Advertisement

ಮಸೀದಿ ವೀಕ್ಷ ಣೆ ಮಾಡಿದ ಜನಪ್ರತಿನಿಧಿಗಳು

05:08 PM Nov 08, 2022 | Team Udayavani |

ಕೋಲಾರ: ಧಾರ್ಮಿಕ ಕೇಂದ್ರಗಳ ಕುತೂಹಲ ತಣಿಸುವ ನೋಡ ಬನ್ನಿ ನಮ್ಮ ಮಸೀದಿ ವಿನೂತನ ಕಾರ್ಯಕ್ರಮವನ್ನು ನಗರದ ಬಾರ್‌ಲೈನ್‌ ಮಸೀದಿ ಮತ್ತು ಜಮಾ ಅತೆ ಹಿಂದ್‌ ಇಸ್ಲಾಮ್‌ ಸಂಘಟನೆ ಆಯೋಜಿಸಿದ್ದು, ಮಸೀದಿ ಚಟುವಟಿಕೆ ವೀಕ್ಷಿಸಲು ಸಾರ್ವಜನಿಕರಿಗೆ, ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿತ್ತು. ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮದ ಆಯೋಜಕರು ಸಿಂಗರಿಸಿದ್ದ ಮಸೀದಿಯ ಎಲ್ಲಾ ಮಹಾದ್ವಾರಗಳನ್ನು ತೆರೆದಿಟ್ಟು ಬಾಗಿಲಲ್ಲಿ ನಿಂತು ಮಸೀದಿ ವೀಕ್ಷಿಸಲು ಬರುವವರನ್ನು ಮುಕ್ತವಾಗಿ ಸ್ವಾಗತಿಸಿದರು.

Advertisement

ಮಸೀದಿಗೆ ಪ್ರವೇಶಿಸಿದವ ನೋಂದಣಿ ಬಳಿಕ ಅಂಗಶುದ್ಧಿ ಕುರಿತು ಮಾಹಿತಿ ನೀಡಲಾಯಿತು. ಆನಂತರ ನಮಾಜ್‌ ಮಾಡುವ ಆವರಣ ಶುದ್ಧವಾಗಿ ಪ್ರವೇಶಿಸಿ ಖಾಲಿ ಜಾಗ ಇದ್ದ ಕಡೆ ಭುಜಕ್ಕೆ ಭುಜ ತಾಗಿಸಿ ನಿಲ್ಲಲಾಯಿತು. ಮಸೀದಿ ಮೌಲ್ವಿಯು ತನಗೆ ಸೀಮಿತವಾಗಿರುವ ಜಾಗದಲ್ಲಿ ನಿಂತು ಸಾಮೂಹಿಕ ನಿತ್ಯ ಐದು ಬಾರಿ ನಮಾಜ್‌(ಪ್ರಾರ್ಥನೆ) ವಿಧಿ ವಿಧಾನಗಳ ವಿವಿರ ನೀಡಿದರು.

ಪ್ರತಿ ಶುಕ್ರವಾರ ಮಧ್ಯಾಹ್ನದ ನಮಾಜ್‌ ನಂತರ ಧಾರ್ಮಿಕ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಪ್ರವಚನವನ್ನು ಧಾರ್ಮಿಕ ಮುಖಂಡರು ಮಸೀದಿಯಿಂದಲೇ ನಿರ್ವಹಿಸುತ್ತಾರೆ. ಮೃತರಾದವರ ದೇಹಗಳನ್ನು ಮಸೀದಿಗೆ ತಂದು ಹೇಗೆ ಅಂತಿಮ ವಿಧಿ ವಿಧಾನಗಳನ್ನು ಪರಿಮಳ ಸ್ನಾನ ನಿರ್ವಹಿಸಿ, ನಂತರ ನಿಗದಿಯಾದ ವಾಹನದಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಕುರಿತು ತಿಳಿಸಿದರು.

ಕುರಾನ್‌ ಅವತರಣಿಕೆಯನ್ನು ಕೇಳುವ ಅವಕಾಶ ಕಲ್ಪಿಸಲಾಗಿತ್ತು. ಕುರಾನ್‌ ಮತ್ತು ಇಸ್ಲಾಂ ಸಂಬಂಧ ಜಮಾ ಅತೆ ಇಸ್ಲಾಮ್‌ಹಿಂದ್‌ ಪ್ರಕಟಿಸಿರುವ ವಿವಿಧ ಪುಸ್ತಕಗಳನ್ನು ಆಸಕ್ತ ಓದುಗರಿಗೆ ಉಚಿತವಾಗಿ ವಿತರಿಸಲಾಯಿತು.

“ನೋಡ ಬನ್ನಿ ನಮ್ಮ ಮಸೀದಿ’ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌, ಕೆ. ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯರುಗಳಾದ ನಸೀರ್‌ ಅಹಮದ್‌, ಎಂ.ಎಲ್‌. ಅನಿಲ್‌ ಕುಮಾರ್‌, ಸಮಾಜ ಸೇವಕ ಸಿಎಂಆರ್‌ ಶ್ರೀನಾಥ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್‌, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್‌.ಗಣೇಶ್‌ ಮತ್ತಿತರರು ಮಸೀದಿಯ ವಿವಿಧ ಚಟುವಟಿಕೆಗಳನ್ನು ಆಸಕ್ತಿಯಿಂದ ಗಮನಿಸಿ ಅರಿತುಕೊಂಡರು.

Advertisement

ವಕ್ಫ್ ಬೋರ್ಡ್‌ ಅಧ್ಯಕ್ಷ ಹಿದಾಯತ್‌ ಉಲ್ಲಾ, ನಗರ ಸಭಾ ಉಪಾಧ್ಯಕ್ಷ ಜಗ್ನು ಅಸ್ಲಾಂ, ಮಾಜಿ ನಗರಸಭಾ ಸದಸ್ಯರಾದ ಅಬ್ದುಲ್‌ ಖಯ್ನಾಂ ಮತ್ತು ನದೀಮ್‌, ನಗರ ಸಭಾ ಸದಸ್ಯರುಗಳಾದ ಶಫಿ, ಬಾಬ್‌ ಜಾನ್‌, ಅಂಬರೀಷ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವೈ.ಶಿವಕುಮಾರ್‌, ಶ್ರೀನಿವಾಸಪುರ ತಾಲೂಕಿನ ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ನವೀನ್‌ ಕುಮಾರ್‌, ಸೈಯದ್‌ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಈ ಕಾರ್ಯ ಕ್ರಮವನ್ನು ಹೃದಯಗಳ ಬೆಸೆಯುವ ಕಾರಣಕ್ಕಾಗಿ ಹಮ್ಮಿಕೊಳ್ಳ ಲಾಗುತ್ತಿದೆ. ಇದರಿಂದ ಅನ್ಯ ಧರ್ಮೀಯರು ಪರಸ್ಪರ ಅರಿತು ಬೆರೆಯಲು ಸಾಧ್ಯ, ಇದರಲ್ಲಿ ವಿದ್ಯಾರ್ಥಿ ಯುವ ಸಮೂಹ ಹೆಚ್ಚಾಗಿ ಪಾಲ್ಗೊಳ್ಳಬೇಕು. – ನಯಾಜ್‌, ಜಮಾಅತೆ ಇಸ್ಲಾಮ್‌ ಹಿಂದ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next