Advertisement

ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ

10:56 AM Jul 28, 2017 | Team Udayavani |

ಬೆಂಗಳೂರು: ಮಾರಾಟ ಉದ್ದೇಶಕ್ಕೆ ನಿವೇಶನ, ಮನೆ, ಫ್ಲ್ಯಾಟ್‌ ನಿರ್ಮಾಣ ಮತ್ತು ಹಂಚಿಕೆ ವ್ಯವಹಾರದಲ್ಲಿ ಪಾರದರ್ಶಕತೆ ತರುವ ಜತೆಗೆ ಗ್ರಾಹಕರು ಹಾಗೂ ಡೆವಲಪರ್‌ಗಳ ಸುಗಮ ವ್ಯವಹಾರಕ್ಕಾಗಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ಜಾರಿಯಾಗಿದ್ದು, ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ರೇರಾ ಪ್ರಾಧಿಕಾರದ ಅಧ್ಯಕ್ಷ ಕಪಿಲ್‌ ಮೋಹನ್‌ ತಿಳಿಸಿದರು.

Advertisement

ಮ್ಯಾಜಿಕ್‌ಬ್ರಿಕ್ಸ್‌ ಸಂಸ್ಥೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೇರಾ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, “ರೇರಾಗೆ ಸಂಬಂಧಿಸಿದಂತೆ ಕೆಲ ಕ್ಷೇತ್ರಗಳ ವಿಷಯ ತಜ್ಞರು, ಕಾನೂನು ತಜ್ಞರ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರವೂ ನಿಯಮಾವಳಿ ರೂಪಿಸಿದೆ. ಅದರ ಪರಿಣಾಮಕಾರಿ ಜಾರಿಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ರೇರಾ ಕಾಯ್ದೆಯಡಿ ನೋಂದಣಿ, ಪರಿಶೀಲನೆ, ಮೇಲ್ವಿಚಾರಣೆ ಇತರೆ ಪ್ರಕ್ರಿಯೆಯನ್ನು ಆನ್‌ಲೈನ್‌ನಡಿ ಪರಿಣಾಮಕಾರಿಯಾಗಿ ನಿರ್ವಹಿಸಲು ಆದ್ಯತೆ ನೀಡಲಾಗುವುದು. ನಿಯಮಾವಳಿಗಳ ಪಾಲನೆಯಲ್ಲಿನ ಗೊಂದಲ ನಿವಾರಣೆ ಜತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪ್ರಸ್ಟೀಜ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್‌ ರಜಾಕ್‌, ರಿಯಲ್‌ ಎಸ್ಟೇಟ್‌ ಹಾಗೂ ಡೆವಲಪರ್‌ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿಯಂತ್ರಣ ಹಾಗೂ ಮೇಲ್ವಿಚಾರಣೆಗೆ ಈಗಾಗಲೇ ಹಲವು ಸರ್ಕಾರಿ ಸಂಸ್ಥೆಗಳಿವೆ. ರೇರಾ ಪ್ರಾಧಿಕಾರವೂ ಮತ್ತೂಂದು ಮೇಲ್ವಿಚಾರಣಾ ಸಂಸ್ಥೆಯಂತಾಗದಿರಲಿ ಎಂಬುದು ಡೆವಲಪರ್‌ಗಳ ಆಶಯ ಎಂದು ಹೇಳಿದರು. 

500 ಚದರ ಮೀಟರ್‌ಗಿಂತ ಕಡಿಮೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮಾರಾಟ ಉದ್ದೇಶದ ಕಟ್ಟಡಗಳನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಅತಿ ಹೆಚ್ಚು ಅಕ್ರಮ ನಡೆಯುವುದು ಈ ಮಿತಿಯೊಳಗಿನ ಕಟ್ಟಡಗಳ ನಿರ್ಮಾಣ ವ್ಯವಹಾರದಲ್ಲೇ. ಇವುಗಳ ಮೇಲೆ ನಿಯಂತ್ರಣ ಹೇರದಿರುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು.

Advertisement

ನಿಯಮಬದ್ಧವಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಲು ಸಿದ್ಧವಿದ್ದರೂ ಕಾನೂನಿನಲ್ಲೇ ಕೆಲ ದೋಷಗಳಿವೆ. ಮುಖ್ಯವಾಗಿ ಕೆಲ ಕಂದಾಯ ಕಾಯ್ದೆಗಳು ಅಪ್ರಸ್ತುತವೆನಿಸಿವೆ. ಅವುಗಳಿಂದ ಅನಾನುಕೂಲಗಳೇ ಹೆಚ್ಚಾಗಿವೆ. ಅವು ಮಾರ್ಪಾಡಾಗದಿದ್ದರೆ ಸುಗಮವಾಗಿ ವ್ಯವಹಾರ ನಡೆಸುವುದು ಕಷ್ಟ. ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಲವರು ಮನವಿ ಮಾಡಿದರು. 

ಇದೇ ರೀತಿ ಹಲವು ಡೆವಲಪರ್‌ಗಳು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸ್ಟರ್ಲಿಂಗ್‌ ಡೆವಲಪರ್ ಸಹ ಸ್ಥಾಪಕ ಶಂಕರ್‌ ಶಾಸಿ, ಸ್ಟರ್ಲಿಂಗ್‌ ಡೆವಲಪರ್ ಅಧ್ಯಕ್ಷ ರಮಣಿ ಶಾಸಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next