Advertisement

“ಪ್ರತಿಭೆ ಪೋಷಣೆಯಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯ’

01:10 AM Feb 09, 2019 | |

ಪೆರ್ಲ: ಮಕ್ಕಳು ತರಗತಿ ಕೋಣೆಯಲ್ಲಿ ಗಳಿಸಿದ ಶೈಕ್ಷಣಿಕ ಪ್ರಗತಿಯು ಪ್ರದರ್ಶನ ವೇದಿಕೆಯಾಗಿ ಕಲಿಕೋತ್ಸವದಲ್ಲಿ ಹೊರಹೊಮ್ಮಿದೆ.ಪ್ರತಿಭೆಯ ಪೋಷಣೆಯಲ್ಲಿ ನಿರಂತರವಾಗಿ ಶ್ರಮಿಸುವ ಅಧ್ಯಾಪಕರು ಮತ್ತು ಹೆತ್ತವರ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಪ್ರಧಾನ ಅಧ್ಯಾಪಕ ಮಹಾಲಿಂಗೇಶ್ವರ ಎನ್‌. ಹೇಳಿದರು.

Advertisement

ಅವರು  ಪೆರ್ಲ ಸತ್ಯನಾರಾಯಣ ಎಎಲ್‌ಪಿ ಶಾಲೆಯಲ್ಲಿ  ಕಲಿಕೋತ್ಸವವನ್ನು ಉದ್ಘಾಟಿಸಿದರು.ಕಲಿಕೋತ್ಸವದಿಂದ ಮಕ್ಕಳಿಗೆ ಹುರುಪನ್ನು ನೀಡುತ್ತದೆ.ಇದರಿಂದ ಉತ್ತೇಜಿತರಾಗಿ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ನುಡಿದರು.ಪಿಟಿಎ ಅಧ್ಯಕ್ಷ ಅಶ್ರಫ್‌ ಕುರೆಡ್ಕ ಸಭೆಯ ಅಧ್ಯಕ್ಷತೆ ವಹಿಸಿದರು.ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್‌ ಸಿದ್ದಿಕ್‌, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಪೆರ್ಲ,ಬಿ.ಆರ್‌.ಸಿ ಸಂಯೋಜಕಿ ಸುಪ್ರಿಯಾ,ಎನ್‌ಎಂಪಿ ಅಧ್ಯಕ್ಷ ರಾಧಾಕೃಷ್ಣ ಭಟ್‌,ಪಿಟಿಎ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಕೊಡುಮಾಡ್‌,ಎಂಪಿಟಿಎ ಅಧ್ಯಕ್ಷೆ ಉಷಾ ಅಮೇಕ್ಕಳ,ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಬಿ.ಮೊದಲಾದವರು ಉಪಸ್ಥಿತರಿದ್ದರು.

ಪಾಠ ಭಾಗದಲ್ಲಿ  ಬಂದಿರುವ ವಿಷಯಗಳಿಗೆ ಹೊಸ ರೂಪ ನೀಡಿ ಸಮರ್ಥವಾಗಿ ಮಕ್ಕಳ ಮಂಡಿಸುವಿಕೆ ಎಲ್ಲರ ಗಮನ ಸೆಳೆಯಿತು.
ವೈಜ್ಞಾನಿಕ ಆಶಯಗಳ ಮೇಲಿನ ಪ್ರಯೋಗದ ಪ್ರಾತ್ಯಕ್ಷಿಕೆ ಮ್ಯಾಜಿಕ್‌ ಶೋ,ಪಾಠ ಪುಸ್ತಕದ ಹಾಡುಗಳಿಗೆ ರಾಗ,ನೃತ್ಯ,ಸಂಗೀತ ನಾಟಕ, ಪಿಕ್‌ ಆಂಡ್‌ ಸೇ,ಸೂಪರ್‌ ಸ್ಟುಡೆಂಟ್ಸ್‌  ಮೊದಲಾದ ಚಟುವಟಿಕೆಗಳು ಹಾಗೂ ಓದುವಿಕೆ,ಬರವಣಿಗೆ ಪ್ರೋತ್ಸಾಹದ ಮಾತುಗಳು, ಮುಂತಾದ ಕಾರ್ಯಕ್ರಮಗಜರಗಿತು. .ಶಿಕ್ಷಕ ಕೋಟೆ ಗೋಪಾಲಕೃಷ್ಣ ಭಟ್‌ ಸ್ವಾಗತಿಸಿ,ಉದಯ ಸಾರಂಗ ವಂದಿಸಿದರು.ಶಿಕ್ಷಕಿ ಕಲಂದರ್‌ ಬೀಬಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next