Advertisement

ಏಷ್ಯಾ ವಲಯಕ್ಕೆ ಮಾಲಿನ್ಯದ ಅಪಾಯ: ಇಸ್ರೋ ಶೋಧನೆ

09:23 AM Sep 21, 2017 | |

ಹೊಸದಿಲ್ಲಿ: ಚೀನ ರಾಜಧಾನಿ ಬೀಜಿಂಗ್‌ ಮತ್ತು  ಹೊಸದಿಲ್ಲಿಯ ಗಾಳಿ ಉಸಿರುಗಟ್ಟುವಷ್ಟು ಮಲಿನವಾದಾಗಲೇ ಏಷ್ಯಾ ಖಂಡದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಹದಗೆಟ್ಟಿದೆ ಎನ್ನುವ ಬೆಚ್ಚಿಬೀಳಿಸುವ ವಾಸ್ತವ ಅರ್ಥವಾಗಿತ್ತು. ಇದನ್ನು ಪುಷ್ಟೀಕರಿಸುತ್ತಿದೆ ಇಸ್ರೋ ಮತ್ತು ಅಮೆರಿಕದ ನಾಸಾ ನಡೆಸಿರುವ ಜಂಟಿ ಸಂಶೋಧನೆಯ ವರದಿ. ಏಷ್ಯಾ ಭಾಗದಲ್ಲಿ ಏರೋಸಾಲ್‌ ಕಣಗಳ ಬೃಹತ್‌ ಪದರ ಸೃಷ್ಟಿಯಾಗಿರುವುದನ್ನು ದೃಢಪಡಿಸಿವೆ ಉಪಗ್ರಹದ ಚಿತ್ರಗಳು.

Advertisement

ಅಂದರೆ ಮಾರಕ ಮಾಲಿನ್ಯಕಾರಕಗಳ ಹೊದಿಕೆಯೇ ನಮ್ಮನ್ನು ಆವರಿಸಿದೆ ಎಂದಾಯಿತು! ಆದಾಗ್ಯೂ ಜ್ವಾಲಾ ಮುಖೀ ಸ್ಫೋಟ ಮತ್ತು ಗಾಳಿಯಿಂದ ಏಳುವಂಥ ನೈಸರ್ಗಿಕ ಧೂಳಿನಿಂದಲೂ ಏರೋಸಾಲ್‌ ಪದರ ಸೃಷ್ಟಿಯಾಗುತ್ತದೆ. ಈಗ ಪತ್ತೆಯಾಗಿರುವ ಪದರದ ಗಾತ್ರವನ್ನು ನೋಡಿದಾಗ ಮಾನವ ಸೃಷ್ಟಿತ ವಾಯು ಮಾಲಿನ್ಯದ ಪಾತ್ರವೂ ಹೆಚ್ಚಾಗಿದೆ ಎನ್ನುತ್ತಿದೆ ವೈಜ್ಞಾನಿಕ ವಲಯ. ಭೂಮಿ ಯಿಂದ ಸುಮಾರು 16.5-18.5 ಕಿಲೋಮೀಟರ್‌ ಎತ್ತರದಲ್ಲಿ ಏರೋಸಾಲ್‌ನ ಸಾಂದ್ರತೆ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ವಾತಾವರಣದಲ್ಲಿ ನೈಟ್ರೇಟ್‌ನ ಇರುವಿಕೆಯನ್ನೂ ಈಗ ಪತ್ತೆಹಚ್ಚಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next