Advertisement
ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಹಳೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಚಿಣ್ಣರ ಬಿಂಬದ ಎಲ್ಲ ಕಾರ್ಯಕ್ರಮಗಳು ಪ್ರತಿವರ್ಷವು ನಿರಂತರವಾಗಿ ನಡೆಯುತ್ತಿತ್ತು.
Related Articles
Advertisement
ಚಿಣ್ಣರ ಬಿಂಬದ ಸೆಂಟ್ರಲ್ ಕಮಿಟಿಯ ಸದಸ್ಯೆ ರೇಣುಕಾ ಭಂಡಾರಿ ಮತ್ತು ಚಿಣ್ಣರ ಬಿಂಬದ ಮೊದಲ ಫೌಂಡೇಶನ್ ಚಿಣ್ಣರ ಗೌರವಾಧ್ಯಕ್ಷೆ ಪೂಜಾ ಭಂಡಾರಿ, ವಿಜಯ್ ಕೋಟ್ಯಾನ್ ಅವರು ಉಪಸ್ಥಿತರಿದ್ದರು. ಚಿಣ್ಣರ ಬಿಂಬದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಪೂರ್ಣಿಮಾ ಶೆಟ್ಟಿ ಅವರಿಗೆ ಎಲ್ಲ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ವಂದನೆ ಸಲ್ಲಿಸಿ, ಕನ್ನಡ ಕಲಿಕೆ ಮತ್ತು ನಿರೂಪಣೆ ಮಾಡಲು ಕಲಿಸಿ ಕೊಟ್ಟದ್ದನ್ನು ಸ್ಮರಿಸಿಕೊಂಡರು.
ಸೆಂಟ್ರಲ್ ಕಮಿಟಿಯ ಸದ್ಯಸೆ ಗೀತಾ ಹೇರಳ ಮಾತಾನಾಡಿ, ಹದಿನೆಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಚಿಣ್ಣರಾಗಿದ್ದರು. ಇಂದು ಒಳ್ಳೆಯ ಉದ್ಯೋಗ, ಉತ್ತಮ ಕಲಿಕೆಯನ್ನು ಮಾಡುವ ಚಿಣ್ಣರ ಬಿಂಬದ ಮಕ್ಕಳನ್ನು ಕಂಡಾಗ ಪ್ರಕಾಶ್ ಅಣ್ಣನವರಿಗೆ ತುಂಬಾ ಖುಷಿಯಾಯಿತು. ಅಲ್ಲದೆ ನಮಗೆಲ್ಲರಿಗೂ ಎಲ್ಲ ಮಕ್ಕಳ ಆತ್ಮೀಯತೆ ನೋಡುವಾಗ ಸಂತೋಷವಾಗುತ್ತದೆ. ನಮ್ಮ ಸಂಸ್ಥೆಗೆ ನಿಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ ಎಂದರು. ನೂರು ಮಂದಿ ಹಳೆ ವಿದ್ಯಾರ್ಥಿಗಳು, ಸೆಂಟ್ರಲ್ ಕಮಿಟಿಯ ಸದಸ್ಯರು, ಕನ್ನಡ ಶಿಕ್ಷಕಿಯರು, ಶಿಬಿರ ಮುಖ್ಯಸ್ಥರು, ಸಾಂಸ್ಕೃತಿಕ ಮುಖ್ಯಸ್ಥರು, ಭಜನೆ ಶಿಕ್ಷಕಿಯರು ಹಾಗೂ ಪಾಲಕರು ಭಾಗವಹಿಸಿದ್ದರು.
ಪೇಜಾವರ ಶಿಬಿರದ ಪವಿತ್ರಾ ದೇವಾಡಿಗ ಅವರು ಸ್ವಾಗತ ಭಾಷಣದ ಜತೆಗೆ ಅನುಭವವನ್ನು ಹಂಚಿಕೊಂಡರು. ಥಾಣೆ ಶಿಬಿರದ ಕೀರ್ತಿ ಶೆಟ್ಟಿಯವರು ಪ್ರಾರ್ಥನೆ ಗೀತೆ ಹಾಡಿದರು. ಘನ್ಸೋಲಿ ಶಿಬಿರದ ಪ್ರತೀಕ್ಷಾ ಭಟ್ ಅವರು ಅನುಭವದ ಜತೆಗೆ ಸಭೆಗೆ ಬಂದಿರುವ ಎಲ್ಲ ಚಿಣ್ಣರ ಬಂಧುಗಳಿಗೆ ವಂದಿಸಿದರು. ಎಸ್. ಎಂ. ಶೆಟ್ಟಿ ಶಿಬಿರದ ಶಿಕ್ಷಕಿ ಅನಿತಾ ಎಸ್. ಶೆಟ್ಟಿ ಸಹಕರಿಸಿದರು.
ಇದನ್ನೂ ಓದಿ:ಜ.15ರಿಂದ ಪ್ರಥಮ ಪಿಯುಸಿ, 9 ನೇ ತರಗತಿ ಆರಂಭಿಸುವ ಸಾಧ್ಯತೆ: ಸುರೇಶ್ ಕುಮಾರ್
ನಿಮ್ಮೆಲ್ಲರ ಸಹಕಾರವಿದ್ದರೆ ಚಿಣ್ಣರ ಬಿಂಬದ ಮಾಸಿಕ ಪತ್ರಿಕೆಯನ್ನು ಡಿಜಿಟಲ್ ರೀತಿಯಲ್ಲಿ ತರಬಹುದು. ಅದರ ಕುರಿತು ಚಿಂತನೆ ಮಾಡೋಣ. ಅದರಂತೆಯೇ ಎಲ್ಲ ಹಳೆ ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಡಿಜಿಟಲ್ ಪ್ಲಾಟ್‌ಫಾರ್ಮ್ ಮುಖಾಂತರ ಸೇರಿ ಒಳ್ಳೆಯ ವಿಷಯಗಳನ್ನು ಯಾವುದೇ ಭಾಷೆಯಲ್ಲಿ ಬೇಕಾದರೂ ಮಂಡಿಸಲು ಅವಕಾಶ ಕಲ್ಪಿಸಿ, ಸದಾ ಕಾರ್ಯ ಚಟುವಟಿಕೆಯಲ್ಲಿ ಇರುವಂತೆ ವ್ಯವಸ್ಥೆ ಮಾಡೋಣ. ಕೊರೊನಾದಿಂದಾಗಿ ಈ ವರ್ಷ ಎಲ್ಲರಿಗೂ ತೊಂದರೆಯಾಯಿತು. ಎಲ್ಲ ಕಡೆಯಿಂದ ದುಃಖದ ಸಮಾಚಾರ ಕೇಳಿ ಬರುತ್ತಿತ್ತು. ಆದರೆ ಪರಿವಾರದಲ್ಲಿ ಎಲ್ಲರೂ ಪ್ರೀತಿ, ವಾತ್ಸಲದಿಂದ ಒಟ್ಟಿಗೆ ಇದ್ದುಕೊಂಡು ಸಮಯ ಕಳೆದರು. ಪರಸ್ಪರ ಸಹಾಯ ಮಾಡಿರುವರು. ಸಂಘ-ಸಂಸ್ಥೆಗಳು ಬಡವರಿಗೆ ಬೇಕಾದ ವಸ್ತುಗಳನ್ನು ನೀಡಿ ನೆರವು ಮಾಡಿದವು. ಸಂಕಷ್ಟದಲ್ಲೂ ಪರಿವಾರದ ಎಲ್ಲರ ಜತೆ ಇದ್ದು ಸಂತೋಷ ಪಟ್ಟಿರುವೆವು ಎಂಬುದರಲ್ಲಿ ಸಂಶಯವಿಲ್ಲ. ಮುಂದಿನ ವರ್ಷದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ.
–ಡಾ| ಪೂರ್ಣಿಮಾ ಶೆಟ್ಟಿ, ಮುಖ್ಯಸ್ಥೆ, ಕನ್ನಡ ಕಲಿಕಾ ವಿಭಾಗ, ಚಿಣ್ಣರ ಬಿಂಬ