Advertisement
ಇದು ಮನೋಜ್ಞವಾದ ಸೂಫಿ ಕತೆ.ಒಬ್ಬ ಕಟ್ಟಿಗೆ ಮಾರಾಟಗಾರ ಇದ್ದ. ಕಡು ಬಡವ. ಹಗಲಿಡೀ ಕಾಡಿನಲ್ಲಿ ಸೌದೆ ಕಡಿದು ಸಂಗ್ರಹಿಸಿ ಸಂತೆಗೆ ಒಯ್ದು ಮಾರಾಟ ಮಾಡಿದರೆ ಅವನ ಜೀವನ. ಕಾಡಿನಲ್ಲಿಯೇ ಗುಡಿ ಸಲು ಕಟ್ಟಿಕೊಂಡಿದ್ದ.
ಆದರೆ ಹೆಂಡತಿ ಹಿಂಜರಿದಳು. “ಆದರೆ ಇಲ್ಲಿ ಜಾಗವೇ ಇಲ್ಲವಲ್ಲ’.
Related Articles
Advertisement
ಗುಡಿಸಲಿನ ಬಾಗಿಲು ತೆರೆಯಿತು. ಅಲ್ಲೊಬ್ಬ ಮಳೆಯಲ್ಲಿ ನೆನೆಯುತ್ತ ನಿಂತಿದ್ದ. ಒಳಗೆ ಬಂದು ಕೃತಜ್ಞತೆ ಸೂಚಿಸಿದ. ಬಳಿಕ ಮೂವರೂ ಕುಳಿತು ಕೊಂಡು ಪಟ್ಟಾಂಗ ಹೊಡೆಯುತ್ತ ಕಾಲಯಾಪನೆ ಮಾಡಿದರು. ಇರುಳು ಏರುತ್ತಿತ್ತು. ಅಷ್ಟರಲ್ಲಿ ಇನ್ನೊಮ್ಮೆ ಬಾಗಿಲು ಸದ್ದಾಯಿತು.
ಈಗಾಗಲೇ ಒಳಗೆ ಬಂದಿದ್ದ ಅತಿಥಿ ಬಾಗಿಲ ಬಳಿಯೇ ಕುಳಿತಿದ್ದ. ಸೌದೆ ಯಾತ, “ಬಾಗಿಲು ತೆರೆ. ಯಾರೋ ದಾರಿ ತಪ್ಪಿ ಬಂದಿರಬೇಕು’ ಎಂದ.
“ನೀನೊಬ್ಬ ವಿಚಿತ್ರ ವ್ಯಕ್ತಿ. ಇಲ್ಲಿ ಈಗಾಗಲೇ ಸ್ಥಳ ಇಲ್ಲ’ ಎಂದ ಹೊಸಬ.“ನೀನು ಬಾಗಿಲು ತಟ್ಟಿದಾಗ ನನ್ನ ಹೆಂಡತಿ ಹೇಳಿದ್ದನ್ನು ಕೇಳಿದ್ದರೆ ಇಷ್ಟು ಹೊತ್ತಿಗೆ ನೀನು ಕಾಡಿನಲ್ಲಿ ಯಾವು ದಾದರೂ ಪ್ರಾಣಿಗೆ ಆಹಾರ ಆಗುತ್ತಿದ್ದೆ. ಬಾಗಿಲು ತೆರೆ. ಈಗ ನಾವು ಆರಾಮದಲ್ಲಿ ಕುಳಿತಿದ್ದೇವೆ. ಇನ್ನೊಬ್ಬ ಬಂದ ಮೇಲೆ ಕೊಂಚ ಒತ್ತಿಕೊಂಡು ಕುಳಿತರಾಯಿತು, ಬೇಗ ಬಾಗಿಲು ತೆರೆ’ ಎಂದ ಸೌದೆಯಾತ. ಬಾಗಿಲು ತೆರೆಯಿತು. ಇನ್ನೊಬ್ಬ ಒಳ ಬಂದ. ನಾಲ್ವರೂ ಒತ್ತೂತ್ತಿ ಕುಳಿತರು. ಅಷ್ಟರಲ್ಲಿ ಮತ್ತೆ ಬಾಗಿಲಿನ ಸದ್ದಾಯಿತು. ಆದರೆ ಮನುಷ್ಯರು ತಟ್ಟಿದಂತೆ ಇರಲಿಲ್ಲ. ಎಲ್ಲರೂ ಹೆದರಿ ನಿಶ್ಶಬ್ದರಾದರು. “ಅದು ಯಾರು ಎಂದು ನನಗೆ ಗೊತ್ತಿದೆ. ಅದು ನನ್ನ ಕತ್ತೆ. ಕಟ್ಟಿಗೆ ಸಂತೆಗೆ ಒಯ್ದುಕೊಡುವ ನನ್ನ ನಿಷ್ಠೆಯ ಸಂಗಾತಿ. ಮಳೆಯಲ್ಲಿ ನೆನೆದಿರಬೇಕು. ಬಾಗಿಲು ತೆರೆಯಿರಿ, ಒಳಕ್ಕೆ ಕರೆದುಕೊಳ್ಳೋಣ’ ಎಂದ ಸೌದೆಯಾತ. “ಇದು ಅತಿಯಾಯಿತು. ಇಲ್ಲಿ ಜಾಗವೇ ಇಲ್ಲ. ಅದನ್ನೂ ಸೇರಿಸಿಕೊಳ್ಳು ವುದು ಹೇಗೆ!’ ಮೂವರೂ ಚೀರಿದರು.
“ನನ್ನ ಕತ್ತೆಯನ್ನು ನಾನು ಈ ಮಳೆಯಲ್ಲಿ ಹೊರಗೆ ಬಿಡಲಾರೆ. ಅದನ್ನು ಮಧ್ಯೆ ನಿಲ್ಲಿಸಿ ನಾವು ಅದರ ಸುತ್ತ ನಿಂತರಾಯಿತು. ಅದಕ್ಕೊಂದಿಷ್ಟು ಪ್ರೀತಿ, ಬಿಸುಪು ಸಿಕ್ಕ ಹಾಗಾಗುತ್ತದೆ. ಬಾಗಿಲು ತೆರೆಯಿರಿ’ ಎಂದ ಸೌದೆಯಾತ.
ಯಾರೂ ಏನು ಮಾಡುವ ಹಾಗಿರಲಿಲ್ಲ. ಬಾಗಿಲು ತೆರೆಯಿತು. ಕತ್ತೆ ಒಳಬಂತು. “ನನ್ನ ಕತ್ತೆಯ ಬಗ್ಗೆ ನಿಮಗೇನೂ ಗೊತ್ತಿಲ್ಲ. ಇದೊಂದು ಸಂತನ ಹಾಗೆ. ನೀವು ಏನೇ ಹೇಳಿ, ಆತ ಮೌನವಾಗಿ ಕೇಳಿಸಿಕೊಳ್ಳುತ್ತಾನೆ…’ ಎಂದು ಅಕ್ಕರೆಯಿಂದ ಮೈದಡವುತ್ತ ಹೇಳಿದ ಸೌದೆಯಾತ.
( ಸಾರ ಸಂಗ್ರಹ)