ಉಡುಪಿ: ಕರಾವಳಿ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪನೆಯಾದ ದಿನದಿಂದಲೂ 90 ಪ್ರತಿಶತ ನೇಕಾರರ ವರ್ಗವು ಪಕ್ಷದ ಅವಿಭಾಜ್ಯ ಅಂಗವಾಗಿದ್ದಾರೆ. ಅನೇಕರು ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿದ್ದು, ಈ ಭಾಗದಲ್ಲಿ ಪಕ್ಷ ಪ್ರಾಬಲ್ಯ ಸಾಧಿಸಲು ಗಣನೀಯ ಕೊಡುಗೆ ನೀಡಿ¨ªಾರೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಇಲ್ಲಿನ ಕಿನ್ನಿಮೂಲ್ಕಿ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜಿÇÉಾ ಬಿಜೆಪಿಯ ಆಶ್ರಯದಲ್ಲಿ ಜಿÇÉಾ ಬಿಜೆಪಿ ನೇಕಾರರ ಪ್ರಕೋಷ್ಠದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರ ವರ್ಗ ಪ್ರಕೋಷ್ಠದ ರಾಜ್ಯಾಧ್ಯಕ್ಷ , ನಿವೃತ್ತ ಐಜಿಪಿ ರಮೇಶ್ ಗೋವಿಂದಪ್ಪಮಾತನಾಡಿ, ರಾಜ್ಯಾದ್ಯಂತ ನೇಕಾರ ವರ್ಗವು ಪದ್ಮಶಾಲಿ, ಶೆಟ್ಟಿಗಾರ್, ದೇವಾಂಗ ,ಜಾಡರು ಹೀಗೆ ಹಲವಾರು ಸಮುದಾಯಗಳಲ್ಲಿ ಗುರುತಿಸಿಕೊಂಡಿದ್ದು, ರಾಜ್ಯದ ಪ್ರತಿಯೊಂದು ಸಂಸದೀಯ ಕ್ಷೇತ್ರದಲ್ಲೂ ಸುಮಾರು ಒಂದೂವರೆ ಲಕ್ಷದಷ್ಟು ವೋಟ್‌ಬ್ಯಾಂಕ್ ಹೊಂದಿದೆಯಾದರೂ ಸಂಘಟಿತರಾಗದೇ ಇರುವ ಕಾರಣ ಗ್ರಾ.ಪಂ. ಮಟ್ಟದಲ್ಲೂ ಈ ವರ್ಗದ ಪ್ರತಿನಿಧಿಗಳು ಕಾಣಿಸಿಕೊಳ್ಳದೆ ಇರುವುದು ಶೋಚನೀಯ. ಸರಕಾರ ರೈತರನ್ನು ಮತ್ತು ಕೃಷಿಕರನ್ನು ಎರಡು ಕಣ್ಣುಗಳೆಂದು ಕರೆಯುತ್ತ ಬಂದರೂ ಸರಕಾರಿ ಅನುದಾನ ನೀಡುವ ಸಂದರ್ಭದಲ್ಲಿ ನೇಕಾರ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ನೇಕಾರ ವರ್ಗಕ್ಕಾಗಿ ದೇಶದಲ್ಲಿ ಐದು ಕ್ಲಸ್ಟರ್ ಸ್ಥಾಪಿಸಲು 300 ಕೋ.ರೂ.ಯಷ್ಟು ಅನುದಾನ ಮಂಜೂರು ಮಾಡಿದ್ದು , ಮೈಸೂರು ಹೊರತುಪಡಿಸಿ ಇತರ ಕಡೆಗಳಲ್ಲಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು
ನೇಕಾರರು ವಿಫಲರಾಗಿ¨ªಾರೆ. ರಾಜ್ಯದೆÇÉೆಡೆ ಸಂಚಾರ ಮಾಡಿ ಪ್ರತೀ ಸಂಸದೀಯ ಕ್ಷೇತ್ರಗಳಲ್ಲಿ ನೇಕಾರರನ್ನು ಸಂಘಟಿಸಿ ಅಲ್ಲಿನ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಸಂಘಟನೆಯ ವಸ್ತುಸ್ಥಿತಿ ಮನವರಿಕೆ ಮಾಡಿ ಮುಂದಿನ ದಿನಗಳಲ್ಲಿ ಮೂಲೆಗುಂಪಾಗಲಿರುವ ನೇಕಾರರಿಗೆ ವಿಶೇಷ ಸವಲತ್ತು ದೊರಕಿಸುವಲ್ಲಿ ಪ್ರಯತ್ನ ಮಾಡುವಂತೆ ಒತ್ತಡ ಹೇರುತ್ತಿದ್ದೇವೆ ಎಂದರು.
ನೇಕಾರ ಪ್ರಕೋಷ್ಠದ ಜಿÇÉಾ ಸಂಚಾಲಕ ರತ್ನಾಕರ್ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ವಾರ್ಡ್ ಅಧ್ಯಕ್ಷೆ ಜ್ಯೋತಿ ರಮಾನಾಥ್ ಶೆಟ್ಟಿ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಕಿನ್ನಿಮೂಲ್ಕಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಶಂಕರ್, ಕಲ್ಯಾಣಪುರ ದೇವಸ್ಥಾನದ ಆಡಳಿತ ಮೊಕ್ತೇಸರ ಜ್ಯೋತಿ ಪ್ರಸಾದ್, ಎರ್ಮಾಳು ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಶೆಟ್ಟಿಗಾರ್, ರಾಜ್ಯ ನೇಕಾರ ಪ್ರಕೋಷ್ಠದ ಸಹ ಸಂಚಾಲಕ ಕಾಂತರಾಜು, ಪದ್ಮಶಾಲಿ ಮಹಾಸಭಾದ ನೇಕಾರ ವೇದಿಕೆಯ ಸಂಚಾಲಕ ಪ್ರೇಮಾನಂದ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ರಾಜೀವ್ ಶೆಟ್ಟಿಗಾರ್, ಸರೋಜಾ ಯಶವಂತ್, ಭಾಸ್ಕರ್ ಶೆಟ್ಟಿಗಾರ್, ಶೇಖರ್ ಶೆಟ್ಟಿಗಾರ್, ಅಲೆವೂರು ಅಶೋಕ್ ಶೆಟ್ಟಿಗಾರ್, ಶಿವಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ನಾಗರಾಜ್ ನಿರೂಪಿಸಿ, ಭರತ್ ವಂದಿಸಿದರು.