ಮುಂಬೈ: ಮುಂಬೈಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬುಧವಾರ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವಂತೆಯೇ ರಸ್ತೆಯೊಂದು ಕುಸಿದು ಬಿದ್ದಿದೆ.
ಮುಂಬೈನ ಚೆಂಬೂರ್ ಎಂಬಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯೇ ಬಾಯ್ತೆರೆದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ನೋಡನೋಡುತ್ತಿದ್ದಂತೆ ಆ ಕುಳಿಗೆ ಬಿದ್ದಿದೆ. ಪವಾಡಸದೃಶ ರೀತಿಯಲ್ಲಿ ಕಾರಿನ ಚಾಲಕ ಪಾರಾಗಿದ್ದು,ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ವಿಪರೀತ ನೀರಿನ ಸೆಳೆಯಿಂದಾಗಿ ಈ ರೀತಿ ರಸ್ತೆ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ಮತ್ತು ದೊಡ್ಡ ಮಟ್ಟದ ಭ್ರಷ್ಟಾಚಾರವೇ ರಸ್ತೆ ಕುಸಿತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ನಗರದಾದ್ಯಂತ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನ ಆದಷ್ಟು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಳಿಯಾಳ – ದಾಂಡೇಲಿ ರಸ್ತೆಯಲ್ಲಿ ಪಲ್ಟಿಯಾದ ಟ್ರಕ್… ಚಾಲಕ ಪವಾಡ ಸದೃಶ ಪಾರು