Advertisement

ರೈತರನ್ನು ಬೀದಿಗೆ ತಳ್ಳುವ ಹುನ್ನಾರ

05:43 AM Jun 24, 2020 | Lakshmi GovindaRaj |

ಮೈಸೂರು: ರಾಜ್ಯ ಸರ್ಕಾರ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ನಿರ್ಧಾರ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ  ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಸಮಗ್ರವಾಗಿ ತಿದ್ದುಪಡಿ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಟ್ಟರು. 1974 ಮಾರ್ಚ್‌ನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಅತ್ಯಂತ ಕ್ರಾಂತಿಕಾರಕ ಭೂ ಸುಧಾರಣೆ ಮಸೂದೆ ಜಾರಿಗೆ ತಂದರು.

ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ  ಹೆಸರಿನಲ್ಲಿ ತರುತ್ತಿರುವ ಭೂ ವಿನಾಶ ಕಾಯ್ದೆಯಿಂದ ಸಣ್ಣ ರೈತರು ಹಾಗೂ ಮಧ್ಯಮ ವರ್ಗದ ರೈತರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ. ರೈತರ ಪರ ನಿಲ್ಲಬೇಕಿದ್ದ ಸರ್ಕಾರ ಅವರನ್ನು ಶಾಶ್ವತವಾಗಿ ಭೂ ವಂಚಿತರನ್ನಾಗಿ ಮಾಡಿ  ಗ್ರಾಮಗಳಿಂದ ಒಕ್ಕಲೆಬ್ಬಿಸುವ ಸಂಚು ರೂಪಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಲ್ಲೇಶ್‌ ಚುಂಚನಹಳ್ಳಿ, ರಾಜಣ್ಣ, ಹನುಮಂತು, ಸುರೇಶ್‌ ಯರಗನಹಳ್ಳಿ, ನಾಗರಾಜ್‌, ಪುಟ್ಟಸ್ವಾಮಿ, ಗೋವಿಂದರಾಜು,  ನಾಗರತ್ನಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next