– ಅರೇ, ರಾಗಿಣಿ ಮತ್ತೆ ಸುದ್ದಿಯಲ್ಲಿದ್ದಾರಾ? ಇದೀಗ ಈ ಪ್ರಶ್ನೆಯದ್ದೇ ಕಾರುಬಾರು. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಿದ್ದ ನಟಿ ರಾಗಿಣಿ, ಅದೇಕೋ ಏನೋ, ಎಲ್ಲೂ ಹೆಚ್ಚು ಸುದ್ದಿಯೇ ಇರಲಿಲ್ಲ. ಆದರೀಗ ಇದ್ದಕ್ಕಿದ್ದಂತೆಯೇ ಇಗೋ ನಾನಿಲ್ಲಿದ್ದೀನಿ ಅಂತ ಪ್ರತ್ಯಕ್ಷವಾಗಿದ್ದಾರೆ ರಾಗಿಣಿ! ಹಾಗಂತ, ಅದೇ ರಾಗಿಣಿನಾ ಇವರು ಅನ್ನುವಷ್ಟು ಬದಲಾಗಿದ್ದಾರೆ ಅನ್ನೋದು ಹೊಸ ಸುದ್ದಿ. ಸಿಕ್ಕಾಪಟ್ಟೆ ದಪ್ಪಗಿದ್ದ ರಾಗಿಣಿ, ಈಗ ಎಲ್ಲರಿಗೂ ಶಾಕ್ ಆಗುವ ರೀತಿ ತಮ್ಮ ದಢೂತಿ ದೇಹದ ಮೈ ಭಾರ ಇಳಿಸಿಕೊಂಡು, ಹೊಸ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಆ ನ್ಯೂ ಲುಕ್‌ನಲ್ಲಿ ರಾಗಿಣಿ ಅವರನ್ನ ನೋಡಿದವರೆಲ್ಲರೂ ಇವರು ಮೊದಲ ರಾಗಿಣಿನಾ? ಅನ್ನುವಷ್ಟರ ಮಟ್ಟಿಗೆ ರಾಗಿಣಿ ಫುಲ್ ಸ್ಲಿಮ್ ಆಗಿರುವುದಂತೂ ನಿಜ. ಅಷ್ಟೇ ಅಲ್ಲ, ಒಂದಷ್ಟು ಸಿನಿಮಾಗಳಲ್ಲೂ ಬಿಜಿಯಾಗಿದ್ದಾರೆಂಬುದು ಅಷ್ಟೇ ನಿಜ. ಈಗ ರಾಗಿಣಿ “ನೆಕ್ಸ್ಟ್ ಸಿಎಂ’ ಆಗುವ ಉತ್ಸಾಹದಲ್ಲಿದ್ದಾರೆ! ಇಷ್ಟಕ್ಕೂ ರಾಗಿಣಿ ಯಾಕೆ ಹೆಚ್ಚು ಸುದ್ದಿಯಾಗಲಿಲ್ಲ. ಅವರ ಕೆಲ ಸಿನಿಮಾಗಳ ಕಥೆ ಏನಾಯ್ತು, ಇದ್ದಕ್ಕಿದ್ದಂತೆಯೇ ಸ್ಲಿಮ್ ಆಗಿದ್ದು ಹೇಗೆ, ರಾಜಕೀಯದ ಕೆರಿಯರ್‌ಗೆàನಾದ್ರೂ ಅವರ “ನಾನೇ ನೆಕ್ಸ್ಟ್ ಸಿಎಂ’ ಚಿತ್ರ ಸಹಕಾರಿಯಾಗುತ್ತಾ, ರಾಜಕೀಯಕ್ಕೇನಾದ್ರೂ ಹೋಗುವ ಹೊಸ ಐಡಿಯಾ ಏನಾದರೂ ಇದೆಯಾ ಎಂಬಿತ್ಯಾದಿ ಕುರಿತು “ರೂಪತಾರಾ’ದಲ್ಲಿ ಮಾತಾಡಿದ್ದಾರೆ.
Advertisement
ಸಿಎಂ ಜರ್ನಿ ಹೊಸ ಅನುಭವ!“ಸದ್ಯಕ್ಕೆ ನಾನು “ನಾನೇ ನೆಕ್ಸ್ಟ್ ಸಿಎಂ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಈ ಸಿನಿಮಾ ನನಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದೆ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಈ ಚಿತ್ರ ಒಳ್ಳೇ ಜರ್ನಿ ಮಾಡಿಸಿದೆ. ಸ್ಟಾರ್‌ಗಳ ಜತೆ ಕಮರ್ಷಿಯಲ್ ಸಿನಿಮಾ ಮಾಡಿದಾಗ ಟೆನನ್ ಇರುವುದಿಲ್ಲ. ಆ ಚಿತ್ರಗಳೆಲ್ಲವೂ ಹಿಟ್ ಆಗಿವೆ. ಆದರೆ, ಸೋಲೋ ಸಿನಿಮಾ ಮಾಡಿದಾಗ ಭಯ ಹುಟ್ಟೋದು ಜಾಸ್ತಿ. ಯಾಕೆಂದರೆ, ಸೋಲೋ ಸಿನಿಮಾ ನನ್ನ ಜೀರೋ ಲೈಫ್ನಿಂದ ಶುರುವಾಗಿದೆ. “ರಾಗಿಣಿ ಐಪಿಎಸ್’ ಸಿನಮಾ ಮೂಲಕ ನನ್ನ ಸೋಲೋ ಸಿನಿಮಾದ ಜರ್ನಿ ಶುರುವಾಯ್ತು. ಒಳ್ಳೇ ಅವಕಾಶ ಸಿಕ್ಕಿದ್ದನ್ನು ಸರಿಯಾಗಿ ನಿರ್ವಹಿಸಿದೆ. ನಾನ್ಯಾವತ್ತೂ ಆ ರೀತಿಯ ಅವಕಾಶ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನನ್ನ “ರಾಗಿಣಿ ಐಪಿಎಸ್’ ಚಿತ್ರವನ್ನು ಜನರು ಇಷ್ಟಪಟ್ಟರು. ನಾನೂ ಕೂಡ ಧೈರ್ಯ ಮಾಡಿ, ರಿಸ್ಕ್ ತಗೊಂಡು ಕೆಲಸ ಮಾಡಿದೆ. ಜನರು ನನ್ನ ಕೆಲಸವನ್ನು ಇಷ್ಟಪಟ್ಟರು. “ರಣಚಂಡಿ’ ಸಿನಿಮಾ ಕೂಡ ನನಗೆ ಹೊಸಬಗೆಯ ಫೀಲ್ ಕೊಟ್ಟಿದೆ. “ನಾನೇ ನೆಕ್ಸ್ಟ್ ಸಿಎಂ’ ನನಗೊಂದು ಹೊಸ ಅನುಭವದ ಸಾರವನ್ನೇ ಕಟ್ಟಿಕೊಟ್ಟಿದೆ. ಈ ಸಿನಿಮಾ ಲೇಟ್ ಆಗಿದ್ದರೂ, ಲೇಟೆಸ್ಟ್ ಆಗಿ ಹೊರಬರಲಿದೆ. ನನ್ನ ಕೆರಿಯರ್‌ನಲ್ಲಿ ಇದು ಸ್ಪೆಷಲ್ ಸಿನಿಮಾ. ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಮೊದಲು ಮೈಸೂರು ಪ್ರೀಮಿಯರ್ ಸ್ಟುಡಿಯೋದ ನಾಗ್‌ಕುಮಾರ್ ಅವರ ನಿರ್ಮಾಣ ಹಾಗೂ ಮುಸ್ಸಂಜೆ ಮಹೇಶ್ ಅವರ ನಿರ್ದೇಶನ. ಜತೆಗೆ ಒಳ್ಳೆಯ ಕಥಾಹಂದರ, ಪಾತ್ರ ಇರುವ ಸಿನಿಮಾ. ಈ ಕಾರಣಕ್ಕೆ ನಾನು ಚಿತ್ರ ಒಪ್ಪಿಕೊಂಡೆ. ನಿರ್ಮಾಪಕರಿಗೆ ಸಿನಿಮಾ ಪ್ರೀತಿ ಇತ್ತು. ಹಾಗಾಗಿ, ನಿರ್ದೇಶಕರ ಕನಸಿಗೆ ಬಣ್ಣ ತುಂಬಿದ್ದಾರೆ. ಒಳ್ಳೆಯ ಸಿನಿಮಾ ಆಗಲು ಸಹಕಾರ ನೀಡಿದ್ದಾರೆ. ಇಡೀ ಟೀಮ್ ಜತೆಯಲ್ಲಿ ನಿರ್ಮಾಪಕರು ಜರ್ನಿ ಮಾಡಿ, ಸಾಕಷ್ಟು ಸ್ಟ್ರಗಲ್ ಮಾಡಿದ್ದಾರೆ. ಯಾವುದೇ ಸಮಸ್ಯೆಯೂ ಎದುರಾಗಲಿಲ್ಲ. ಇನ್ನು, ಒಂದು ದಿನ ಕೂಡ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ನೋಡಿಕೊಂಡು ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದು ವಿವರ ಕೊಡುತ್ತಾರೆ ರಾಗಿಣಿ.
ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮಾಗಳನ್ನು ನೋಡಿದ್ದೆ. ಅವರು ನಿರ್ದೇಶಿಸಿರುವ ಹೀರೋ ಜತೆಯೂ ಕೆಲಸ ಮಾಡಿದ್ದೇನೆ. ಆದರೆ, ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಿರಲಿಲ್ಲ. ಎಲ್ಲರೊಂದಿಗೂ ಲವ್‌ಸ್ಟೋರಿ ಇರುವಂತಹ ಸಿನಿಮಾ ಮಾಡುತ್ತಾರೆ, ನನ್ನೊಂದಿಗೆ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಂದು ದಿನ ಅವರು ನನಗೆ ಕಾಲ್ ಮಾಡಿ, ಒಂದು ಕಥೆ ಇದೆ, ನೀವು ಕೇಳಿ, ಇಷ್ಟವಾದರೆ ಸಿನಿಮಾ ಮಾಡಿ ಅಂದರು. ನಾನೂ ಕೂಡ ಓಕೆ, ಬನ್ನಿ ಅಂದೆ. ಅವರು ಬಂದಾಗ, ಒಳ್ಳೇ ಲವ್‌ಸ್ಟೋರಿ ಸಿಗುತ್ತೆ ಅಂದುಕೊಂಡಿದ್ದೆ. ಆದರೆ, ಅವರು ಮಾತ್ರ ಹೇಳಿದ್ದು ಸೋಲೋ ಸ್ಟೋರಿ! ಒನ್‌ಲೈನ್ ಹೇಳಿದ ಕೂಡಲೇ ನನಗೆ ಕಥೆ ಇಷ್ಟ ಆಯ್ತು. ಕಮರ್ಷಿಯಲ್ ಆ್ಯಕ್ಷನ್ ಸಿನಿಮಾದಲ್ಲಿ ನಾನೊಬ್ಬಳೇ ನಿಭಾಯಿಸೋದು ಸುಲಭನಾ ಎಂಬ ಪ್ರಶ್ನೆಯೂ ಬಂತು. ಕೊನೆಗೆ ಒಳ್ಳೇ ಕಥೆ, ಪಾತ್ರ ಇದ್ದುದರಿಂದ ಹಿಂದೆ ಮುಂದೆ ನೋಡದೆ ಗ್ರೀನ್‌ಸಿಗ್ನಲ್ ಕೊಟ್ಟೆ. ಮಹೇಶ್ ನಿಜಕ್ಕೂ ಒಳ್ಳೇ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವಿದೆ. ಈ ಚಿತ್ರಕ್ಕಾಗಿ ಸಾಕಷ್ಟು ರೀಸರ್ಚ್ ಮಾಡಿರುವುದು ಕಾಣುತ್ತದೆ. ಇಲ್ಲಿ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಸಣ್ಣ ಸಣ್ಣ ಸಂಗತಿಗಳು ಕೂಡ ಸೂಕ್ಷ್ಮತೆಯಿಂದ ಕೂಡಿವೆ. ಒಬ್ಬ ಸಾಮಾನ್ಯ ಮನುಷ್ಯ, ನಾನು ಸಿಎಂ ಆದರೆ ಏನೆಲ್ಲಾ ಮಾಡಬಹುದು ಎಂಬ ಆಲೋಚನೆ ಬರುವುದು ಗ್ಯಾರಂಟಿ. ಇಲ್ಲಿ “ಸಿಎಂ’ ಅಂದರೆ, ಕಾಮನ್ ಮ್ಯಾನ್ ಎಂದರ್ಥ. ಹಾಗಂತ, ಇದು ಜಯಲಲಿತಾ ಅಥವಾ ಇನ್ಯಾರಧ್ದೋ ಕಥೆ ಅಲ್ಲ. ಒಬ್ಬ ಸಾಮಾನ್ಯ ಮನುಷ್ಯ, ಸೊಸೈಟಿಗೆ ಸಮಸ್ಯೆ ಬಂದಾಗ, ಹೇಗೆಲ್ಲಾ ನಿಂತು ಹೋರಾಡುತ್ತಾನೆ ಎಂಬುದು ಹೈಲೆಟ್.
Related Articles
“ನಾನೇ ನೆಕ್ಸ್ಟ್ ಸಿಎಂ’ ಚಿತ್ರದ ಚಿತ್ರೀಕರಣ ವೇಳೆ, ನನಗೆ ಪೆಟ್ಟು ಬಿದ್ದಿತ್ತು. ಆಗ ನಾನು ಆಸ್ಪತ್ರೆಯಲ್ಲಿದ್ದೆ. ಆ ಸಮಯದಲ್ಲಿ ಚಿತ್ರತಂಡ ನನಗೆ ತೋರಿಸಿದ ಪ್ರೀತಿ ಮರೆಯುವುದಿಲ್ಲ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ತೃಪ್ತಿ ನನಗಿದೆ. ಇನ್ನು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಲ್ಲಿ ಒಳ್ಳೆಯ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಹಿರಿಯ ಛಾಯಾಗ್ರಾಹಕ ಜೆ.ಜೆ. ಕೃಷ್ಣ ಕೂಡ ಸಿನಿಮಾವನ್ನು ಚೆನ್ನಾಗಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಆ ವೇಳೆ ನಾನು ಸಿಕ್ಕಾಪಟ್ಟೆ ದಪ್ಪಗಿದ್ದೆ. ಆದರೂ ಅವರು ನನ್ನನ್ನು ತುಂಬಾ ಸ್ಲಿಮ್ ಇರುವ ರೀತಿ ಮ್ಯಾಜಿಕ್ ಮಾಡಿ ತೋರಿಸಿದ್ದಾರೆ.
ಚಿತ್ರದಲ್ಲಿ ಆ್ಯಕ್ಷನ ಡಿಫರೆಂಟ್ ಆಗಿದೆ. ರಾಗಿಣಿಯನ್ನು ಇಲ್ಲಿ ಬೇರೆ ರೀತಿ ನೋಡಬಹುದು. ಸಿನಿಮಾ ನೋಡಿ ಆಚೆ ಬಂದವರಿಗೆ ಖಂಡಿತವಾಗಿಯೂ ಒಂದು ಹೊಸ ಹುಮ್ಮಸ್ಸು ಸಿಗುತ್ತದೆ. ಅದು ಕಥೆಯಿಂದ ಅನ್ನೋದನ್ನು ಮಾತ್ರ ಹೇಳಲೇಬೇಕು ಎನ್ನುತ್ತಾರೆ ರಾಗಿಣಿ.
Advertisement
ಅವಕಾಶ ಸಿಕ್ಕರೆ ರಾಜಕೀಯಕ್ಕೆ ಎಂಟ್ರಿ!ರಾಗಿಣಿ ಈ ಚಿತ್ರವನ್ನು ಒಪ್ಪಿಕೊಂಡಿದ್ದರ ಹಿಂದೆ, ರಾಜಕೀಯದ ಬೆಳವಣಿಗೆ ಇದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ, ಎಂಥದ್ದೂ ಇಲ್ಲ. ಈ ಚಿತ್ರ ನನ್ನ ಮುಂದಿನ ಪೊಲಿಟಿಕಲ್ ಕೆರಿಯರ್‌ಗೆ ಎಷ್ಟರಮಟ್ಟಿಗೆ ಫ್ಲಾಟ್ ಫಾರ್ಮ್ ಆಗುತ್ತೋ ಗೊತ್ತಿಲ್ಲ. ಆದರೆ, ನಾನು, ಒಬ್ಬ ನಟಿಯಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇನಷ್ಟೇ. ಎಲ್ಲರೂ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಹೋಗ್ತಿàರಾ ಅಂತಾನೇ ಕೇಳ್ತಾ ಇದ್ದಾರೆ. ಸದ್ಯಕ್ಕಂತೂ ಆ ಬಗ್ಗೆ ಏನೂ ಗೊತ್ತಿಲ್ಲ. ಆದರೆ, ಅವಕಾಶ ಸಿಕ್ಕರೆ ಖಂಡಿತ ಬಿಡೋದಿಲ್ಲ. ಈ ಕನ್ನಡದ ಜನರು ನನ್ನನ್ನು ಬೆಳೆಸಿದ್ದಾರೆ. ಇಂದು ನಾನು ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲೇ ಹೋದರೂ, ಕನ್ನಡದ ನಟಿ ಅಂತಾನೇ ಗುರುತಿಸುತ್ತಾರೆ. ನಾನು ಹೊರಗೆ ಹೋದರೂ ಕನ್ನಡದವಳು ಅಂತಾನೇ ಹೇಳಿಕೊಳ್ತೀನಿ. ಒಬ್ಬ ನಟಿಯನ್ನಾಗಿ ಸ್ವೀಕರಿಸಿರುವ ಜನರು, ಮುಂದಿನ ದಿನಗಳಲ್ಲಿ ನಾನೇನಾದರೂ ರಾಜಕೀಯಕ್ಕೆ ಎಂಟ್ರಿಕೊಟ್ಟರೆ, ಖಂಡಿತ ಅಲ್ಲೂ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ. ಹಾಗಂತ ನಾನು, ರಾಜಕೀಯಕ್ಕೆ ಹೋಗ್ತಿàನಿ ಅಂತ ನಿರ್ಧಾರ ಮಾಡಿಲ್ಲ. ಅವಕಾಶ ಬಂದರೆ ಹೋಗ್ತಿàನಿ. ಆದರೆ, ಪಕ್ಷಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಯಾರೇ ಬಂದು ಅವಕಾಶ ಕೊಟ್ಟರೂ ಹೋಗೋಕೆ ರೆಡಿ ಎಂಬುದು ರಾಗಿಣಿಯ ಸ್ಪಷ್ಟನುಡಿ. ಸಿಎಂ ಆಗ್ತಿನೋ ಇಲ್ವೋ ಸ್ಲಿಮ್ ಅಂತೂ ಆಗಿಬಿಟ್ಟೆ!
ನೋಡಿ, ನಾನು ರಾಜಕೀಯಕ್ಕೆ ಹೋಗ್ತಿàನೋ, ಅಲ್ಲಿ ನೆಲೆ ಕಾಣಿ¤àನೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಲಿಮ್ ಅಂತೂ ಆಗಿದ್ದೇನೆ. ಎಲ್ಲರೂ ನನ್ನನ್ನು ನೋಡಿ, ಮೊದಲು ತೂಕ ಇಳಿಸಿಕೋ, ಸ್ವಲ್ಪ ವಕೌìಟ್ ಮಾಡು ಅಂತೆಲ್ಲಾ ಹೇಳುತ್ತಿದ್ದರು. ಆದರೆ, ನನಗೆ ಮಾತ್ರ ಆ ಬಗ್ಗೆ ಹೆಚ್ಚು ಗಮನವಿರಲಿಲ್ಲ. ಒಂದು ದಿನ ಕನ್ನಡಿ ನನ್ನನ್ನು ಹೆದರಿಸಿದ್ದು ನಿಜ. ಆಗಲೇ ನನಗೆ ಗೊತ್ತಾಗಿದ್ದು, ಆ ಹಳೆಯ ರಾಗಿಣಿ ನಾನೇನಾ ಅಂತ. ನಿಜವಾಗಿಯೂ ನನಗೆ ಕನ್ನಡಿ ದೊಡ್ಡ ಶಾಕ್ ಕೊಟ್ಟಿದ್ದು ನಿಜ. ಫೈಟ್ ಸೀನ್‌ನ ಚಿತ್ರೀಕರಣ ಮುಗಿಸಿಕೊಂಡು ಅದೇ ಕಾಸ್ಟೂéಮ್‌ನಲ್ಲಿ ಮನೆಗೆ ಬಂದಾಗ, ಸಡನ್ ಆಗಿ ನಾನು ಕನ್ನಡಿ ಮುಂದೆ ನಿಂತುಕೊಂಡು ಹಾಗೊಮ್ಮೆ ನನ್ನನ್ನು ನಾನು ನೋಡಿಕೊಂಡೆ. ಆಗ ನಿಜವಾಗಿಯೂ ನನಗೆ ಗಾಬರಿಯಾಯ್ತು. ಆ ರಾಗಿಣಿ ನಾನೇನಾ ಎಂಬ ಪ್ರಶ್ನೆಯೂ ಕಾಡತೊಡಗಿತು. ಹೆಂಗಿದೆ ನಾನು, ಹೆಂಗಾಗಿದ್ದೇನೆ ಅಂತ ಬೇಜಾರ್ ಆಯ್ತು. ಅಷ್ಟೊಂದು ದಪ್ಪ ಆಗಿದ್ದೆ. ಲೈಫ್ನಲ್ಲಿ ಇದೆಲ್ಲಾ ಕಾಮನ್ ಅನಿಸ್ತು. ಸೋಲು-ಗೆಲುವು ಹೇಗೆ ಸಹಜವೋ, ಹಾಗೆಯೇ, ಸಣ್ಣ-ದಪ್ಪ ಕೂಡ ಸಹಜ ಅಂದುಕೊಂಡೆ. ಆದರೆ, ನನ್ನ ನೋಡಿದವರೆಲ್ಲರೂ ನನ್ನ ಸ್ಲಿಮ್ ಬಗ್ಗೆಯೇ ಮಾತಾಡುತ್ತಿದ್ದರು. ಅಷ್ಟಕ್ಕೂ ನಾನು ಹಾಗೆ ದಪ್ಪಗಾಗಲು ಕಾರಣವೆಂದರೆ, “ರಣಚಂಡಿ’ ಚಿತ್ರದ ಶೂಟಿಂಗ್ ವೇಳೆ ನನಗೆ ಕಾಲು ಗಾಯವಾಗಿತ್ತು. ಆಗ, ಬಹಳ ದಿನಗಳ ಕಾಲ ಬೆಡ್‌ರೆಸ್ಟ್ ಮಾಡಿದೆ. ಮೆಡಿಸನ್ ತಗೊಂಡು, ಮಲಗುವುದು, ತಿನ್ನುವುದು ನನ್ನ ಕೆಲಸವಾಗಿತ್ತು. ವಕೌìಟ್ ಕೂಡ ಬಿಟ್ಟುಬಿಟ್ಟಿದ್ದೆ. ನನಗೆ, ಸಣ್ಣಗಿದ್ದರೇನೇ ನಾಯಕಿ ಅನಿಸಿಕೊಳ್ಳೋದು ಎಂಬ ಫೀಲ್ ಇರಲಿಲ್ಲ. ಆರೋಗ್ಯವಾಗಿದ್ದರೆ ಸಾಕಷ್ಟೇ ಎಂಬ ಯೋಚನೆ ನನ್ನದು. ಆದರೆ, ಅದೇಕೋ ಏನೋ, ಕನ್ನಡಿ ನನ್ನನ್ನು ಹೆದರಿಸುವಂತೆ ಮಾಡಿತು. ಹೀಗೇ ದಪ್ಪವಾಗುತ್ತಿದ್ದರೆ, ಕೆರಿಯರ್‌ಗೂ ಪೆಟ್ಟು ಬೀಳಬಹುದು ಅಂತ ನಿರ್ಧರಿಸಿ, ವಕೌìಟ್ ಮಾಡೋಕೆ ಶುರುಮಾಡಿದೆ. ಅದರಲ್ಲೂ ನನಗೆ ಬೇಕಾದ ವ್ಯಕ್ತಿಯೊಬ್ಬರು, ನೀನು ಸಣ್ಣ ಆಗಲೇಬೇಕು ಅಂತ ಹೇಳಿದರು. ಆಗಲೇ ನಾನು ನಿರ್ಧರಿಸಿ, ಇಷ್ಟೊಂದು ಸ್ಲಿಮ್ ಆಗಿದ್ದೇನೆ ಎಂದು ಸಣ್ಣದ್ದೊಂದು ಸೆ¾„ಲ್ ಕೊಡುತ್ತಾರೆ ರಾಗಿಣಿ. ಕೈಯಲ್ಲಿನ್ನೂ ಸಿನಿಮಾಗಳಿವೆ…
“ನಾನೇ ನೆಕ್ಸ್ಟ್ ಸಿಎಂ’ ರಿಲೀಸ್‌ಗೆ ರೆಡಿಯಾಗಿದೆ. “ರಣಚಂಡಿ’ ಕೂಡ ಪ್ರೇಕ್ಷಕರ ಮುಂದೆ ಬರಬೇಕಿದೆ. ಈ ನಡುವೆ “ಅಮ್ಮ’ ಮೂರು ಭಾಷೆಯ್ಲಿ ತಯಾರಾಗಿದೆ. ಆದರೆ, ಆ ಸಿನಿಮಾ ಎಲ್ಲಿಯವರೆಗೆ ಬಂದಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇದರ ನಡುವೆಯೇ ರಾಗಿಣಿ ಅವರು “ಹುಲಿದೇವರ ಕಾಡು’ ಎಂಬ ಚಿತ್ರಕ್ಕೂ ಸೈ ಅಂತ ಗ್ರೀನ್‌ಸಿಗ್ನಲ್ ಕೊಟ್ಟರು. ಆ ಚಿತ್ರ ಮುಹೂರ್ತ ನಡೆದಿತ್ತು. ಆದರೆ, ಎಲ್ಲಿಯವರೆಗೆ ಬಂದಿದೆ ಎಂಬುದು ಇನ್ನೂ ಗೊತ್ತಿಲ್ಲ. ಇದರ ಮಧ್ಯೆ ರಾಗಿಣಿಗೆ ತೆಲುಗು, ತಮಿಳು ಚಿತ್ರಗಳಿಂದಲೂ ಅವಕಾಶ ಬರುತ್ತಿವೆಯಂತೆ. ಆದರೆ, ರಾಗಿಣಿ ಮಾತ್ರ, ಸಿನಿಮಾ ಸಂಖ್ಯೆ ಹೆಚ್ಚಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಒಳ್ಳೆಯ ಕಥೆ, ಪಾತ್ರ ಇದ್ದರೆ ಮಾತ್ರ, ಸಿನಿಮಾ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಅದೇನೆ ಇರಲಿ, ರಾಗಿಣಿ ಸಿನಿಮಾ ಬಂದು ಬಹಳ ದಿನಗಳವೇ ಆಗಿಹೋಗಿವೆ. ಇಗ ‘ಸಿಎಂ’ ಸಿನಿಮಾ ಮೇಲೆ ರಾಗಿಣಿಗೆ ಹೆಚ್ಚು ವಿಶ್ವಾಸ. ಆ ಚಿತ್ರ ಅವರ ರಾಜಕೀಯ ರಂಗಕ್ಕೆ ಫ್ಲಾಟ್‌ಫಾರ್ಮ್ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣುವ ಸಿನಿಮಾ ಆದರೆ ಸಾಕು ಎಂಬ ಮಾತುಗಳು ಹರಿದಾಡುತ್ತಿವೆ. ಬರಹ: ವಿಜಯ್ ಭರಮಸಾಗರ; ಚಿತ್ರಗಳು: ಮನು ಮತ್ತು ಸಂಗ್ರಹ