Advertisement

ದೇವರ ದರ್ಶನಕ್ಕೆ ಭಕ್ತಿಭಾವ ಮುಖ್ಯ: ಅದಮಾರು ಶ್ರೀ

12:28 PM Apr 13, 2017 | Harsha Rao |

ಬ್ರಹ್ಮಾವರ: ದೇವರ ದರ್ಶನಕ್ಕಾಗಿ ದೇವಾಲಯಕ್ಕೆ ಆಗಮಿಸುವವರು ಇತರ ಭಕ್ತರನ್ನು ನೋಡದೆ ದೇವರ ದರ್ಶನ ಮಾಡಬೇಕು. ದೇವಾಲಯದಲ್ಲಿ ಇರುವ ಅಷ್ಟೂ ಹೊತ್ತು ಕರ ಜೋಡಿಸಿ ಭಕ್ತಿಯಿಂದ ದೇವರ ಪ್ರಾರ್ಥನೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅವರು ಮಂಗಳವಾರ ನಂಚಾರು ಶ್ರೀ ವಿನಾಯಕ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

Advertisement

ಮಾಜಿ ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನೀಲಾವರ ಶ್ರೀ ಮಹಿಷಮರ್ದಿನಿ ದೇಗುಲದ ನಿಕಟಪೂರ್ವ ಧರ್ಮದರ್ಶಿ ಸುಪ್ರಸಾದ ಶೆಟ್ಟಿ, ಬಾಲಕೃಷ್ಣ ವೈದ್ಯ ಮುದ್ದೂರು, ಜಿ.ಪಂ. ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ, ಉದ್ಯಮಿ ಗಣೇಶ್‌ ಕಿಣಿ ಬೆಳ್ವೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಪದಾಧಿಧಿಕಾರಿ ರವೀಂದ್ರ, ಅರ್ಚಕರಾದ ವೇ|ಮೂ| ಗಣಪಯ್ಯ ಅಡಿಗ, ವೇ|ಮೂ| ಲಕ್ಷ್ಮೀನಾರಾಯಣ ಅಡಿಗ, ಸಮಿತಿಯ ಗೌರವಾಧ್ಯಕ್ಷ ಸತೀಶ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಂಜುನಾಥ ಕರಬ ಸ್ವಾಗತಿಸಿ, ಅಧ್ಯಕ್ಷ ಪ್ರಸಾದ್‌ ಹೆಗ್ಡೆ ನಂಚಾರು ಪ್ರಸ್ತಾವನೆಗೈದರು. ಉಪನ್ಯಾಸಕ ರವಿಚಂದ್ರ ಬಾಯರಿ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಶಶಿಧರ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next