Advertisement

ಮತದಾರರ ಪಟ್ಟಿ ತಿದ್ದುಪಡಿಗೆ ಸೂಕ್ತ ಕಾರಣ ಅಗತ್ಯ: ರೇಣುಕಾಪ್ರಸಾದ್‌

05:45 AM Jul 20, 2017 | Team Udayavani |

ಉಳ್ಳಾಲ: ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಸಹಿತ  ಶಾಶ್ವತವಾಗಿ ವಲಸೆ ಹೋದವರ ಮತ್ತು ನಿಧನ ಹೊಂದಿದವರ ಹೆಸರನ್ನು  ಪಟ್ಟಿಯಿಂದ ತೆಗೆಯುವಾಗ ಬೂತ್‌ ಮಟ್ಟದಲ್ಲಿ ಪರಿಷ್ಕರಣೆ ಮಾಡಲು ತೆರಳುವ ಪಿಎಲ್‌ಎಗಳು ಹೊಸ ಅರ್ಜಿ ನಮೂನೆಯಲ್ಲಿ ಸರಿಯಾದ ಕಾರಣವನ್ನು ನೀಡಬೇಕು.  ಜತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಅವರ ಮೊಬೈಲ್‌ ನಂಬರ್‌ಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸಹಾಯಕ ಆಯುಕ್ತ ರೇಣುಕಾಪ್ರಸಾದ್‌ ತಿಳಿಸಿದರು.

Advertisement

ಚುನಾವಣಾ ಆಯೋಗದ ಆದೇಶ ದಂತೆ 18-21ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮತದಾರರ ಪಟ್ಟಿಗಳಿಂದ ಹೆಸರು ತೆಗೆದು ಹಾಕಲು ಹಾಗೂ ಮತದಾರರ ಪಟ್ಟಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕುರಿತು ಸಹಾಯಕ ಆಯುಕ್ತರ ಉಸ್ತುವಾರಿಯಲ್ಲಿ ಉಳ್ಳಾಲ ನಗರಸಭಾ ಸಭಾಂಗಣದಲ್ಲಿ ಉಳ್ಳಾಲ ವ್ಯಾಪ್ತಿಯ ಎಲ್ಲ ಬೂತ್‌ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಪಿಎಲ್‌ಎಗಳು ತಮ್ಮೊಂದಿಗೆ ಸ್ಥಳೀಯ ಏಜೆಂಟರ ಸಹಕಾರ ಪಡೆಯಬಹುದು. ಹೊಸ ಅರ್ಜಿಯಲ್ಲಿ ಹೆಸರು ನಮೂದಿಸು ವಾಗ ಅರ್ಜಿ ಸಮರ್ಪಕವಾಗಿದೆಯಾ ಅಥವಾ ಮತದಾರರ ಅರ್ಜಿ ತಿರಸ್ಕಾರ ಮಾಡುವಾಗ ಯಾವ ಕಾರಣಕ್ಕೆ ತಿರಸ್ಕಾರ ಮಾಡಲಾಗಿದೆ ಅದಕ್ಕೆ ಕಾರಣಗಳನ್ನು ಅರ್ಜಿಯಲ್ಲಿ ನೀಡಬೇಕು.ಎಲ್ಲ ವಿವರವನ್ನು ಪಡೆದ ಬಳಿಕ ಅರ್ಜಿಯನ್ನು ನೀಡಬೇಕು.ಪುನಃ ಅದ ನ್ನು ಪಡೆಯುವ ಮೊದಲು ಸಾವಕಾಶವಾಗಿ ಪರಿಶೀಲನೆ ನಡೆಸಿದರೆ ಯಾವುದೇ ಸಮಸ್ಯೆ ಬರಲು ಸಾದ್ಯವಿಲ್ಲ ಎಂದರು.

ಉಳ್ಳಾಲ  ನಗರ ಸಭಾ ಸದಸ್ಯ ಬಾಝಿಲ್‌ ಡಿ’ ಸೋಜಾ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಮತ್ತು ವಿದೇಶದಲ್ಲಿರುವವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹಾಕಬೇಕು ಎಂದರು. 

ಸದಸ್ಯ ಮಹಮ್ಮದ್‌ ಮುಕ್ಕಚ್ಚೇರಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಿಧನ ಹೊಂದಿದವರ ಹೆಸರು ಕಳೆದ ಹಲವು ವರ್ಷಗಳಿಂದ ಉಳಿದು ಕೊಂಡಿದ್ದು, ಅದರಿಂದಾಗಿ ಹಲವು ಸಮಸ್ಯೆಯಾಗುತ್ತವೆ. ಕೆಲವು ಕಡೆ 8 ವರ್ಷಗಳಿಂದ ವಾಸವಿಲ್ಲದಿದ್ದರೂ ಹೆಸರು  ಪಟ್ಟಿಯಲ್ಲಿದೆ ಎಂದರು.

Advertisement

ಅದಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತರು, ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಾಗ ಸ್ಥಳೀಯರ ಮಾಹಿತಿ ಪಡೆದು ಅವರನ್ನು ಹಾಜರಾಗಿ ತೆಗೆದುಕೊಂಡರೆ ಸಮಸ್ಯೆ ಕಡಿಮೆ ಯಾಗುತ್ತದೆ. ಈ ನಿಟ್ಟಿನಲ್ಲಿ ಬೂತ್‌ ಮಟ್ಟದ ಏಜೆಂಟರು ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.
 
ಆಯೋಗದ ನಿರ್ದೇಶನದನ್ವಯ ವಿಶೇಷ ಆಂದೋಲನವನ್ನು  ಜು. 23ರಂದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಾಕಿ ಉಳಿದಿರುವ ಮತದಾರರ ಹೆಸರು ನೋಂದಣಿ ಮತ್ತು ಮತದಾರರ ಪಟ್ಟಿಗಳಿಂದ ಹೆಸರು ತೆಗೆದು ಹಾಕಲು ಹಾಗೂ ಮತದಾರರ ಪಟ್ಟಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕುರಿತು ಆಯಾಯ ಮತಗಟ್ಟೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನಗರಸಭಾ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್‌ ಕಲ್ಲಾಪು, ಕ್ಷೇತ್ರ ಶಿಕ್ಷಣಾಧಿಕಾರಿ, ಅಂಗನವಾಡಿ ಮೇಲ್ವಿಚಾರಕಿ, ನಗರಸಭಾ ಸದಸ್ಯರು, ಗ್ರಾಮ ಕರಣಿಕರು, ಬೂತ್‌ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮತದಾರರ ಮೊಬೈಲ್‌ ಸಂಖ್ಯೆ   ನಮೂದಿಸಲೇಬೇಕು.  ಆಧಾರ್‌ ಕಾರ್ಡ್‌ಗೆ ನೀಡಿರುವ ಮೊಬೈಲ್‌ ಸಂಖ್ಯೆ ನೀಡಿದರೆ ಉತ್ತಮ. ಮುಂದಿನ ದಿನಗಳಲ್ಲಿ  ಮತದಾನ ಸಂದರ್ಭದಲ್ಲಿ ಆಧಾರ್‌ ಲಿಂಕ್‌ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  
– ರೇಣುಕಾ ಪ್ರಸಾದ್‌
ಸಹಾಯಕ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next