Advertisement

ರೇಮೋ ಮೋಶನ್‌ ಪೋಸ್ಟರ್‌ ಬಂತು

11:18 AM Jan 05, 2020 | Team Udayavani |

ಪವನ್‌ ಒಡೆಯರ್‌ ನಿರ್ದೇಶನದ “ರೇಮೊ’ ಚಿತ್ರ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇದೆ. ಚಿತ್ರಕ್ಕೆ ಐಶಾರಾಮಿಯಾಗಿ ಕಾಣುವ ದೊಡ್ಡ ಗ್ಲಾಸ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಿದ್ದು ಗೊತ್ತೇ ಇದೆ. ಇನ್ನು, ತಮಿಳು ನಟ ಶರತ್‌ಕುಮಾರ್‌ ಆಗಮಿಸಿದ್ದು ಗೊತ್ತು. ಈಗ ಹೊಸ ಸುದ್ದಿಯೆಂದರೆ, ಚಿತ್ರದ ಮೋಷನ್‌ ಪೋಸ್ಟರ್‌ ಹೊರಬಂದಿದೆ. ಹೌದು, ಶುಕ್ರವಾರ ಸಂಜೆ ಹೊರಬಂದಿರುವ ಮೋಶನ್‌ ಪೋಸ್ಟರ್‌ಗೆ ಈಗ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Advertisement

ರಾಕ್‌ಸ್ಟಾರ್‌ ಲುಕ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣುತ್ತಿರುವ ನಾಯಕ ಇಶಾನ್‌ ಅವರ ಫೋಸ್‌ ಸಖತ್‌ ಕಿಕ್‌ ಕೊಡುವಂತಿದೆ. ಮೋಶನ್‌ ಪೋಷ್ಟರ್‌ ಜೊತೆಗೆ ಕೇಳಿಬರುವ ಹಿನ್ನೆಲೆ ಸಂಗೀತ ಕೂಡ ಅರ್ಜುನ್‌ ಜನ್ಯ ಅವರ ಹೊಸ ಮ್ಯಾಜಿಕ್‌ ಎನಿಸುವುದು ನಿಜ. ಒಟ್ಟಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಮೋಷನ್‌ ಪೋಸ್ಟರ್‌ನಲ್ಲಿ ಇಶಾನ್‌ ಪಕ್ಕಾ ಕ್ಲಾಸ್‌ ಹಾಗೂ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಆರ್‌.ಮನೋಹರ್‌ ನಿರ್ಮಾಣದಲ್ಲಿ ಅವರ ಸಹೋದರ ಇಶಾನ್‌ ನಟಿಸುತ್ತಿರುವ ಈ ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಚಿತ್ರದಲ್ಲಿ ಶರತ್‌ಕುಮಾರ್‌ ಅವರು ಇಶಾನ್‌ ತಂದೆ ಪಾತ್ರದಲ್ಲಿ ನಟಿಸಿದ್ದು, “ರಾಜಕುಮಾರ’ ಚಿತ್ರದ ಬಳಿಕ ಪುನಃ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಅವರದು ಇಲ್ಲಿ ಕರ್ನಾಟಕದ ಅತೀ ಶ್ರೀಮಂತ ವ್ಯಕ್ತಿಯ ಪಾತ್ರ. ಅದೇನೆ ಇರಲಿ, “ಗೂಗ್ಲಿ’ ನಂತರ ಮತ್ತೂಂದು ಲವ್‌ಸ್ಟೋರಿ ಸಿನಿಮಾ ಕೈಗೆತ್ತಿಕೊಂಡಿರುವ ಪವನ್‌ ಒಡೆಯರ್‌, ವಿಶೇಷ ಕಾಳಜಿಯಲ್ಲೇ ಈ ಚಿತ್ರ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next