Advertisement
ಅಮೆರಿಕದ ಶ್ರೀಮಂತ-ಬಡವರನ್ನು ಗುರಿಯಾಗಿಸಿ ಈ ಸಮೀಕ್ಷೆ ನಡೆಸಲಾಗಿದೆ. ಆದಾಯವನ್ನು ಮಾನದಂಡ ವಾಗಿಟ್ಟು, 41ರಿಂದ 51 ವರ್ಷದವರೆಗಿನವರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 1980ರಲ್ಲಿ ಬಡವರು-ಶ್ರೀಮಂತರ ನಡುವಿನ ಆಯುಷ್ಯದ ಸರಾಸರಿ ವ್ಯತ್ಯಾಸ 5 ವರ್ಷವಿದ್ದರೆ, 2010ರಲ್ಲಿ ಇದು 12.7 ವರ್ಷಕ್ಕೇರಿದೆಯಂತೆ. 50 ವರ್ಷ ವಯಸ್ಸಿನ ಅಮೆರಿಕದ ಬಡವನೊಬ್ಬ 76 ವರ್ಷ ಬದುಕುವ ನಿರೀಕ್ಷೆ ಹೊಂದಿದ್ದರೆ, ಅದೇ ವಯಸ್ಸಿನ ಶ್ರೀಮಂತನೊಬ್ಬ 89 ವರ್ಷ ಬದುಕುವ ನಿರೀಕ್ಷೆ ಹೊಂದಿದ್ದಾಗಿ ಹೇಳಲಾಗಿದೆ. 13 ಮಂದಿ ಆರ್ಥಿಕ ತಜ್ಞರ ಗುಂಪು ಮತ್ತು ಆರೋಗ್ಯ ನೀತಿ ತಜ್ಞರು ಈ ಸಮೀಕ್ಷೆ ನಡೆಸಿದ್ದಾರೆ. ಅಮೆರಿಕ ಸಂಸತ್ತು ಸಾಮಾಜಿಕ ಭದ್ರತೆ, ಆರೋಗ್ಯ ವಿಮಾ ಕ್ಷೇತ್ರ, ಇತರ ಕಾರ್ಯಕ್ರಮಗಳ ಬದಲಾವಣೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲಾಗಿದೆ. Advertisement
ಬಡವರಿಗಿಂತ ಶ್ರೀಮಂತರಿಗೇ ಆಯುಷ್ಯ ಹೆಚ್ಚಂತೆ!
09:44 AM Apr 26, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.