ಅಭಿವೃದ್ಧಿಗೆ ಕಾರಣವಾಯಿತು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
Advertisement
ಮಾದರಿ ವಾರ್ಡ್ ರಚನೆ 2017-18ರಡಿ ಕೆಮ್ಮಿಂಜೆ- ಚಿಕ್ಕಮುಟ್ನೂರು ವಾರ್ಡ್‌ನ ನೆಕ್ಕರೆ ಅಂಗನವಾಡಿಯ ಜೀರ್ಣೋದ್ಧಾರ ಕೆಲಸದ ಉದ್ಘಾಟನೆ ಹಾಗೂ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ, ಪುಟಾಣಿಗಳಲ್ಲಿ ಆತ್ಮವಿಶ್ವಾಸ, ಇಚ್ಛಾಶಕ್ತಿ ತುಂಬುವ ಕೆಲಸ ಆಗಬೇಕು. ಸಮಾಜಕ್ಕೆ ಉತ್ತಮ ಕೆಲಸ
ಸಿಗುವ ಜತೆಗೆ ಮಕ್ಕಳಲ್ಲೂ ಇಂತಹ ಕೆಲಸದ ಜಾಗೃತಿ ಮೂಡಿಸಬೇಕು. ಆಗ ಸಮಾಜಕ್ಕೆ ಮಾದರಿಯಾಗುವ ಯುವಕರು ಮೂಡಿಬರುತ್ತಾರೆ. ಉತ್ತಮ ಸಂಸ್ಕೃತಿ, ಸಂಸ್ಕಾರ ಇರುವ ಯುವಜನತೆ ದೇಶಕ್ಕೆ ಬೇಕಾಗಿದೆ. ಈ ದಿಶೆಯಲ್ಲಿ ಅಂಗನವಾಡಿ ನವೀಕರಣ ಮಾಡಿರುವುದು ಆದರ್ಶ ಕೆಲಸ ಎಂದರು ಶ್ಲಾಘಿಸಿದರು.
Related Articles
ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ, ಕೆಮ್ಮಿಂಜೆ-ಚಿಕ್ಕಮುಟ್ನೂರು ನಗರಸಭೆಯ ಉತ್ತಮ ವಾರ್ಡ್. ಮಾದರಿ ವಾರ್ಡ್‌ನ ಅಡಿ ಹಲವು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ರಸ್ತೆ ಬದಿ ಅಳವಡಿಸಿರುವ ಸೂಚನ ಫಲಕಗಳೇ ಇದಕ್ಕೆ ಸಾಕ್ಷಿ. ಹೆಚ್ಚಿನ ಅನುದಾನ ತರಿಸುವ ಜತೆಗೆ ಕೆಲಸಗಳು ನಡೆಯುತ್ತಿದೆ. ಊರವರೇ ಒಗ್ಗಟ್ಟಿನಿಂದ
ಅಂಗನವಾಡಿ ನಿರ್ಮಿಸಿರುವುದು ಉತ್ತಮ ಕಾರ್ಯ ಎಂದರು.
Advertisement
ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ಮಾದರಿ ವಾರ್ಡ್‌ನ ಪ್ರೇರಕ ಶಕ್ತಿ ವಂ| ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ. ಪುಟಾಣಿ ಮಕ್ಕಳು ಹೆಜ್ಜೆ ಇಡುವ ಈ ಅಂಗನವಾಡಿ ಉಜ್ವಲವಾಗಲಿ ಬೆಳಗಲಿ ಎಂದು ಆಶಿಸಿದರು.
ಸಹಭಾಗಿತ್ವ ಅಗತ್ಯನಗರಸಭೆ ಸದಸ್ಯ ಮಹಮ್ಮದಾಲಿ ಮಾತನಾಡಿ, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 38 ಅಂಗನವಾಡಿಗಳಿವೆ. ಇದರಲ್ಲಿ 34 ಅಂಗನವಾಡಿಗಳೂ ನಾದುರಸ್ತಿಯಲ್ಲಿದೆ. ಇದರ ಮೇಲ್ವಿಚಾರಣೆ ವಹಿಸಿಕೊಳ್ಳಬೇಕಾದ ಸಿಡಿಪಿಒ ಇಲಾಖೆಗೆ
ಅನುದಾನದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯ
ನಡೆಯಬೇಕಾಗಿದೆ. ಜನರ ಸಹಕಾರ ಸಿಕ್ಕಿದರೆ ಮಾತ್ರ, ಅಂಗನವಾಡಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಮ್ಮಾನ
25 ವರ್ಷಗಳ ಹಿಂದೆ ಅಂಗನವಾಡಿ ನಿರ್ಮಾಣದ ಹೊಣೆ ಹೊತ್ತಿದ್ದ ಇಗ್ನೇಶಿಯಸ್ ಡಿಕುನ್ಹಾ, ಅಂಗನವಾಡಿ ಜೀರ್ಣೋದ್ಧಾರದ ಮುಂದಾಳತ್ವ ವಹಿಸಿದ್ದ ಸಿರಿಲ್ ರೋಡ್ರಿಗಸ್, ಕಾಮಗಾರಿ ವೇಳೆ 1 ವರ್ಷ ಎರಡು ತಿಂಗಳು ಅಂಗನವಾಡಿ ಪುಟಾಣಿಗಳಿಗೆ ಮನೆಯಲ್ಲೇ ವ್ಯವಸ್ಥೆ ಮಾಡಿದ ಜೋಸೆಫ್ ಸೆರಾವೊ ಅವರನ್ನು ಇದೇ ಸಂದರ್ಭ ಸಮ್ಮಾನಿಸಲಾಯಿತು. ಸ್ಥಳೀಯ ನಗರಸಭೆ ಸದಸ್ಯ ಮುಕೇಶ್ ಕೆಮ್ಮಿಂಜೆ ಅಧ್ಯಕ್ಷತೆ ವಹಿಸಿದ್ದರು.