆಫ್ ಹುಬ್ಬಳ್ಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಈ ಮೊದಲು ಪ್ರತಿದಿನ ಒಂದು ಲಕ್ಷ ಮಕ್ಕಳು ಪೋಲಿಯೋದಿಂದ ಬಳಲುತ್ತಿದ್ದರು.

ಆದರೆ ರೋಟರಿ ಸಂಸ್ಥೆಯು ಅದನ್ನು ತಡೆಗಟ್ಟುವಲ್ಲಿ ಕೈಗೊಂಡ ಕಾರ್ಯಗಳು ಹಾಗೂ ಸಂಕಲ್ಪದಿಂದಾಗಿ ಇಂದು ಜಗತ್ತಿನಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕೇವಲ ಐದು ಮಾತ್ರ ಉಳಿದುಕೊಂಡಿದೆ ಎಂದರು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಇಚ್ಛೆ ಹಾಗೂ ಸಾಧಿಸಬೇಕೆಂಬ ಛಲವಿದ್ದರೆ ಯಾವುದು ಅಸಾಧ್ಯವಿಲ್ಲ. 

ಸಮಾಜದಲ್ಲಿನ ಜನತೆಯು ಯಾವುದರ ಕೊರತೆ ಅನುಭವಿಸುತ್ತಿದ್ದಾರೋ ಅದನ್ನು ಅರಿತುಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಆದ್ದರಿಂದ ಸಂಸ್ಥೆಯ ಪದಾಧಿಕಾರಿಗಳು ಹೊಸ-ಹೊಸ ಯೋಜನೆಗಳಿಗೆ ಒತ್ತುಕೊಡಬೇಕು.  ವಿಶೇಷ, ನವೀನತೆಯ ಆಲೋಚನೆಗಳನ್ನು ಹೊಂದಬೇಕು.

ಅವುಗಳನ್ನು ಕಾರ್ಯಗತಗೊಳಿಸಲು ಮುಂದಾಗಬೇಕು. ರೋಟರಿ ಸೇವೆಗಳ ಬಗ್ಗೆ ಸಮಾಜಕ್ಕೆ ಹೆಮ್ಮೆಯಿದೆ ಎಂದರು. ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಯು ರಾಷ್ಟ್ರದಲ್ಲೇ ಮೊದಲ ಬಾರಿಗೆ ರೋಟರಿ ಯುಥ್‌ ಡೆವಲಪಮೆಂಟ್‌ ಪ್ರಮೋಷನಲ್‌ (ಆರ್‌ವೈಡಿಪಿ) ಅಡಿ 1 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜಿಸಿದೆ.

Advertisement

ಆಗಸ್ಟ್‌ 22ರಂದು ಗೋವಾದಲ್ಲಿ ಇದಕ್ಕೆ ಚಾಲನೆ ದೊರೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಪದಗ್ರಹಣ ಸಮಾರಂಭದ ಬುಲೆಟಿನ್‌ “ಜ್ಯೋತಿ’ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಅವರು ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. 

ಸಂಸ್ಥೆಯ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಪ್ರಕಾಶ ರಾವ್‌, ಸಂಸ್ಥೆ ವತಿಯಿಂದ 20 ಶಾಲೆಗಳನ್ನು ದತ್ತು ಪಡೆದು ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕ್ಲಬ್‌ನಿಂದ ಸಾಮಾಜಿಕ ಸೇವೆಗಳನ್ನು ವಿಸ್ತರಿಸಲಾಗುವುದು.

ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು ಎಂದರು. ಸಂಜೋತ ಶಾಹ ಮಾತನಾಡಿದರು. ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ಎಸ್‌.ವಿ. ಕಡಬಿ ಹಾಗೂ ಪದಾಧಿಕಾರಿಗಳಾಗಿ ಅಬ್ದುಲ್‌ ಸಾದಿಕ್‌, ಬಾಪು ಬಿರಾದಾರ, ಸುರೇಂದ್ರ ಪೋರವಾಲ, ಶೇಷಗಿರಿ ಕುಲಕರ್ಣಿ, ಕಿಶೋರ ಗಾಮಿ, ಅರವಿಂದ ಕುಬಸದ, ರಿಯಾಜ ಬಸರಿ, ಜೀವನ ಮೋಟಗಿ,

-ಸಂಜೀವ ಬದ್ದಿ, ಮಾಧುರಿ ಕುಲಕರ್ಣಿ, ಯೋಗೇಶ ಕರಂಡಿಕರ, ಕಸ್ತೂರಿ ಡೋಣಿಮಠ, ಮೋಹಿತ ದಂಡ, ಮುರಳಿ ಬಿಲ್ಲೆ ಅಧಿಕಾರ ಸ್ವೀಕರಿಸಿದರು. ಸಿದ್ದೇಶ್ವರ ಕಮ್ಮಾರ, ಗಿರೀಶ ಉಪಾಧ್ಯಾಯ, ಜಗದೀಶ ಮಠದ, ಲತಾ ಮಠದ, ಸರಿತಾ ರಾವ್‌, ಬಿಂದುರೇಖಾ ಕಡಬಿ ಮೊದಲಾದವರಿದ್ದರು. ಶೇಷಗಿರಿ ಕುಲಕರ್ಣಿ ನಿರೂಪಿಸಿದರು. ಎಸ್‌.ವಿ. ಕದಡಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next