Advertisement
ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ವೀರಶೈವ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ, ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಎರಡನೇ ಗೋಷ್ಠಿಯಲ್ಲಿ ವಚನಕಾರರ ಪ್ರತಿಭಟನೆಯ ನೆಲೆಗಳು ಎಂಬ ವಿಷಯದ ಮೇಲೆ ಮೂವರು ವಿದ್ವಾಂಸರು ಉಪನ್ಯಾಸ ನೀಡಿದರು. ಡಾ| ಸೋಮಶೇಖರ ವಾಲಿಯವರು ಸರ್ವ ಸ್ಥಾವರಗಳ ವಿರೋಧ ಕುರಿತು, ಪ್ರೊ| ಬಿ.ಬಿ. ಡೆಂಗನವರ ಮೂಢನಂಬಿಕೆ ಸೂತಕ ಶೋಷಣೆಗಳ ವಿರೋಧ ಕುರಿತು ಹಾಗೂ ಡಾ| ಉಜ್ವಲಾ ಸರನಾಡಗೌಡ ಮಹಿಳೆ ಮತ್ತು ಶೋಷಿತರ ಪ್ರತಿಭಟನೆ ಕುರಿತು ಮಾತನಾಡಿದರು. ಡಾ| ಸಂಗಮೇಶ ಮೇತ್ರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವೀರಣ್ಣ ಮರ್ತೂರ ವಂದಿಸಿದರು.
ಒಬ್ಬ ವಿದ್ವಾಂಸ-ಒಂದು ವಚನ ವಿಶ್ಲೇಷಣೆ ಎಂಬ ಮೂರನೇ ಗೋಷ್ಠಿಯಲ್ಲಿ ಪ್ರೊ| ಎಸ್.ಪಿ. ಶೇಗುಣಸಿ, ಬಸವರಾಜ ನಾಲತವಾಡ, ಅಕ್ಕಮಹಾದೇವಿ ಬುರ್ಲಿ, ಬಿ.ಸಿ. ಹತ್ತಿ, ಚನ್ನಪ್ಪ ಕತ್ತಿ ಹಾಗೂಯುವರಾಜ ಮಾದನಶೆಟ್ಟಿ ವಚನ ವಿಶ್ಲೇಷಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾದರು. ಇಂಧುಮತಿ ಲಮಾಣಿ ಇದ್ದರು. ಸಂಗಮೇಶ ಬಾದಾಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಬಸವರಾಜ ಕಡ್ಡಿ ಪ್ರಜಾಧರ್ಮವಾಗಿ ಶರಣ ಧರ್ಮ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶರಣರ ವಚನಗಳಲ್ಲಿರುವ ಸಮನ್ವಯ ಸಿದ್ಧಾಂತ ಅನ್ವಯ ಕುರಿತು ಮಾತನಾಡಿ, ನಡೆ ನುಡಿ, ಆಚಾರ-ವಿಚಾರ, ಅರಿವು-ಅನುಭವ, ವಿಜ್ಞಾನ-ಆಧ್ಯಾತ್ಮಗಳ ನಡುವೆ ಸಮನ್ವಯತೆ ಸಾಧಿಸಿ ಶಿವಸಾಯುಜ್ಯ ಪಡೆಯಬೇಕೆಂದು ಹೇಳಿದರು.
ಸರ್ವಾಧ್ಯಕ್ಷ ಡಾ| ಎಂ.ಎಸ್. ಮದಭಾವಿ ಸಮಾರೋಪ ಭಾಷಣ ಮಾಡಿದರು. ಶರಣ ಸಾಹಿತ್ಯ ಪರಿಷತ್‌ನಿಂದ ನಡೆಯುತ್ತಿರುವ ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮ ವೈಶಿಷ್ಯಪೂರ್ಣವಾಗಿ, ಸಮಯಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆದು ಮಾದರಿಯಾಯಿತೆಂದು ಹೇಳಿದರು.
ಬಿ.ಪಿ. ಪಾಟೀಲ ಉಪಸ್ಥಿತರಿದ್ದು ವಚನಗಾಯನ ಮಾಡಿದರು. ಎಲ್.ಪಿ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಮೇಡೆಗಾರ ಶರಣು ಸಮರ್ಪಣೆ ಮಾಡಿದರು. ವಿ.ಸಿ.ನಾಗಠಾಣ, ಕೆ.ಎನ್. ರಾವ್, ಮ. ಗು.ಯಾದವಾಡ, ಎಸ್.ವೈ. ಗದಗ, ಎಸ್.ಬಿ. ದೊಡಮನಿ, ಸುವರ್ಣಾ ಕುರ್ಲೆ, ಬಿ.ಎಂ. ಪಾಟೀಲ, ಆರ್.ಎಂ. ಕೊಳ್ಳಿ, ಸುಭಾಷ್ ಯಾದವಾಡ, ಶಿವಮಠ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು