Advertisement

ದೇಶ ಕಟ್ಟುವಲ್ಲಿ ಸೈನಿಕರ ಪಾತ್ರ ಅಮೋಘ: ಬಿರಾದಾರ

04:07 PM Mar 30, 2018 | |

ಹೂವಿನಹಿಪ್ಪರಗಿ: ದೇಶ ಕಟ್ಟುವಲ್ಲಿ ಸೈನಿಕರ ಪಾತ್ರ ಅಮೋಘವಾಗಿದೆ ಎಂದು ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಿ.ಜಿ. ಬಿರಾದಾರ ಅಭಿಪ್ರಾಯಪಟ್ಟರು. ಪಟ್ಟಣದ ಸರಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸೈನಿಕ ತರಬೇತಿ ಶಿಬಿರ ಸಮಾರೋಪ ಹಾಗೂ ಭಗತ್‌ಸಿಂಗ್‌ ಬಲಿದಾನ ದಿವಸ್‌ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯುವಕರು ಈಗ ಬರಿ ಇಂಜನಿಯರಿಂಗ್‌ ಹಾಗೂ ಮೆಡಿಕಲ್‌ ಪದವಿಗಳಿಗೆ ಜೋತು ಬೀಳದೇ ಪ್ರತಿ ಹಳ್ಳಿಗಳಲ್ಲಿ ಪ್ರತಿ ಮನೆಗೊಬ್ಬ ಸೈನಿಕನಾಗಿ ಹೊರ ಹೊಮ್ಮಿ ದೇಶದ ರಕ್ಷಣೆಗಾಗಿ ಕೈಜೋಡಿಸಬೇಕು. ಈ ಕುರಿತು ಪಾಲಕರು ಸಹ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಯುವ ಬ್ರಿಗೇಡ್‌ ಅಧ್ಯಕ್ಷ ನಂದು ಗಾಯಕವಾಡ ಮಾತನಾಡಿ, ಭಗತಸಿಗ್‌ ಅವರಂತಹ ಮಹಾತ್ಮರ ತತ್ವಾದರ್ಶಗಳನ್ನು ಯುವಕರು ಅಳವಡಿಸಿಕೊಂಡು ಪ್ರಬುದ್ಧ ದೇಶಕ್ಕಾಗಿ ಶ್ರಮಿಸಬೇಕಾಗಿದೆ.ಯಾರದೋ ಒತ್ತಾಯಕ್ಕೆ ಸೈನ್ಯಕ್ಕೆ ಸೇರದೇ ದೇಶದ ಸೇವೆಗೆ ಯುವಕರು ಮುಂದಾಗಬೇಕಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಪತ್ರಿವನಮಠದ ದಾಕ್ಷಾಯಿಣಿ ಮಾತಾಜಿ ಮಾತನಾಡಿ, ನಮ್ಮ ದೇಶದ ಸೈನಿಕರು ಎಂದರೆ ಎರಡನೇ ದೇವರು. ನಮ್ಮೆಲ್ಲರ ರಕ್ಷಣೆ ಸೈನಿಕರ ಕಡೆ ಇದೆ. ಹೀಗಾಗಿ ಎಷ್ಟೇ ಕಷ್ಟ ಬಂದರೂ ಸೈನ್ಯಕ್ಕೆ ಸೇರಲು ಯುವಕರು ಹಿಂದೇಟು ಹಾಕಬಾರದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗುತ್ತಿಗೆದಾರ ಮಲ್ಲಿಕಾರ್ಜುನ ಕೋಲಕಾರ, ಸರ್ಕಾರ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಸೈನಿಕ ಶಿಕ್ಷಣ ಕಡ್ಡಾಯ ಮಾಡಬೇಕಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ಮನವಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಪಟ್ಟಣದ ಶ್ರೀಗುರು ಸದ್ಗುರು ಬಸವಾರೂಢ ಕಾಲೇಜಿನ ಅಧ್ಯಕ್ಷ ಡಿಸಿ ನಾಟಿಕಾರ ಅವರು ಬೆಂಗಳೂರು, ಚಿಕ್ಕಮಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಎರಡನೂರಕ್ಕೂ ಅಧಿಕ ಅರ್ಭರ್ಥಿಗಳಿಗೆ ಊಟ, ಉಪಹಾರ ಹಾಗೂ ವಸತಿ ವ್ಯವಸ್ಥೆ ಮಾಡಿರುವುದು ಮತ್ತು ಜಮ್ಮು ಕಾಶ್ಮೀರದಿಂದ ಆಗಮಿಸಿದ ಸೈನಿಕರಾದ ಪ್ರಭು ಕೋಲಕಾರ, ಮಹೇಶ
ಎಚ್‌.ಎನ್‌. ಸಿದ್ದರಾಮಪ್ಪ ಎಚ್‌ ಹಾಗೂ ಎಸ್‌.ಜಿ. ಹಾದಿಮನಿ ನಿರಂತರವಾಗಿ ಸೈನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ, ದೈಹಿಕ ಶಿಕ್ಷಣ ನೀಡಿ ಅವರಿಗೆ ಪ್ರಮಾಣ ಪತ್ರ ನೀಡಿ ಭಾವಿ ಸೈನಿಕರನ್ನು ಹುರಿದುಂಬಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ನಿಂಗಣ್ಣ ಶಿವಯೋಗಿ, ಎಬಿಡಿ ಫೌಂಡೇಶನ್‌ ಅಧ್ಯಕ್ಷ ಸಂತೋಷಗೌಡ ದೊಡ್ಡಮನಿ, ಪ್ರಾಚಾರ್ಯ ಡಾ| ಬಸವರಾಜ ಸಾಲವಾಡಗಿ, ಗುರುಸಂಗಪ್ಪ ಹಳ್ಳೂರ, ಸಚಿನಗೌಡ ಪಾಟೀಲ, ಅಜೀಜ್‌ ಬಳಬಟ್ಟಿ, ಮಾಜಿ ಸೈನಿಕ ಬಸಣ್ಣ ತಿಳಿಗೊಳ, ಶಿವಾನಂದ ಹಾದಿಮನಿ, ಶಿವಪ್ಪ ಕೋಲಕಾರ, ಮಲ್ಲಮ್ಮ ಕೋಲಕಾರ, ಭೀಮಣ್ಣ ಸಣ್ಣತಂಗಿ ಇದ್ದರು. ಗುರುನಾಥ ಕಣಮುಚನಾಳ ಪ್ರಾರ್ಥಿಸಿದರು.
ದುಂಡು ತಳವಾರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next