Advertisement

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು

12:44 PM Jan 30, 2018 | Team Udayavani |

ಪಿರಿಯಾಪಟ್ಟಣ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಪದವಿ ಪೂರ್ವಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಡಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಬಾಲಕರ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರಾಷ್ಟ್ರದ ನವ ನಿರ್ಮಾಣ ಮಾಡುವ ಸದುದ್ದೇಶದಿಂದ ಎನ್‌ಎಸ್‌ಎಸ್‌ ಘಟಕವನ್ನು ತೆರೆಯಲಾಗಿದ್ದು, ಸಮಾಜದ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಲು ಈ ರೀತಿಯ ಶಿಬಿರಗಳು ಸಹಕಾರಿಯಾಗಲಿವೆ ಎಂದರು.

ಶಿಬಿರದಲ್ಲಿ ಪಾಲ್ಗೊಂಡಿರುವ ಉಡುಪಿ, ದ.ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಸೇರಿದಂತೆ 8 ಜಿಲ್ಲೆಗಳ ಶಿಬಿರಾರ್ಥಿಗಳು ವಿಭಿನ್ನ ಸಂಸ್ಕೃತಿ ಹಾಗೂ ಭಾಷೆಯ ಶೈಲಿಯನ್ನು ಹೊಂದಿದ್ದು ಶಿಬಿರಾರ್ಥಿಗಳಿಗೆ ಉತ್ತಮ ವಿನಿಮಯವಾಗಲಿದೆ ಎಂದರು.

ಸೇವೆ ಪ್ರಚಾರಕ್ಕಾಗಬಾರದು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾತನಾಡಿ, ಆತ್ಮತೃಪ್ತಿಗಾಗಿ ಮಾಡುವ ಸೇವೆಯು ಶ್ರೇಷ್ಠವಾದುದಾಗಿದ್ದು, ಸೇವೆಯೆನ್ನುವುದು ಕೇವಲ ಸ್ವಾರ್ಥಕ್ಕಾಗಿ ಮತ್ತು ಪ್ರಚಾರಕ್ಕಾಗಿ ಇರಬಾರದು ಎಂದು ಕಿವಿಮಾತು ಹೇಳಿದರು.

Advertisement

ಶಿಕ್ಷಣ ಕ್ಷೇತ್ರಕ್ಕೆ ಆದಿಚುಂಚನಗಿರಿ ಮಠದ ಸೇವೆ ಮಹತ್ವವಾದದ್ದು, ವಿದ್ಯಾರ್ಥಿಗಳು ಸಮಾಜದ ದೃಷ್ಟಿಕೋನವನ್ನು ನೋಡುವ ವಿಧಾನವನ್ನು ಬದಲಿಸಿಕೊಂಡಲ್ಲಿ ಯಶಸ್ಸು ದೊರಕಲಿದೆ ಎಂದು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಪಿ.ಪ್ರಶಾಂತಗೌಡ, ಹಿರಿಯ ವಕೀಲ ಬಿ.ವಿ.ಜವರೇಗೌಡ ಮಾತನಾಡಿದರು. ಶಿಬಿರಾಧಿಕಾರಿಗಳಾಗಿ ಭಾಗವಹಿಸಿದ್ದ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಗೋವಿಂದೇಗೌಡ, ವ್ಯವಸ್ಥಾಪಕ ಸುಧಾಕರ್‌, ಕಾ.ಅ.ಸ.ಸದಸ್ಯ ಜೆ.ಕೆ.ಶಿವಣ್ಣೇಗೌಡ, ಶಿಕ್ಷಕ ಸಂಯೋಜಕರಾದ ಯೋಗರಾಜ್‌, ವಸಂತಶೇಖರ್‌, ಉಪನ್ಯಾಸಕ ಆನಂದ್‌ ಬಸಲಾಪುರ,ಗಿರೀಶ್‌, ರಾಮಕೃಷ್ಣ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next