Advertisement

ಪಂಚಮಸಾಲಿ ಮೀಸಲು ಬಿಜೆಪಿಗೆ ಬಿಸಿ ತುಪ್ಪ

01:54 AM Dec 20, 2021 | Team Udayavani |

ಬೆಳಗಾವಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟವು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆಯೇ ಎನ್ನುವ ಚರ್ಚೆ ಆರಂಭವಾಗಿದೆ.

Advertisement

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಡೆದ ಹೋರಾಟದ ಬಳಿಕದ ಉಪ ಚುನಾವಣೆಗಳಲ್ಲಿ ಬಿಜೆಪಿ ಪ್ರಯಾಸದ ಗೆಲುವು ಮತ್ತು ಕೆಲವು ಕ್ಷೇತ್ರಗಳಲ್ಲಿ ಸೋಲು ಕಾಣಲು ಪಂಚಮಸಾಲಿ ಸಮುದಾಯ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ವೇಳೆ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಗೌಡ ಪಾಟೀಲ್‌ ಸೋಲುಂಡಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಪ್ರಯಾಸದ ಗೆಲುವು ಪಡೆದಿರುವುದರ ಹಿಂದೆ ಪಂಚಮಸಾಲಿ ಸಮುದಾಯದ ಸಾತ್ವಿಕ ಸಿಟ್ಟೂ ಕಾರಣ ಎಂದು ವಿಶ್ಲೇಷಿಸಲಾಗಿತ್ತು.

ಕಳೆದ ತಿಂಗಳು ನಡೆದ ಹಾನಗಲ್‌, ಸಿಂದಗಿ ಉಪ ಚುನಾವಣೆಯ ವೇಳೆ ಪಂಚಮಸಾಲಿ ಸಮುದಾಯ ಬಿಜೆಪಿಯಿಂದ ಅಂತರ ಕಾಯ್ದುಕೊಂಡದ್ದು ಹಾನಗಲ್‌ ಸೋಲಿಗೆ ಕಾರಣ  ಎನ್ನಲಾಗಿದೆ.

ಇದನ್ನೂ ಓದಿ:ಪ್ರತಿಯೊಬ್ಬರಿಗೂ ಧರ್ಮದ ಅರಿವು ಮುಖ್ಯ  : ಶಾಸಕ ಸಿದ್ದು ಸವದಿ

Advertisement

ಪರಿಷತ್‌ ಹೊಡೆತ
ಪರಿಷತ್‌ ಚುನಾವಣೆಯಲ್ಲಿ ಧಾರವಾಡ, ಬೆಳ ಗಾವಿ, ವಿಜಯಪುರ ಕ್ಷೇತ್ರಗಳ ಫಲಿ ತಾಂಶ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಕಿತ್ತೂರು ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ಲಿಂಗಾ ಯತರ ಪ್ರಾಬಲ್ಯವಿದ್ದು, ಪಂಚಮ ಸಾಲಿಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಟಿಕೆಟ್‌ ನೀಡದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಭರವಸೆ ಇಡಿ, ಜತೆಗಿರಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ ನಡೆಸಿ ಸರಕಾರಕ್ಕೆ ನಿರಂತರ ಗಡುವು ನೀಡುತ್ತಿರುವ ಸಮುದಾಯದ ನಾಯಕರು ಇತ್ತೀ ಚೆಗೆ ಬೆಳಗಾವಿಯಲ್ಲಿ ಸಭೆ ಸೇರಿ ಮತ್ತೆ ಮಾರ್ಚ್‌ವರೆಗೂ ಗಡುವು ನೀಡಿದ್ದಾರೆ ಎನ್ನಲಾಗಿದೆ. ಸಮುದಾಯದ ನಿರ್ಲಕ್ಷ್ಯ ಮುಂದಿನ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸೂಚನೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಬೊಮ್ಮಾಯಿ, ತನ್ನ ಮೇಲೆ ಭರವಸೆ ಇಡಿ, ಪಕ್ಷದ ಜತೆಗಿರಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next