Advertisement

ಕಡ್ಡಾಯ ಮತದಾನಕ್ಕೆ ಧರ್ಮ ಪೀಠಗಳೂ ಅರಿವು ಮೂಡಿಸಲಿ

07:28 AM Feb 06, 2019 | Team Udayavani |

ಮೈಸೂರು: ಜನತಂತ್ರ ವ್ಯವಸ್ಥೆಯಲ್ಲಿ ಮತದಾನ ಹೋಗಿ, ಮತ ಕ್ರಯ-ವಿಕ್ರಯಕ್ಕೆ ಬಂದು ನಿಂತಿರುವ ಈ ದಿನಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ಸಂತೆ, ಜಾತ್ರೆಗಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಶಾಸಕ ಅಡಗೂರು ಎಚ್.ವಿಶ್ವನಾಥ್‌ ಹೇಳಿದರು.

Advertisement

ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಭಜನಾ ಮೇಳದ ಸಮಾ ರೋಪದಲ್ಲಿ ಮಾತನಾಡಿದರು.

ಸುತ್ತೂರು ಜಾತ್ರೆಯಲ್ಲಿ ಕೃಷಿಮೇಳ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಮೇಳಗಳ ಮೂಲಕ ಎಲ್ಲಾ ರೀತಿಯ ಅರಿವು ಮೂಡಿಸಲಾಗುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವುದರಿಂದ ಈ ಕಾರ್ಯಕ್ರಮಗಳ ಜೊತೆಗೆ ಮತದಾನದ ಬಗ್ಗೆಯೂ ಅರಿವು ಮೂಡಿಸಬೇಕಿದೆ ಎಂದರು.

ಜನತಂತ್ರ ವ್ಯವಸ್ಥೆಯಲ್ಲಿ ರಾಷ್ಟ್ರಪತಿ, ಪ್ರಧಾನಿಗೂ ಒಂದೇ ಮತ, ಜನ ಸಾಮಾನ್ಯರಿಗೂ ಒಂದೇ ಮತದಾನದ ಹಕ್ಕನ್ನು ನೀಡಲಾಗಿದೆ. ಹೀಗಾಗಿ ರಾಜಕಾರಣದ ಬಗ್ಗೆ ಭಾರತೀಯರು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ಬೇವು ಬಿತ್ತಿ ಮಾವು ಕೇಳಲು ಸಾಧ್ಯವಾಗಲ್ಲ. ನಾವು ಬಿತ್ತಿರುವುದೇ ಬೇವು, ಇನ್ನೆಲ್ಲಿ ಮಾವು ಕೇಳುವುದು ಎಂದು ಹೇಳಿದರು.

ಕೋಟಿ ಕೋಟಿ ಕೊಟ್ಟು ಶಾಸಕರುಗಳನ್ನೇ ಖರೀದಿಸಲಾಗುತ್ತಿದೆ. ಈ ಶಾಸಕರು ಕೋಟಿ ಕೋಟಿ ಹಣ ತೆಗೆದುಕೊಂಡು ಬೇರೆ ಕಡೆ ಹೋಗಿ ಸರ್ಕಾರವನ್ನೇ ಉರುಳಿಸುವ ಮಾತುಗಳನ್ನಾಡುತ್ತಾರೆ. ಇದರ ಅಗತ್ಯತೆ ಇದೆಯೇ ಎಂಬ ಬಗ್ಗೆ ಜನ ಮಾತನಾಡಬೇಕು. ಜಾತಿ-ಪಾರ್ಟಿಗಳ ಹೊರತಾಗಿ ಇಂತಹ ವಿಷಯಗಳು ಜನರ ನಡುವೆ ಚರ್ಚೆ ಆಗಬೇಕು ಎಂದರು.

Advertisement

ಧರ್ಮರಾಜಕಾರಣ: ಲಂಡನ್‌ ಸಂಸತ್ತಿನಲ್ಲಿ 80 ಧರ್ಮಾಧಿಕಾರಿಗಳೇ ಇದ್ದಾರೆ. ಹೀಗಾಗಿ ಅಲ್ಲಿನ ಸಂಸತ್ತಿನಲ್ಲಿ ರಾಜಕಾರಣದ ಜೊತೆಗೆ ಧರ್ಮಕಾರಣವೂ ಚರ್ಚೆಯಾಗುತ್ತದೆ. ರಾಜಕಾರಣಕ್ಕೆ ಧರ್ಮದ ಸ್ಪರ್ಶವಾದಾಗ ಇಂತಹ ಪಿಡುಗುಗಳು ತಪ್ಪುತ್ತೆ. ಒಂದೇ ಒಂದು ಮತ ವಾಜಪೇಯಿಯವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿತು. ಅಂತಹ ಶಕ್ತಿ ಇರುವ ಮತವನ್ನು ಹಣ-ಹೆಂಡ ಕೊಟ್ಟು ಕೊಂಡು ಕೊಳ್ಳುತ್ತಿದ್ದೇವೆ, ಇದು ಬದಲಾಗ ಬೇಕು ಎಂದು ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next