Advertisement

ವಚನ ಸಾಹಿತ್ಯ ಸಂರಕ್ಷಣೆಯಲ್ಲಿಮಾಚಿದೇವರ ಪಾತ್ರ ಅಮೋಘ

01:55 PM Feb 02, 2018 | Team Udayavani |

ಬೀದರ: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯವೆನಿಸಿದ ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಶರಣ ಮಡಿವಾಳ ಮಾಚಿದೇವರ ಪಾತ್ರ ಅಮೋಘವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಗತ್ತಿನ ಮೊದಲ ಸಂಸತ್ತು ಎನಿಸಿದ ಬಸವಕಲ್ಯಾಣದ ಅನುಭವ ಮಂಟಪ ನಿರ್ಮಿಸುವಲ್ಲಿಯೂ ಮಡಿವಾಳ ಮಾಚಿದೇವರ ಪಾತ್ರ ಹೆಚ್ಚಿದೆ. ಅವರು ಶರಣರ ಬಟ್ಟೆಗಳನ್ನು ಶುಚಿಗೊಳಿಸುವ ಕಾಯಕದ ಜೊತೆಗೆ ಸಮಾಜದಲ್ಲಿರುವ ಓರೆ-ಕೋರೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದರು. ಅವರು ತೋರಿಸಿದ ಮಾರ್ಗವನ್ನು ಎಲ್ಲರೂ ಅನುಸರಿಸಬೇಕಿದೆ ಎಂದು ಹೇಳಿದರು.

ಶಾಸಕರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌ ಮಾತನಾಡಿ, ಮಡಿವಾಳ ಸಮಾಜದವರು ಶ್ರಮಜೀವಿಗಳು. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಹುದ್ದೆಗಳನ್ನು ಪಡೆಯಲು ಉತ್ತೇಜನ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಕಾಣಲು ಯತ್ನಿಸಬೇಕು ಎಂದು ಕರೆ ನೀಡಿದರು. 

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ಮಡಿವಾಳ ಸಮಾಜದವರ ಅನುಕೂಲಕ್ಕಾಗಿ ಶುಕ್ಲತೀರ್ಥದ ಬಳಿ ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಧೋಬಿ ಘಾಟ್‌ ನಿರ್ಮಿಸಲಾಗಿದೆ. ಸಭೆ, ಸಮಾರಂಭಗಳನ್ನು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಮಡಿವಾಳ ಸಮಾಜ ಭವನ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ 10 ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಹುಗ್ಗಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ನಗರ ಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಪಂ ಸದಸ್ಯೆ ಗೀತಾ ಪಂಡಿತರಾವ್‌ ಚಿದ್ರಿ, ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ, ಮಡಿವಾಳ ಸಮಾಜದ ಮುಖಂಡರಾದ ಬಾಬುರಾವ್‌ ಮಡಿವಾಳ, ಧನರಾಜ ಮಡಿವಾಳ, ಶಿವಕುಮಾರ ಕಂದಗುಳೆ, ಸುಭಾಷ ಮಡಿವಾಳ, ಸಿದ್ರಾಮಪ್ಪ ಮಡಿವಾಳ, ದಶರಥ, ರಾಜು ಮಡಿವಾಳ, ಲಿಂಗಪ್ಪ ಮಡಿವಾಳ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 

Advertisement

ರಾಕಾ ಮಲ್ಕಾಪುರೆ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ
ರಾಜಶೇಖರ ವಟಗೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.

ಜೀವನ ತತ್ವ ಅನುಷ್ಠಾನಕ್ಕೆ ತನ್ನಿ ಹನ್ನೆರಡನೇ ಶತಮಾನದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿದ ಸಾಮಾಜಿಕ ಕ್ರಾಂತಿ
ಬಸವಕಲ್ಯಾಣದಲ್ಲಿ ನಡೆದಿತ್ತು. ಸಮಾನತೆ, ಜಾತೀಯತೆ ನಿರ್ಮೂಲನೆ, ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಲು ಯತ್ನಿಸಲಾಗಿತ್ತು. ವಚನಗಳ ಸಂರಕ್ಷಣೆಗೆ ಮಡಿವಾಳ ಮಾಚಿದೇವರು ಮಹಾ ತ್ಯಾಗ ಮಾಡಿದ್ದರು. ಅವರ ಜೀವನ ತತ್ವಗಳನ್ನು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರು ಯತ್ನಿಸಬೇಕಿದೆ.
●ಪ್ರೊ| ಹುಗ್ಗಿ ಪಾಟೀಲ‌, ಉಪನ್ಯಾಸಕ
 

Advertisement

Udayavani is now on Telegram. Click here to join our channel and stay updated with the latest news.

Next