Advertisement

ವಾಸ್ತವದ ಅಂಶ ಜನಮನದಲ್ಲಿ ತುಂಬಿದ ನಿಜ ಶರಣ: ಯರನಾಳ

05:56 PM Jan 22, 2022 | Team Udayavani |

ಗದಗ: ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯನವರ ಸೇವಾ ಟ್ರಸ್ಟ್‌, ಉಡಚಮ್ಮದೇವಿ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 902ನೇ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.

Advertisement

ಉಪನ್ಯಾಸ ನೀಡಿದ ಡಾ| ಗಣೇಶ ಸುಲ್ತಾನಪುರ, 12ನೇ ಶತಮಾನದ ಬಸವಣ್ಣವರ ಅನುಯಾಯಿ ಶರಣ ಸಾವಿರಾರು ವರ್ಷಗಳಿಂದ ಧರ್ಮ ದೇವರುಗಳ ಬಗ್ಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನು ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರವಾದ ವಾಸ್ತವದ ಅಂಶಗಳನ್ನು ಜನಮನದಲ್ಲಿ ಮೂಡಿಸಿದ್ದರು.

ಜಿಲ್ಲಾಧ್ಯಕ್ಷ ಬಿ.ಎನ್‌.ಯರನಾಳ ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ವಿಧ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗುವುದು. ಸಮುದಾಯದ ಜನರು ಕಟ್ಟಡ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಸಿ.ಬಿ.ಬಾರಕೇರ ಮಾತನಾಡಿ, ನಮ್ಮ ಸಮುದಾಯ ಶಿಕ್ಷಣದಲ್ಲಿ ಸ್ವದ್ಯೋಗದಲ್ಲಿ ಮುಂದುವರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯ ಬಳಸಿಕೊಳ್ಳಲು ಜಾಗೃತರಾಗಬೇಕು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಜೆ.ಬಿ.ಗಾರವಾಡ ಮಾತನಾಡಿ, ಜಿಲ್ಲಾ ಸಂಘಟನೆಯಿಂದ ಈಗಾಗಲೇ ಸಾಕಷ್ಟು ಕಾರ್ಯ ಚಟುವಟಿಕೆಗಳನ್ನು ಮಾಡಲಾಗಿದ್ದು, ಮಹಿಳಾ ಘಟಕ, ಯುವ ಘಟಕ ಹಾಗೂ ನೌಕರರ ಘಟಕಗಳನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.

ಈ ಸಂರ್ದರ್ಭದಲ್ಲಿ ಚಂದ್ರಶೇಖರ ಪೂಜಾರ, ಕೆ.ಎನ್‌ ಸುಣಗಾರ, ರವಿಕುಮಾರ ಸವಣ್ಣೂರ, ವಾಸಣ್ಣ ಲಕ್ಷೆಶ್ವರ, ಉಮೇಶ ಪೂಜಾರ, ಸುಭಾಷ ಕದಡಿ, ಸಂತೋಷ ಪೂಜಾರ, ರಾಮಣ್ಣ ಲಕ್ಷೆಶ್ವರ, ಅರ್ಜುನ ಪೂಜಾರ, ಮಾಲತೇಶ ಬಾರ್ಕಿ, ನಾಗರಾಜ ಗುಡಿಸಾಗರ, ರವಿ ಬಾರಕೇರ, ಶರಣಪ್ಪ ಅಬ್ಬಿಗೇರಿ, ವಿ.ಜಿ. ಬಾರಕೇರ, ಫಕ್ಕೀರಪ್ಪ ಲಕ್ಷೆಶ್ವರ, ಚಾಮರಾಜ ಪೂಜಾರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next