Advertisement
ಅಭಿಪ್ರಾಯ 01: ಎಂಜಿನಿಯರ್, ವೈದ್ಯಕೀಯ, ಪತ್ರಿಕೋದ್ಯಮ ಮೊದಲಾದ ವೃತ್ತಿ ಶಿಕ್ಷಣದಲ್ಲಿ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗಬೇಕೇ ವಿನಾಃ ಹೆಚ್ಚು ಪೂರೈಕೆ ಸಲ್ಲದು. ಸದ್ಯ ನಮ್ಮಲ್ಲಿ ಜನಸಂಖ್ಯೆ ಹೆಚ್ಚಾದ ಪರಿಣಾಮ ಹೆಚ್ಚು ಪದವೀಧರರರು ಹೊರಗೆ ಬರುತ್ತಿದ್ದಾರೆ. ಶೈಕ್ಷಣಿಕ ವಲಯ ಹಾಗೂ ಔದ್ಯೋಗಿಕ ವಲಯ ನಿರಂತರ ಸಂಪರ್ಕದಲ್ಲಿದ್ದರೆ ಇದನ್ನು ನಿಭಾಯಿಸಿಬಹುದು.
Related Articles
Advertisement
ಅಭಿಪ್ರಾಯ 05: ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಸರಕಾರ ಹೆಚ್ಚು ಒತ್ತು ನೀಡಬೇಕು. ಯಾವುದೇ ವಸ್ತುಗಳು ಭಾರತದಲ್ಲೇ ಉತ್ಪಾದನೆ ಆಗುತ್ತದೆ ಎಂದರೆ ಅದರಿಂದಾಗಿ ಸ್ವದೇಶಿಗರೇ ಹೆಚ್ಚು ಉದ್ಯೋಗ ಅವಕಾಶಗಳನ್ನು ಪಡೆಯುತ್ತಾರೆ. ಅದರ ಜತೆಗೆ ದೇಶೀಯ ಉದ್ಯಮಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ.
ಅಭಿಪ್ರಾಯ 06: ಆರ್ಥಿಕವಾಗಿ ಸಬಲರಾಗಿರುವವರು ಸಮಾಜದಲ್ಲಿ ಹೇಗೋ ಒಂದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಬಡವರಿಗೆ ಮಾತ್ರ ಅಂತಹ ಪರಿಸ್ಥಿತಿ ಇಲ್ಲ. ಭ್ರಷ್ಟಾಚಾರ, ಲಂಚ ಬಾಕರು ಇರುವ ಸಮಾಜದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ಇದೆ. ರಾಜಕೀಯ ಬಲ, ಹಣಬಲ ಅಥವಾ ಇನ್ನಾವುದೇ ರೀತಿಯ ಪ್ರಭಾವ ಇರದವರು ತೆರೆಮರೆಯಲ್ಲೇ ಉಳಿದುಬಿಡುತ್ತಾರೆ. ಅಂತಹವರನ್ನು ಮುಂದೆ ತಂದು ಉದ್ಯೋಗ ಕಲ್ಪಿಸುವ ಕೆಲಸ ಸರಕಾರದ ವತಿಯಿಂದ ನಡೆದರೆ, ನಿರುದ್ಯೋಗವನ್ನು ಸಂಭಾಳಿಸಿಕೊಂಡು ಹೋಗಬಹುದು.
ಅಭಿಪ್ರಾಯ 07: ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಆದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ? ಓಡುತ್ತಿರುವ ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಉನ್ನತೀಕರಣಗೊಳ್ಳುತ್ತಿದೆಯೇ? ಎಂಬುದನ್ನು ಆಲೋಚಿಸಲೇಬೇಕಿದೆ. ಶಿಕ್ಷಣ ಪಡೆದವರೆಲ್ಲರೂ ಉದ್ಯೋಗಸ್ಥರಾಗುತ್ತಿಲ್ಲ, ಶಿಕ್ಷಣ ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಪೂರೈಸುವ ಬದಲು ಅಂಕಗಳಿಕೆಗೆ ಸೀಮಿತವಾಗುತ್ತಿದೆ ಎಂಬುದು ಕಹಿ ಸತ್ಯ.
ಅಭಿಪ್ರಾಯ 08: ಇಂದಿಗೂ ಹೆಚ್ಚಿನ ವಿದ್ಯಾರ್ಥಿಗಳು ಮನೆಯವರ ಇಚ್ಛೆಗಾಗಿ, ಅಂಕಗಳಿಕೆಗಾಗಿ ಓದುತ್ತಿದ್ದಾರೆಯೇ ವಿನಾ ತಮ್ಮ ಆಸಕ್ತಿ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಅರಿತು ಓದುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ತಳಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಿದರೆ ನಿರುದ್ಯೋಗ ಸಮಸ್ಯೆಯ ಪರಿಹಾರವಾಗಬಹುದು.
ಅಭಿಪ್ರಾಯ 09: ಯುವಜನತೆ ಹೆಚ್ಚಿರುವ ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೂಡಲೇ ಉದ್ಯೋಗ ಸಿಗುವಂತಹ ಸನ್ನಿವೇಶ ಸೃಷ್ಟಿಯಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಅರೆಕಾಲಿಕ ಉದ್ಯೋಗಗಳನ್ನು ಅವಲಂಬಿಸಿದರೆ ಓದಿನ ಜತೆಗೆ ದುಡಿಮೆಯೂ ಆಗುತ್ತದೆ. ಜತೆಗೆ ಅನುಭವವೂ ದೊರಕಿ, ಪ್ರಪಂಚ ಜ್ಞಾನವೂ ಹೆಚ್ಚುತ್ತದೆ. ಆದರೆ ವಿದ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಅಭಿಪ್ರಾಯ 10: ಉದ್ಯೋಗ ಎಂಬುದನ್ನು ಭಾರತೀಯರು ಹೇಗೆ ಪರಿಗಣಿಸುತ್ತಾರೆ ಎನ್ನುವುದೂ ಮುಖ್ಯ. ಭಾರತದ ಬೆನ್ನೆಲುಬು ಕೃಷಿ. ಆದರೆ ಕೃಷಿಯನ್ನು ಉದ್ಯೋಗ ಎಂದು ಪರಿಗಣಿಸುವ ಮನಸ್ಥಿತಿ ಬಹುತೇಕರಲ್ಲಿ ಇಲ್ಲ. ಯುವಕರು ಕೃಷಿಯಲ್ಲೇ ಮುಂದುವರಿಯುತ್ತೇವೆಂದು ಬಯಸಿದರೆ ಅವರನ್ನು ನಿರುದ್ಯೋಗಿಗಳಂತೆಯೇ ನೋಡಲಾಗುತ್ತದೆ.
ಜತೆಗೆ ಕೃಷಿಯಲ್ಲಿ ಪ್ರತೀ ತಿಂಗಳ ಅಂತ್ಯಕ್ಕೆ ಸಂಬಳ ಬಂದು ಬೀಳುವುದಿಲ್ಲವಾದ್ದರಿಂದ ಬಹುತೇಕರ ಪಾಲಿಗೆ ಅದು ಉದ್ಯೋಗ ಎನ್ನಿಸುವುದಿಲ್ಲ. ಕೃಷಿ ಮಾಡುವವರು ಕೃಷಿಯ ಜತೆ ಇನ್ನೊಂದು ಉದ್ಯೋಗವನ್ನು ಅವಲಂಬಿಸಬೇಕು ಎಂಬ ಅನಿವಾರ್ಯತೆಯನ್ನು ಹೋಗಲಾಡಿಸಿ ಕೃಷಿಗೆ ಪೂರ್ಣಪ್ರಮಾಣದ ಉತ್ತೇಜನ ನೀಡಬೇಕು. ಇದರಿಂದಾಗಿ ಕೃಷಿಯೂ ಉಳಿಯುತ್ತದೆ ಉದ್ಯೋಗದ ಸೃಷ್ಟಿಯೂ ಆಗುತ್ತದೆ.
ಅಭಿಪ್ರಾಯ 11: ಭಾರತೀಯರಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು ಮನಸ್ಥಿತಿ ದೂರವಾಗಬೇಕು. ಪ್ರತಿ ಕೆಲಸವೂ ಮುಖ್ಯ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೋ ಹಿಂಜರಿಕೆಯ ನೆಪವೊಡ್ಡಿ ಕೆಲಸದಿಂದ ವಂಚಿತರಾಗುವವರೂ ಇದ್ದಾರೆ. ಎಲ್ಲ ಉದ್ಯೋಗವೂ ಸಮಾನ ಎಂಬುದನ್ನು ಸಾರುವುದು ಅನಿವಾರ್ಯ.
ಚರ್ಚೆಯಲ್ಲಿ ಭಾಗವಹಿಸಿದವರು SDM ಕಾಲೇಜಿನ ವಿದ್ಯಾರ್ಥಿಗಳು: ಇತಿಹಾಸ್, ಶರತ್, ಶೃತಿ ಹೆಗಡೆ, ಪ್ರೀತಿ, ಸಂಧ್ಯಾ.
ನಿರೂಪಣೆ: ಸ್ಕಂದ ಆಗುಂಬೆ