Advertisement

ಸದೃಢ ರಾಷ್ಟ್ರದಲ್ಲಿ ಯುವಕರ ಪಾತ್ರ ಹಿರಿದು

02:48 PM Feb 01, 2022 | Team Udayavani |

ಬೀದರ: ಯುವಕರು ರಾಷ್ಟ್ರದ ಸಂಪತ್ತು. ಸದೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

Advertisement

ರಾಜ್ಯ ಶಿಕ್ಷಕರ ವಿಕಾಸ ಪರಿಷತ್‌, ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಚಮ್ಮಲ್‌ ಆನಂದರಾವ್‌ ಶಿಕ್ಷಣ ಟ್ರಸ್ಟ್‌, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ನ್ಯೂ ಮದರ ತೆರೆಸಾ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ವಿವೇಕಾನಂದರ ಆದರ್ಶ, ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ಕರೆ ನೀಡಿದರು.

ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ತರುಣರು ತಮ್ಮನ್ನು ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಮಹಾತ್ಮರು ಮತ್ತು ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ಸೇವೆಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಸಾಹಿತಿ ಡಾ| ಸಂಜೀವಕುಮಾರ ಅತಿವಾಳ ಮಾತನಾಡಿ, ಏಳಿ ಎದ್ದೇಳಿ-ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ಕರೆಯನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮ ಸಂಯೋಜಕ ಅರವಿಂದ ಕುಲಕರ್ಣಿ ಮಾತನಾಡಿ, ವಿವೇಕಾನಂದರು ಶ್ರೇಷ್ಠ ಸಂತರು. ಭಾರತದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಅವರರನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯವೆಂದು ನುಡಿದರು.

Advertisement

ಟ್ರಸ್ಟ್‌ ಅಧ್ಯಕ್ಷ ಡಾ| ಆನಂದರಾವ್‌ ಅಧ್ಯಕ್ಷತೆ ವಹಿಸಿ, ಇಂದಿನ ಯುವಕರಿಗೆ ಯೋಗ, ಮಿತ ಆಹಾರ ಹಾಗೂ ಧ್ಯಾನದ ಅವಶ್ಯಕತೆ ಇದೆ. ಸಮಯಕ್ಕೆ ಸರಿಯಾಗಿ ಊಟ ಆಟ-ಪಾಠಗಳು ಜೊತೆ ಮೊಬೈಲ್‌ಗ‌ಳಿಂದ ದೂರವಿರುವ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಾಂಡುರಂಗ ಬೆಲ್ದಾರ, ಶಿವರಾಜ ಕಪಲಾಪುರೆ, ಮೇಜರ್‌ ಡಾ| ಪಿ.ವಿಠಲ ರೆಡ್ಡಿ, ಶೇಕ್‌ ಬಶೀರ್‌ ಅಹ್ಮದ್‌, ವೀರಭದ್ರಪ್ಪ ಉಪ್ಪಿನ ಇದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಮಾತನಾಡಿದರು.

ಸಂತೋಷಕುಮಾರ ಮಂಗಳೂರೆ, ಮನೋಹರಸಿಂಗ್‌ ಪಾಟೀಲ, ಮಂಜುನಾಥ ಬೆಳಕೆರೆ, ರಫಿ ತಾಳಿಕೋಟಿ, ಕೃಷ್ಣ ಕುಲಕರ್ಣಿ, ಅನಂತ ಕುಲಕರ್ಣಿ, ಅಲ್ಪಾ ಮಾಡಗೋಳೆ, ಪುಷ್ಪಾ ಚಕುರ್ತೆ, ಧೂಳಪ್ಪ ಬಿರಾದಾರ, ಇಲೇಶಕುಮಾರ ಸೋನಿ, ದಿನಕರ ಪಾಂಚಾಳ, ಶಿವಕುಮಾರ ಕುಂಬಾರ, ರಾಜಕುಮಾರ ಬಿರಾದಾರ, ನಾಗವೇಣಿ, ಸುಧಾ, ಸಂತೋಷಿ, ನಿರ್ಮಲಾ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next