Advertisement
ಮದ್ದೂರು ತಾಲೂಕು ಕೆ.ಹೊನ್ನಲಗೆರೆಯ ಆರ್.ಕೆ.ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ, ಆರ್.ಕೆ.ಎಜುಕೇಷನ್ ಇನ್ಸ್‌ಟಿಟ್ಯೂಷನ್ ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಆಯೋಜಿಸಿದ್ದ “ನೋಟಾ’ದ ಸಾಂವಿಧಾನಿಕ ಸಾಧ್ಯತೆಗಳು, ಪರಿಣಾಮಗಳ ಅವಲೋಕನ ಮತ್ತು ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಪ್ರಸ್ತುತ 17ನೇ ಲೋಕಸಭಾ ಚುನಾವಣೆಯು ಶೇ.50ರಷ್ಟು ಮಹಿಳೆಯರ ಮತದಾನದಿಂದ ಅವಲಂಬಿತವಾಗಿದೆ. ಹೀಗಾಗಿ ಸರ್ಕಾರ ರಚನೆಯ ಸಂಪೂರ್ಣ ಅಧಿಕಾರ ಮಹಿಳೆಯರ ಕೈಯಲ್ಲಿದೆ. ಹೀಗಾಗಿ ಈ ಬಾರಿಯ ಅತ್ಯಂತ ಪ್ರಜ್ಞಾಪೂರ್ವಕವಾಗಿ ಶೋಷಣೆ ಹೊರತುಪಡಿಸಿದ ಸುಶಿಕ್ಷಿತರಿಗೆ ಮತದಾನ ಮಾಡಬೇಕೆಂದು ಕರೆ ನೀಡಿದರು.
ಕಡ್ಡಾಯ ಮತದಾನ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ ಮಾತನಾಡಿ, ಕಡ್ಡಾಯ ಮತ ಚಲಾವಣೆ ಮೂಲಕ ಯೋಗ್ಯರನ್ನು ಆಯ್ಕೆ ಮಾಡಿ ಸಶಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಗಬೇಕು.
ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು ಎಂದು ಹೇಳಿದರು. ಇದೇ ವೇಳೆ ಮತದಾನದ ಬಗ್ಗೆ ಮುಖ್ಯ ಶಿಕ್ಷಕ ರಮೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಮತ್ತು ನೋಟಾ ಚಲಾವಣೆ ಬಗ್ಗೆ ಗಣ್ಯರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದವೂ ನಡೆಯಿತು.
ಕಾರ್ಯಕ್ರಮದಲ್ಲಿ ಆರ್.ಕೆ.ವಿದ್ಯಾಸಂಸ್ಥೆಯ ಆಡಳಿತಾಕಾರಿ ಡಾ.ಎಂ.ಸಿ.ಸತೀಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಕಲ್ಯಾಣಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮ, ಅಭಿಲಾಷಾ ಇತರರು ಭಾಗವಹಿಸಿದ್ದರು.