Advertisement
ನಮ್ಮೊಳಗಿನ ಚಂಚಲತೆಯ ಮನಃಸ್ಥಿತಿಗೆ ಹಲವು ಸಾಧಕರ ಜೀವನದ ಯಶೋಗಾಥೆಗಳು ಮಾರ್ಗ ದರ್ಶಕ ದೀವಿಗೆಗಳಾಗಬಲ್ಲವು.ಸರ್ ಐಸಾಕ್ ನ್ಯೂಟನ್ ಎಂಬ ಜಗತø ಸಿದ್ಧ ವಿಜ್ಞಾನಿಯು ವೈಜ್ಞಾನಿಕ ರಂಗದಲ್ಲಿ ಸರ್ವಮಾನ್ಯರಾದವರು. ಅಂತೆಯೇ ಅವರ ಸ್ವಭಾವ ಕೂಡ ಅನುಕರಣೀಯ. ಬಹಳ ಸೂಕ್ಷ್ಮ ಸ್ವಭಾವ ಅವರದ್ದು. ನಿಧಾನಿ, ಸಮಾಧಾನಿಯಾದ ಅವರಿಂದ ಕೋಪ ಬಲು ದೂರ. ತಾನಾಯಿತು, ತನ್ನ ಅಧ್ಯಯನದ ಕೋಣೆಯಾಯಿತು. ತನ್ನ ಪ್ರಮೇಯಗಳ ಪುನರಾವರ್ತಿತ ವಿಶ್ಲೇಷಣೆಯಾಯಿತು.
ಒಮ್ಮೆ ಒಂದು ಕೆಲಸದಲ್ಲಿ ಮಗ್ನನಾಗಿದ್ದ ನ್ಯೂಟನ್, ನಡುವೆ ಹೊರಹೋದರು. ಲೇಖನಿ, ಇಂಕ್ ಬಾಟಲ್, ಕಾಗದಗಳೆ ಲ್ಲವೂ ಮೇಜಿನ ಮೇಲೆಯೇ ಇದ್ದವು. ಸಮೀಪದಲ್ಲಿ ಒಂದು ಕ್ಯಾಂಡಲ್ ಕೂಡ ಉರಿಯುತ್ತಿತ್ತು. ಅತ್ತ ಡೈಮಂಡ್ ಕೂಡ ಯಜಮಾನನ ಬರುವಿಕೆಗಾಗಿ ಕಾಯು ತ್ತಿತ್ತು. ಅಷ್ಟರಲ್ಲಿ ಪುಟ್ಟ ಇಲಿಯೊಂದು ಮೇಜಿನತ್ತ ಹೋಯಿತು. ಆಗ ಡೈಮಂಡ್, ಇಲಿಯ ಮೇಲೆ ಹಾರಿತು. ಉರಿಯುತ್ತಿದ್ದ ಕ್ಯಾಂಡಲ್, ಪೇಪರ್‌ನ ಮೇಲೆ ಬಿದ್ದು, ಅಲ್ಲಿದ್ದ ಕಾಗದಗಳೆಲ್ಲ ಸುಟ್ಟು ಬೂದಿಯಾದವು. ನ್ಯೂಟನ್ ಮರಳಿ ಬಂದರು. ತನ್ನ ಕೋಣೆ, ಮೇಜಿನ ದೃಶ್ಯ ಕಂಡವರಿಗೆ ಎಲ್ಲವೂ ಅರಿವಾಯಿತು. ಅವರ ಅಮೂಲ್ಯ ಸಂಶೋಧನೆ, ಅಧ್ಯಯನದ ಕೆಲವು ತಿಂಗಳುಗಳಿಂದ ಶ್ರಮವಹಿಸಿ ಬರೆದ ಪ್ರಬಂಧ ಸುಟ್ಟು ಬೂದಿಯಾ ಗಿತ್ತು. ತನ್ನ ಶ್ರಮ ವ್ಯರ್ಥವಾದುದನ್ನು ಕಂಡು ದುಃಖೀತರಾದರು. ಆದರೆ ಕೋಪ ಗೊಳ್ಳಲಿಲ್ಲ! ಶಾಂತಚಿತ್ತದಿಂದ ಡೈಮಂಡ್ ನನ್ನು ಕರೆದು, “ನೋಡು ಡೈಮಂಡ್, ನಿನ್ನ ಚೇಷ್ಟೆಯ ಅರಿವು ನಿನಗಿಲ್ಲ’ ಎಂದರು. ಮೇಜಿನ ಮೇಲಿದ್ದ ಬೂದಿಯನ್ನು ತಾವೇ ಒರೆಸಿ, ಘಟನೆಯನ್ನು ಮರೆತು ಮತ್ತೆ ಬರೆಯಲು ಪುನರಾರಂಭಿಸಿದರು.
Related Articles
Advertisement
ಕೆಡುಕುಗಳ ಮಧ್ಯದಲ್ಲಿ ಒಳಿತನ್ನು ಗುರುತಿಸಬೇಕು. ಕೆಟ್ಟದ್ದನ್ನು ಮರೆತು, ಕನಸುಗಳ ಮೊಳೆತು, ಸಾಧಿಸುವ ಚೈತನ್ಯ ದಲ್ಲಿ ಕಲೆತು, ಸುಖ ದುಃಖಗಳೊಂದಿಗೆ ಬೆರೆತು, ಬಾಳ ಪಯಣದಲ್ಲಿ ಯಶಸ್ಸಿನ ಶಿಖರವನ್ನು ತಲುಪಬೇಕಿದೆ.
- ಭಾರತಿ ಎ., ಕೊಪ್ಪ