Advertisement

ಇತಿಹಾಸದ ಶ್ರೀಮಂತಿಕೆ ತೆರೆದಿಟ್ಟ ಆಳುಪೋತ್ಸವ

12:50 AM Jan 27, 2019 | Harsha Rao |

ಬ್ರಹ್ಮಾವರ/ಬಾರಕೂರು:  ತುಳುನಾಡ ರಾಜಧಾನಿ ಬಾರಕೂರಿನ ಮಹತ್ವವನ್ನು ಮತ್ತೆ ಸಾರಲು ಆಳುಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉತ್ಸವಕ್ಕೆ ಆಗಮಿಸಿದ ಸಾವಿರಾರು ಮಂದಿ ಇಲ್ಲಿನ ಕೋಟೆ, ರಾಜರಾಣಿಯರ ಕಲ್ಯಾಣಿ, ಕಾಲಗರ್ಭದಲ್ಲಿ ಲೀನವಾದ ಅರಮನೆ, ಕಲ್ಲುಚಪ್ಪರ, ಕತ್ತಲೆ ಬಸದಿಗಳನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಿದರು. 

Advertisement

ಕೋಟೆ ನೋಡಲು ಉತ್ಸಾಹ 
ಇಲ್ಲಿನ ಕೋಟೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಪ್ರತೀತಿ ಇದೆ. ಶತ್ರುಗಳ  ಆಕ್ರಮಣ ಹಾಗೂ ಕಾಲದ ಹೊಡೆತಕ್ಕೆ ಸಿಕ್ಕಿ  ಕೋಟೆ ಸಂಪೂರ್ಣ ನಾಶವಾಗಿತ್ತು.  ಆದರೆ ಇದೀಗ ಈ ಕೋಟೆ  ಕಾರ್ಯಕ್ರಮದ ಮುಖ್ಯ ವೇದಿಕೆಯಾಗಿ ಮಾರ್ಪಟ್ಟಿದೆ. ಉತ್ಸವಕ್ಕೆ ಆಗಮಿಸುವವರು ಕೋಟೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಕುದುರೆ ಲಾಯ-ಮಹಾಸತಿ ಕಲ್ಲು 
ಕೋಟೆಯನ್ನು ಸ್ವತ್ಛಗೊಳಿಸುವ ಸಂದರ್ಭ ಸಿಕ್ಕ ಕುದುರೆ ಲಾಯದ ಕಲ್ಲುಗಳು ಹಾಗೂ ಮಹಾಸತಿ ಕಲ್ಲುಗಳನ್ನು ತುಂಬಾ ಸುಂದರವಾಗಿ ಜೋಡಿಸಿಡಲಾಗಿದ್ದು ರಾತ್ರಿ ವಿದ್ಯುತ್‌ ಬೆಳಕಿನ ಚಿತ್ತಾರದಲ್ಲಿ ಇದು ಮತ್ತಷ್ಟು ಆಕರ್ಷಕವಾಗಿ ನೋಡುಗರಿಗೆ ಕಾಣುತ್ತಿದೆ. ಆಗಮಿಸಿದವರು ಈ ಕಲ್ಲುಗಳಲ್ಲಿನ ಕೆತ್ತನೆ, ಚಿತ್ರಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಹಾಗೂ ನಡುವೆ ನಿಂತು  ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಬೆಳಗಿದ ಕತ್ತಲೆ ಬಸದಿ
ಶನಿವಾರ ಸಂಜೆ ಕತ್ತಲೆ ಬಸದಿಯಲ್ಲಿ ದೀಪಾ ಲಂಕಾರ ಹಾಗೂ ತುಳುನಾಡಿನ ಸೊಗಡು ಕಾರ್ಯಕ್ರಮ ಆಕರ್ಷಣೀಯವಾಗಿತ್ತು. ಬಸದಿ ಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು ಅದರಲ್ಲಿನ ಕೆತ್ತನೆಗಳು ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ. 

ಇಂದು ಸಮಾರೋಪ
ಮೂರು ದಿನಗಳ ಆಳುಪೋತ್ಸವ ಜ.27ರಂದು ಸಮಾರೋಪಗೊಳ್ಳಲಿದೆ. 
ರವಿವಾರ ಬೆಳಗ್ಗೆ 10ರಿಂದ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಳುಪರ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಂಜೆ 4.30ರಿಂದ ಯಕ್ಷಗಾನದ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಮಹಾದೈವ ಮಹಿಷಸಂದಾಯ ಕಥಾನಕವನ್ನು ಬಾಕೂìರು ಸಂಸ್ಥಾನದಲ್ಲಿ ಆಯೋಜಿಸಲಾಗಿದೆ. 

Advertisement

ಸಂಜೆ 6ರಿಂದ ಶ್ರೀ ಸೋಮೇಶ್ವರ ಸ್ವಾಮಿಯ ಪುರಮೆರವಣಿಗೆ ನಂತರ ಮೂಡುಕೇರಿ ಪುಷ್ಕರಿಣಿಯಲ್ಲಿ ಮನಮೋಹಕ ಗಂಗಾ ಆರತಿ ನಡೆಯಲಿದೆ.  

ನಾವು ಬಾರಕೂರಿನಲ್ಲಿ 20ವರ್ಷದಿಂದ ಇದ್ದೇವೆ ಆದರೆ ಇಲ್ಲಿನ ಕೋಟೆ, ಕತ್ತಲೆ ಬಸದಿಯನ್ನು ಒಮ್ಮೆಯೂ ನೋಡಿರಲಿಲ್ಲ. ಇಂದು ಹಬ್ಬದ ವಾತಾವರಣ ಇರುವುದರಿಂದ ಇದನ್ನೆಲ್ಲ ನೋಡುವಂತಾಯಿತು. ಇದನ್ನೆಲ್ಲ ಸಂರಕ್ಷಿಸುವ ಕೆಲಸವಾಗಬೇಕು.
-ಕಮಲಾಕ್ಷಿ ಬಾರಕೂರು, ಸ್ಥಳೀಯರು

ಬಾರಕೂರಿನ ಅಳಿದುಳಿದ ಐತಿಹಾಸಿಕ ಸ್ಮಾರಕಗಳನ್ನು ನೋಡಿ ತುಂಬಾ ಖುಷಿಯಾಗಿದೆ ಹಾಗೂ ಶತ್ರುಗಳ ದಾಳಿಯಿಂದ ನಾಶವಾದ ಇಲ್ಲಿನ ಶ್ರೀಮಂತಿಕೆಯ ನೆನೆದಾಗ ಬೇಸರವಾಗುತ್ತದೆ. ಆಳುಪೋತ್ಸವದ ಅನಂತರವು ಇಲ್ಲಿನ ಐತಿಹಾಸಿಕ ಮಹತ್ವವನ್ನು ಉಳಿಸಿ ಸಂರಕ್ಷಿಸುವ ಕಾರ್ಯವಾಗಬೇಕು. ಇದೊಂದು ಪ್ರವಾಸಿ ತಾಣವಾಗಿ ಬೆಳೆಯಬೇಕು.
-ಹರೀಶ್‌ ಕುಮಾರ್‌, ಕಾರ್ಯಕ್ರಮಕ್ಕೆ ಆಗಮಿಸಿದವರು

ಸುಂದರ ಕಲ್ಯಾಣಿ
ಇಲ್ಲಿನ ರಾಜ-ರಾಣಿಯರ ಕೊಳದ ಸುತ್ತಲೂ ಕುಂಬ ಹಾಗೂ ದೀವಟಿಗೆಯ ದೀಪವನ್ನಿಡಲಾಗಿದೆ. ಜತೆಗೆ ವಿದ್ಯುತ್‌ ದೀಪ ಹಾಕಲಾಗಿದ್ದು  ಅರಮನೆಯ ತಳಪಾಯ ಮುಂತಾದ ಅವಶೇಷಗಳು ಅರಮನೆ ಹಾಗೂ ಕಲ್ಯಾಣಿಯ ನಡುವೆ ಇದ್ದ ಸಂಬಂಧಗಳನ್ನು ವಿವರಿಸುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next