Advertisement

ದೇಶದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

03:26 PM Nov 01, 2021 | Team Udayavani |

ದಾವಣಗೆರೆ: ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣದಲ್ಲಿದ್ದರೆ, ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿ ಇರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯೊಲಜಿ ವಿಭಾಗದ ಪ್ರಾಧ್ಯಾಪಕ ಡಾ| ಎಸ್‌. ಶಿಶುಪಾಲ್‌ ಹೇಳಿದರು.

Advertisement

ಅಖೀಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್‌ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ “ಎಂಪವರಿಂಗ್‌ ಟಿಚಿಂಗ್‌ ಲರ್ನಿಂಗ್‌ ಸ್ಕೀಲ್ಸ್‌ ಯೂಸಿಂಗ್‌ ಮಾರ್ಡನ್‌ ಪಿಡಗೊಗಿ ಟೂಲ್ಸ್‌ ಇನ್‌ ಟೆಕ್ನೊಲಾಜಿ ಎಜುಕೇಷನ್‌’ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು. ಗುರು ಇಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ,ಕನಸನ್ನು ಸಾ‌ಕಾರಗೊಳಿಸುವ,ಕಲಿಕಾ ಶಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಉತ್ತಮ ಶಿಕ್ಷಕ.ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಶಿಕ್ಷಕರಿಗೂ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ತಿಳಿದುಕೊಂಡು ಶಿಕ್ಷಕರು ಬೋಧನೆ ಇತರೆ ಕ್ಷೇತ್ರದಲ್ಲಿ ಸಮಗ್ರಬದಲಾವಣೆಯ ಕಾರ್ಯರೂಪಕ್ಕೆ ತರುವಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆ ಮುಖ್ಯ ಇಂಜಿನಿಯರ್‌ ಎಂ. ಸತೀಶ್‌ ಮಾತನಾಡಿ, ಗುಣಮಟ್ಟದ ಶಿಕ್ಷಣ ಸುಸ್ಥಿರ ಅಭಿವೃದ್ಧಿಯ ಅಡಿಪಾಯ. ಶಿಕ್ಷಣವು ಸ್ವಯಂ ಅವಲಂಬನೆ,ಕೌಶಲ್ಯವೃದ್ಧಿ, ಆರ್ಥಿಕ ಬೆಳವಣಿಗೆ,ಉತ್ತಮ ಜೀವನೋಪಾಯನೀಡುತ್ತದೆ.ಯಾಂತ್ರಿಕ ವಿಭಾಗವುಎರಡು ವಾರಗಳ ಕಾಲಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಹೊಳಿ ಮಾತನಾಡಿ,ಸಮಾಜ ಆರೋಗ್ಯಕರವಾಗಿ ಮತ್ತುಸೌಹಾರ್ದಯುತವಾಗಿ ಬೆಳವಣಿಗೆಕಾಣಬೇಕಾಗಿದ್ದರೆ ಶಿಕ್ಷಣ ಜನರಿಗೆಅತ್ಯಂತ ಮುಖ್ಯ. ಶಿಕ್ಷಣದಿಂದ ವ್ಯಕ್ತಿತನ್ನ ಜೀವನದ ಗುರಿ ಸಾಧಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಸಂಯೋಜಕ ಡಾ| ಶೇಖರಪ್ಪ ಭೀಮಪ್ಪ ಮಲ್ಲೂರುಮಾತನಾಡಿ, 50 ಶಿಕ್ಷಕರು, ರಾಜ್ಯದ ವಿವಿಧ ಇಂಜಿನಿಯರಿಂಗ್‌ ಕಾಲೇಜಿನಪ್ರಾಧ್ಯಾಪಕರು ಎರಡು ವಾರ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಒಟ್ಟು 28 ಸಂಪನ್ಮೂಲ ವ್ಯಕ್ತಿಗಳಿಂದ 46 ವಿವಿಧ ವಿಷಯಗಳ ಮಂಡನೆ ಮಾಡಲಾಯಿತು ಎಂದು ತಿಳಿಸಿದರು.

Advertisement

ಡಾ| ಕೆ.ಜಿ. ಸತೀಶ್‌, ಎಂ.ಎಚ್‌. ದಿವಾಕರ್‌, ಡಾ| ಗಣಪತಿ ಆದಿ,ಡಾ| ಡಿ.ಪಿ. ನಾಗರಾಜಪ್ಪ, ಡಾ|ಅಪ್ರಮೇಯ,ಡಾ| ಎಚ್‌. ಈರಮ್ಮ, ಡಾ|ಶ್ರೀಧರಮೂರ್ತಿ ಇತರರು ಇದ್ದರು.ಡಾ| ಎಸ್‌. ಮಂಜಪ್ಪ, ಡಾ|ಬಸವರಾಜು ಬಣಕಾರ್‌, ಡಾ| ಸಿ.ಎಂ. ರವಿಕುಮಾರ್‌, ಎಸ್‌.ಎ. ಗಂಗರಾಜು ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next